ಅಬುಧಾಬಿ: ಕೆಸಿಎಫ್ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ‘ಆರೋಗ್ಯ ಸಂವಾದ’

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಬುಧಾಬಿ ಸಾಂತ್ವನ ವಿಭಾಗದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ”ಆರೋಗ್ಯ ಸಂವಾದ” ಕಾರ್ಯಕ್ರಮವು ಇತ್ತೀಚಿಗೆ ಯೂನಿವರ್ಸಲ್ ಹಾಸ್ಪಿಟಲ್ ಸಭಾಂಗಣದಲ್ಲಿ ಜರುಗಿತು.

ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವ  ಮಂಗಳೂರು ಅರೋಗ್ಯ ಸಂವಾದದದ ಪ್ರಸ್ತುತತೆ ಬಗ್ಗೆ ಕ್ಷಕಿರಣ ಬೀರಿದರು. ಏಷ್ಯಾ ಖಂಡದಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಮಧುಮೇಹ ಕುರಿತಾದ ಸಾಮಾನ್ಯ ಜ್ಞಾನ, ಜನಜಾಗೃತಿ ಮತ್ತು ಅದನ್ನು ತಡೆಗಟ್ಟುವ ಅರಿವು ಜನಸಾಮಾನ್ಯರಲ್ಲಿ  ಮೂಡಿಸುವುದು ಕಾಲದ ಅಗತ್ಯತೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಾಚರಿಸುತ್ತಿರುವ ಕನ್ನಡಿಗರ ಸಂಘಟನೆಯಾದ ಕೆಸಿಎಫ್  ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಮಲೇಶ್ಯಾದಲ್ಲಿ ಕಾರ್ಯಚರಿಸುತಿದ್ದು ಶೀಘ್ರದಲ್ಲೇ ಬ್ರಿಟನ್ ಗೂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದರು.

ಪ್ರಾಸ್ತಾವಿಕ ಬಾಷಣ ಮಾಡಿದ ಕೆ ಸಿ ಎಫ್ ಐ ಎನ್ ಸಿ ಉಪಾಧ್ಯಕ್ಷ ಎಂ. ಎಸ್. ಎಂ. ಅಬ್ದುಲ್ ರಶೀದ್ ಝೈನಿ  ‘’ಧಾರ್ಮಿಕ ನೆಲೆಗಟ್ಟಿನಲ್ಲಿ ಶುಚಿತ್ವ ಮತ್ತು ಆರೋಗ್ಯದ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ‘Stomach is the mother of all disease’ ಸಮಕಾಲೀನ ತಾಳತಪ್ಪಿದ ಆಹಾರ ಕ್ರಮದಿಂದಾಗಿಯೇ ಹಲವು ರೋಗ ಗಳು ನಮ್ಮನ್ನು ಬೆಂಬಿಡದೆ ಕಾಡುವಂತಾಗಿದೆ  ಎಂದರು.

ಅರೋಗ್ಯ ಸಂವಾದ ರ ನೇತ್ರತ್ವ ವಹಿಸಿದ್ದ ಯೂನಿವರ್ಸಲ್ ಹಾಸ್ಪಿಟಲ್ ಕಾರ್ಪೊರೇಟ್ ಹೆಲ್ತ್ ಸರ್ವಿಸ್ ಕಾರ್ಯ ನಿರ್ವಾಹಕ ಡಾ. ರಾಜೀವ್ ಪಿಳ್ಳೈ ಮಾತನಾಡಿ  ಮದುಮೇಹ ರೋಗಲಕ್ಷಣ, ತಡೆಗಟ್ಟುವಿಕೆ ಮುನ್ನೆಚ್ಚರಿಕಾ ಕ್ರಮ, ರೋಗ ನಿರೋಧಕ ಗಳ ಸಮರ್ಪಕ ಬಳಕೆ, ಮಧು ಮೇಹ ಕುರಿತಾದ ತಪ್ಪು ಕಲ್ಪನೆ  ಕುರಿತಾದ ಕೂಲಂಕುಷ ಮಾಹಿತಿ ನೀಡಿದರು.

ಇತ್ತೀಚಿಗೆ ಮದುಮೇಹ ವಯಸ್ಸಿನ ಪರಿದಿಯಿಲ್ಲದೆ ಎಲ್ಲರನ್ನೂ ಕಾಡುತ್ತಿದೆ, ಸಕಾಲದಲ್ಲಿ ಅರೋಗ್ಯ ತಪಾಸಣೆ ಮತ್ತು  ವೈದ್ಯರು ಹೇಳುವ ಚಿಕಿತ್ಸೆ, ಆಹಾರ ಪದ್ಧತಿ ಮತ್ತು ವ್ಯಾಯಾಮದ  ಬಗ್ಗೆ ಅಸಡ್ಡೆ ತೋರದೆ ಅನುಸರಿಸಿದರೆ ಮಧುಮೇಹ ವನ್ನು ಬಗ್ಗು ಬಡಿಯಲು ಸಾಧ್ಯ. ಇಪ್ಪತ್ತೈದು ವಯಸ್ಸಿನ ಮೇಲ್ಪಟ್ಟವರು ಮೂರು ತಿಂಗಳಿಗೊಮ್ಮೆ ಮದುಮೇಹ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ತಪಾಸಣೆ ಮಾಡಿಕೊಳ್ಳುವು ಉತ್ತಮ ಎಂದು ಅಭಿಪ್ರಾಯಪಟ್ಟರು.

ಸಭಿಕರ ಸಂಶಯಗಳಿಗೆ ಉತ್ತರಿಸಿದ ಡಾ. ರಾಜೀವ್ ಪಿಳ್ಳೈ, ಕೆಸಿಎಫ್ ನ ಸಾಮಾಜಿಕ ಕಳಕಳಿಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಯೂನಿವರ್ಸಲ್ ಹಾಸ್ಪಿಟಲ್ ಮಧು ಮೇಹ ವನ್ನು  ದಿನಾಚರಣೆಯ ಅಂಗವಾಗಿ ಉಚಿತ ಮಧುಮೇಹ  ತಪಾಸಣಾ ಶಿಬಿರವನ್ನು ಆಯೋಜಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಕೆ ಸಿ ಎಫ್ ಅಬುಧಾಬಿ ಘಟಕದ ಸಾಂತ್ವನ ವಿಭಾಗದ ಅಧ್ಯಕ್ಷ ಮಹಮ್ಮದಲಿ ಬ್ರೈಟ್ ಮಾರ್ಬಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ ಸಿ ಎಫ್ ಅಬು ಧಾಬಿ ಘಟಕದ ಅಧ್ಯಕ್ಷ ಕೆ. ಹೆಚ್ ಮುಹಮ್ಮದ್  ಕುಞ್ಜಿ ಸಖಾಫಿ, ಕೋಶದಿಕಾರಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆ ಸಿ ಎಫ್ ಅಬು ಧಾಬಿ ಪ್ರಧಾನ ಕಾರ್ಯದರ್ಶಿ ಹಸೈನಾರ್ ಅಮಾನಿ ಅಜ್ಜಾವರ ಸ್ವಾಗತಿಸಿ, ಎಸ್ ಟೀಂ ಸಂಚಾಲಕ ಕಬೀರ್ ಬಾಯಂಬಾಡಿ ಕಾರ್ಯಕ್ರಮ ನಿರೂಪಿಸಿ ಹಕೀಂ ತುರ್ಕಳಿಕೆ ವಂದಿಸಿದರು.

Leave a Reply

Please enter your comment!
Please enter your name here