ಅಜೆಕಾರಿನಲ್ಲಿ ಹೈ ಟ್ಯಾಲೆಂಟ್ಸ್ ಶೋ ಮಕ್ಕಳ ಪ್ರತಿಭಾ ಪ್ರದರ್ಶನ, ಗೌರವಾರ್ಪಣೆ

ಅಜೆಕಾರು: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ 3 ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಉಭಯ ಜಿಲ್ಲೆಗಳ ಪ್ರತಿಭೋತ್ಸವ ನಡೆಯಲಿದ್ದು ಖ್ಯಾತ ಬಾಲಕಲಾವಿದೆ ಅಯನಾ.ವಿ..ರಮಣ್ ಅಕ್ಟೋಬರ್ 21 ರಂದು ಉದ್ಘಾಟಿಸಲಿದ್ದಾರೆ.

ಸಿನಿಮಾ ನಾಯಕಿರಾದ ಅಶ್ವಿತಾ ನಾಯಕ್, ರಕ್ಷಾ ಆರ್ ಶೆಣೈ, ಮೊಹಿರ್ ಕೊಡವೂರ್, ಯುವ ಪತ್ರಕರ್ತ ಸಂಪತ್ ಜೈನ್ ನೂರಾಲ್‍ಬೆಟ್ಟು ಮತ್ತು 27 ನೇ ಮಕ್ಕಳಧ್ವನಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಹುಲ್ ಎಸ್.ಎಂ ಮೊದಲಾದವರು ಅತಿಥಿಗಳಾಗಿರುವರು.

ವಿವಿಧ ಸ್ಪರ್ಧೆಗಳಲ್ಲಿ ಗಮನಸೆಳೆದ ಪ್ರತಿಭಾನ್ವಿತರಾದ ಹರ್ಷಾ.ಯು ಕೋಟ್ಯಾನ್ ಮೂಡುಬಿದಿರೆ, ಪಂಚಮಿ ಮಾರೂರು, ಸಂಹಿತಾ..ಡಿ ಮಂಗಳೂರು, ಆರಾಧನಾ ಎಂ..ಕೆ ಮಂಗಳೂರು, ವೀಕ್ಷಣ್ ಆರ್ ಆಚಾರ್ಯ ಉಡುಪಿ, ಅವನಿ ಆರ್. ಉಪಾಧ್ಯಾಯ ಕಾರ್ಕಳ, ಪೌಜಿಯಾ ದೆಪ್ಪುತ್ತೆ, ಪ್ರೇಮಾ ಹಿರೇಮಾಜಿ ಬಾಗಲಕೋಟೆ, ರಾಜ್‍ಕುಮಾರ್ ಮಣಿಪುರ, ಪ್ರೇರಿತ್ ಎಸ್.ಕೆ.ಹೆಬ್ರಿ, ಸಂದೀಪ್ ಶೆಟ್ಟಿ ಮಾರೂರು, ಯಶ್ ಜೋಗಿ ಉಡುಪಿ, ನಿತೇಶ್ ಕುಮಾರ್ ಮಾರ್ನಾಡ್ ಮೊದಲಾದವರು ತಮ್ಮ ಪ್ರತಿಭಾ ಪ್ರದರ್ಶನ ಮಾಡಲಿರುವರು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳಲ್ಲಿ ಗಮನ ಸೆಳೆಯುವ ಈ ಮಾದರಿಯ ಕಾರ್ಯಕ್ರಮವನ್ನು ಮಕ್ಕಳಿಗೆ ಪ್ರೇರಣೆಯಾಗಲಿ ಎಂಬ ದೃಷ್ಟಿಯಿಂದ  ಶೇಖರ ಅಜೆಕಾರು ಅವರ ಸಂಯೋಜನೆಯಲ್ಲಿ ನಡೆಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಸಂತೋಷ ಕುಮಾರ್ ತಿಳಿಸಿದ್ದಾರೆ.

Leave a Reply