ಅಪಘಾತ ಗಾಯಾಳುಗಳಿಗೆ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ – ಆಸ್ಪತ್ರೆಗಳ ವಿವರ

ಅಪಘಾತ ಗಾಯಾಳುಗಳಿಗೆ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ – ಆಸ್ಪತ್ರೆಗಳ ವಿವರ
ಮ0ಗಳೂರು: ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ: ರಸ್ತೆ ಅಪಘಾತಕ್ಕೆ ತುತ್ತಾದ ವ್ಯಕ್ತಿಯನ್ನು ಆಘಾತದಿಂದ ಹೊರತರಲು ಹಾಗೂ ಪ್ರಾಣ ರಕ್ಷಣೆಗಾಗಿ ಅಪಘಾತದ ನಂತರದ 48 ಗಂಟೆಯೊಳಗೆ (Golden Hour) ತುರ್ತಾಗಿ ಅವಶ್ಯಕ ವೈದ್ಯಕೀಯ ಚಿಕಿತ್ಸೆಯನ್ನು ಆದ್ಯತೆ ಮೇಲೆ ಒದಗಿಸುವುದು ಈ ಯೋಜನೆಯ ಮುಖ್ಯ ಧ್ಯೇಯವಾಗಿರುತ್ತದೆ. ಸಂತ್ರಸ್ತ ವ್ಯಕ್ತಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ 48 ಗಂಟೆಯೊಳಗೆ ರೂ. 25 ಸಾವಿರದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.

harish-santwana

ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಾವಣೆಯಾಗಿರುವ ಸರ್ಕಾರಿ/ಖಾಸಗಿ ಆಸ್ಪತ್ರೆಗಳು ಇಂತಿವೆ: ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳಾ ಆಸ್ಪತ್ರೆ ಕದ್ರಿ, ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್, ಎ.ಜೆ. ಆಸ್ಪತ್ರೆ, ಗ್ಲೋಬಲ್ ಆಸ್ಪತ್ರೆ, ಹೈಲ್ಯಾಂಡ್ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ಕಣಚೂರು ಆಸ್ಪತ್ರೆ, ಕೆ.ಎಂ.ಸಿ. ಅತ್ತಾವರ, ಕೆ.ವಿ.ಜಿ. ಆಸ್ಪತ್ರೆ, ನೇತಾಜಿ ಆಸ್ಪತ್ರೆ ತೊಕ್ಕೊಟ್ಟು, ಪುತ್ತೂರು ಸಿಟಿ ಆಸ್ಪತ್ರೆ, ಎಸ್.ಡಿ.ಎಂ ಉಜಿರೆ, ಯುನಿಟಿ ಆಸ್ಪತ್ರೆ, ಅಶ್ವಿನಿ ಆಸ್ಪತ್ರೆ ನೆಲ್ಯಾಡಿ, ಸಹರಾ ಆಸ್ಪತ್ರೆ ತೊಕ್ಕೊಟ್ಟು, ಒಮೇಗಾ ಆಸ್ಪತ್ರೆ, ಯೆನಪೋಯ ಆಸ್ಪತ್ರೆ ಕೊಡಿಯಾಲ್‍ಬೈಲ್, ಎಲ್.ಎಂ. ಪಿಂಟೋ ಹೆಲ್ತ್ ಸೆಂಟರ್ ಬದ್ಯಾರ್, ಸುರಕ್ಷಾ ಆಸ್ಪತ್ರೆ ವಿಟ್ಲ, ಬೆನಕ ಆಸ್ಪತ್ರೆ, ಪುಷ್ಪರಾಜ್ ಆಸ್ಪತ್ರೆ ಕಲ್ಲಡ್ಕ, ಧನ್ವಂತರಿ ಆಸ್ಪತ್ರೆ ಉಪ್ಪಿನಂಗಡಿ, ಚೇತನ ಆಸ್ಪತ್ರೆ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಬೆಳ್ತಂಗಡಿ, ಪ್ರಗತಿ ಆಸ್ಪತ್ರೆ ಪುತ್ತೂರು, ಸೋಮಯಾಜಿ ಆಸ್ಪತ್ರೆ ಬಿ.ಸಿ.ರೋಡ್, ಅಭಯ ಆಸ್ಪತ್ರೆ ಬೆಳ್ತಂಗಡಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಸಮುದಾಯ ಆರೋಗ್ಯ ಉಪ್ಪಿನಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ . ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here