ಅಕ್ರಮ ಜೂಜಾಟಕ್ಕೆ ಸಿಸಿಬಿ ಪೊಲೀಸರ ಧಾಳಿ 20 ಜನರ ಬಂಧನ

ಅಕ್ರಮ ಜೂಜಾಟಕ್ಕೆ ಸಿಸಿಬಿ ಪೊಲೀಸರ ಧಾಳಿ 20 ಜನರ ಬಂಧನ

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಹೇಮಾವತಿ ಬಿಲ್ಡಿಂಗ್ ನ ಒಂದನೇ ಮಹಡಿಯಲ್ಲಿರುವ ಮಿಲೇನಿಯಂ ರಿಕ್ರಿಯೇಶನ್ ಕ್ಲಬ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಇಸ್ಪೀಟ್ ಎಲೆಯಿಂದ ಅಂದರ್-ಬಾಹರ್ ಎಂಬ ಜೂಜಾಟವನ್ನು ನಡೆಯುತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಸದ್ರಿ ಕ್ಲಬ್ ಗೆ ಧಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ಒಟ್ಟು 20 ಜನರನ್ನು ಬಂಧಿಸಿ ಜೂಜಾಟದಲ್ಲಿ ಸಂಗ್ರಹವಾಗಿದ್ದ ನಗದು 1,10,700/- ರೂಪಾಯಿ ಹಾಗೂ ಜೂಜಾಟಕ್ಕೆ ಉಪಯೋಗಿಸಿದ್ದ ಮೂರು ಮರದ ಟೇಬಲ್ ಗಳು ಮತ್ತು 20 ಚಯರ್ ಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಪೊಲೀಸ್ ಆಯುಕ್ತರ ಆದೇಶದಂತೆ, ಪೊಲೀಸ್ ಉಪ-ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಪೊಲೀಸ್ ಉಪ-ಆಯುಕ್ತರು ಅಪರಾಧ ಮತ್ತು ಸಂಚಾರ ರವರ ಮಾರ್ಗದರ್ಶನ ದಂತೆ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್ಐ ಶ್ಯಾಮ್ ಸುಂದರ್.ಹೆಚ್.ಎಂ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Please enter your comment!
Please enter your name here