ಅಟೋರಿಕ್ಷಾದಲ್ಲಿ ಗಾಂಜಾ ಮಾರಾಟ-ಇಬ್ಬರ ಬಂಧನ

ಅಟೋರಿಕ್ಷಾದಲ್ಲಿ ಗಾಂಜಾ ಮಾರಾಟ-ಇಬ್ಬರ ಬಂಧನ

ಪುತ್ತೂರು: ಅಟೋರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಡಿಸಿಐಬಿ ಪೋಲಿಸರು ಪುತ್ತೂರು ದರ್ಬೆ ಪರಿಸರದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮುಕ್ರಂಪಾಡಿ ನಿವಾಸಿ ತಾರಾನಾಥ ಹಾಗೂ ಒಳತಡ್ಕ ನಿವಾಸಿ ಆಟೋಚಾಲಕ ಅಬ್ದುಲ್ ಹಮಿದ್ ಎಂದು ಗುರುತಿಸಲಾಗಿದೆ.

ganja-puttur-20160911

ಪುತ್ತೂರು ದರ್ಬೆ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಜಿಲ್ಲಾ ಪೋಲಿಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರ ನೇತೃತ್ವದ ವಿಶೇಷ ತಂಡ ಧಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 1ಕೆ.ಜಿ 800 ಗ್ರಾಂ ಗಾಂಜಾ, 4600ರೂ ನಗದು, 2ಮೊಬ್ಯೆಲ್ ಫೋನ್, ಹಾಗೂ ಆಟೋರಿಕ್ಷಾವನ್ನು ವಶಕ್ಕೆಪಡೆದು ಮುಂದಿನ ಕ್ರಮಕ್ಕೆ ಪುತ್ತೂರು ನಗರ ಠಾಣೆಗೆ ಹಾಜರು ಪಡಿಸಲಾಗಿದೆ.

ಈ ಕಾರ್ಯಚರಣೆಯಲ್ಲಿ ಡಿಸಿಐಬಿ ಇನ್ಸಪೆಕ್ಟರ್ ಎ.ಅಮಾನುಲ್ಲ, ಎಎಸ್ಐ ಸಂಜೀವ ಪುರುಷ, ಸಿಬ್ಬಂದಿಗಳಾದ ,ಇಕ್ಬಾಲ್, ಉದಯ ರೈ, ಡಿಸಿಬಿ ಸಿಬ್ಬಂದಿಗಳಾದ ಲಕ್ಷ್ಮಣ, ಇರ್ಷಾದ್, ಸತೀಶ, ಪ್ರದೀಪ್, ಚಾಲಕರಾದ ವಿಜಯ ಗೌಡ ಭಾಗವಹಿಸಿರುತ್ತಾರೆ

Leave a Reply