ಅಟೋರಿಕ್ಷಾಗಳಲ್ಲಿ ಎಲ್‍ಇಡಿ ಜಾಹೀರಾತು: ಆರ್‍ಟಿಓ ಎಚ್ಚರಿಕೆ

ಅಟೋರಿಕ್ಷಾಗಳಲ್ಲಿ ಎಲ್‍ಇಡಿ ಜಾಹೀರಾತು: ಆರ್‍ಟಿಓ ಎಚ್ಚರಿಕೆ

ಮಂಗಳೂರು: ಮಂಗಳೂರು ನಗರ ಪ್ರದೇಶದಲ್ಲಿ ಓಡಾಡುವ ಕೆಲವು ಆಟೋರಿಕ್ಷಾಗಳ ಹಿಂಬದಿಯಲ್ಲಿ ಎಲ್‍ಇಡಿ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಈ ರೀತಿ ಜಾಹೀರಾತು ಅಳವಡಿಸಿರುವುದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಕೆಲವು ಆಟೋರಿಕ್ಷಾ ಮಾಲಕರು ಜಾಹೀರಾತುಗಳನ್ನು ತೆಗೆದಿರುವುದಿಲ್ಲ.

ಈ ರೀತಿ ಜಾಹೀರಾತು ಅಳವಡಿಸಿರುವುದು ರಸ್ತೆ ಸುರಕ್ಷತೆಗೆ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ವಾಹನ ತನಿಖೆ / ತಪಾಸಣೆ ಕೈಗೊಳ್ಳಲಾಗುವುದು. ಜಾಹೀರಾತನ್ನು ತೆಗೆದು ಹಾಕದೇ ಇದ್ದಲ್ಲಿ ಪರವಾನಿಗೆ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯುವ ತನಕ ಇಂತಹ ಜಾಹೀರಾತು ಅಳವಡಿಸಬಾರದೆಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಉಪಸಾರಿಗೆ ಆಯುಕ್ತರ ಪ್ರಕಟನೆ ತಿಳಿಸಿದೆ.

Leave a Reply