ಅಜಾಗರುಕತೆಯಿಂದ ವಾಹನ ಚಾಲನೆ ಫೋಟೊ ತೆಗೆದು ವಾಟ್ಸಾಪ್ ಮಾಡಿ – ಅಣ್ಣಾಮಲೈ ಹೊಸ ಪ್ರಯೋಗ

Spread the love

ಅಜಾಗರುಕತೆಯಿಂದ ವಾಹನ ಚಾಲನೆ ಫೋಟೊ ತೆಗೆದು ವಾಟ್ಸಾಪ್ ಮಾಡಿ – ಅಣ್ಣಾಮಲೈ ಹೊಸ ಪ್ರಯೋಗ

ಉಡುಪಿ: ಸಂಚಾರಿ ವಾಹನ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಅವರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಇತರೇ ಘನ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿರುವುದಾಗಿ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದಿರುತ್ತದೆ.ಇದರಿಂದ ಅಪಘಾತಗಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವುದಲ್ಲದೇ ಸಾರ್ವಜನಿಕರಿಗೂ ಕೂಡಾ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿರುತ್ತದೆ.

sp-annamalai-udupiಆದುದರಿಂದ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಇತರ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿದ್ದು ಕಂಡು ಬಂದಲ್ಲಿ ಸಾರ್ವಜನಿಕರು ವಾಟ್ಸಾಪ್‌ ಸಂಖ್ಯೆ 9480805400 ಗೆ ಸದ್ರಿ ವಾಹನದ ನಂಬರ್‌ ನೊಂದಿಗೆ ಪೋಟೋ ತೆಗೆದು ಕಳುಹಿಸಿದಲ್ಲಿ ಸದ್ರಿ ವಾಹನ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಬುಧವಾರದಂದು ಜರುಗಿದ ರಸ್ತೆ ಸುರಕ್ಷತೆ ಕುರಿತಾದ ಕಾರ್ಯಕ್ರಮವೊಂದರಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಫಘಾತಗಳಿಂದ ಆಗುತ್ತಿರುವ ಸಾವು ನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅಣ್ಣಾಮಲೈ ಅಫಘಾತ ನಿಯಂತ್ರಣ ನಿಟ್ಟಿನಲ್ಲಿ ಹೊಸ ಪ್ರಯೋಗವನ್ನು ಮಾಡಲು ಹೊರಟಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Spread the love