ಅಮೃತ್ ಶೆಣೈ ಯವರನ್ನು ಗೆಲ್ಲಸಿದರೆ ಉಡುಪಿಯಲ್ಲಿ ಮರಳಿನ ಸಮಸ್ಯೆಗೆ ಪರಿಹಾರ – ಖಲೀಲ್ ಕೆರಾಡಿ

42

ಅಮೃತ್ ಶೆಣೈ ಯವರನ್ನು ಗೆಲ್ಲಸಿದರೆ ಉಡುಪಿಯಲ್ಲಿ ಮರಳಿನ ಸಮಸ್ಯೆಗೆ ಪರಿಹಾರ – ಖಲೀಲ್ ಕೆರಾಡಿ

ಉಡುಪಿ: ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಯವರ ಪ್ರಚಾರ ಸಭೆಗಳು ಶಂಕರಪುರ, ಮಂಚಕಲ್ಲು, ಮುದರಂಗಡಿ , ಬೆಳ್ಮಣ್ಣು , ನಿಟ್ಟೆ ,ಕಾರ್ಕಳ ಮುಂತಾದ ಕಡೆಗಳಲ್ಲಿ ನಡೆಯಿತು.

ಬ್ರಹ್ಮಾವರದ ಯುವ ಉದ್ಯಮಿ ಖಲೀಲ್ ಕೆರಾಡಿಯವರು ಪ್ರಚಾರ ಭಾಷಣ ಮಾಡಿ ಶೆಣೈಯವರು ಉಡುಪಿಯಲ್ಲೇ ಹುಟ್ಟಿ ಬೆಳೆದು ಸಾಮಾನ್ಯ ಜನರ ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ,ಸಂಸತ್ತಿನಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಉಳ್ಳ ವ್ಯಕ್ತಿ ಅಮೃತ್ ರವರು ನಿರಂತರವಾಗಿ ಮಾಡಿದ ಸಮಾಜಸೇವೆಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದರು.

ಸಮಾಜಸೇವಕಿ ಜಯಶ್ರೀ ಭಟ್ ರವರು ಮಾತನಾಡಿ ಪರಸ್ಪರ ಕೆಸರೆರಚಾಟ ಮಾಡುವ ಈ ಸನ್ನಿವೇಶದಲ್ಲಿ ಅಮೃತ್ ರವರು ಅಭಿವೃದ್ಧಿ ವಿಚಾರಗಳನ್ನು ಜನರ ಮುಂದೆ ಇಟ್ಟು ಮತಯಾಚನೆ ಮಾಡುತ್ತಾ ಇದ್ದಾರೆ ಇವರ ವ್ಯಕ್ತಿತ್ವವನ್ನು ಮೆಚ್ಚಿ ನಾನು ಇವರ ಪರ ಪ್ರಚಾರ ಭಾಷಣ ಮಾಡುತ್ತಿದ್ದೇನೆ ಎಂದರು.

ಅಬುಬಕರ್ ,ಅಹ್ಮದ್ ,ರಾಜೇಶ್ ,ಐವನ್, ಅನಿತಾ ಮತ್ತಿತರರು ಉಪಸ್ಥಿತರಿದ್ದರು