ಅರುಣೋದಯ – ಲಯನ್ಸ್ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ

Spread the love

ಅರುಣೋದಯ – ಲಯನ್ಸ್ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ

ಮಂಗಳೂರು : ಒಂದು ಶತಮಾನದುದ್ದಕ್ಕೂ ವಿಶ್ವದೆಲ್ಲೆಡೆಯಲ್ಲಿ ಸೇವಾ ವಾಹಿನಿಯಲ್ಲಿ ನಿರಂತರ ಸಾಮಾಜಿಕ ಸೇವಾ ಬದ್ಧತೆಯೊಂದಿಗೆ ಬೆಳೆದ ಸಂಸ್ಥೆ ಇದ್ದರೆ ಅದು  ಸೇವಾ ಸಂಸ್ಥೆ ಎಂದು ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ವಿ ವಿ ಕೃಷ್ಣಾ ರೆಡ್ಡಿಯವರು ಹೇಳಿದರು. ಇದೀಗ ನೂರನೇ ಸಂಭ್ರಮದಲ್ಲಿರುವ ಸಂಸ್ಥೆ, ಮತ್ತಷ್ಟು ಜನಪರ ಸೇವೆಗಳ ಮೂಲಕ, ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಿ ಎಂದು ಹಾರೈಸಿದರು

Lions Photo

ಅವರು ದಕ್ಷಿಣಕನ್ನಡ, ಹಾಸನ, ಚಿಕ್ಕಮಗಳೂ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಲಯನ್ಸ್‍ಜಿಲ್ಲೆ 317-ಡಿಯ 2016-17ನೇ ಸಾಲಿನ ನೂತನ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭ ಅರುಣೋದಯದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡುತ್ತಿದ್ದರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಾರಾಯಣ ನೇತ್ರಾಲಯದ ಆಡಳಿತ ನಿರ್ದೇಶಕ ಡಾ.ಭುಜಂಗ ಶೆಟ್ಟಿಯವರು ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ತನ್ನ ಇಡೀ ಕುಟುಂಬವನ್ನೇ ಲಯನ್ಸ್ ಸೇವೆಗೆ ಮುಡಿಪಾಗಿಡುವ ಮೂಲಕ, ಲಯನ್ಸ್‍ಜಿಲ್ಲೆ 317-ಡಿ, ಇವರ ನೇತೃತ್ವದಲ್ಲಿ ಅತ್ಯುನ್ನತ ಧ್ಯೇಯಗಳನ್ನೊಳಗೊಂಡ ಕಾರ್ಯಕ್ರಮ ನಿರೂಪಿಸಿಕೊಂಡು, ಮುನ್ನಡಿ ಇಟ್ಟದ್ದು, ಇವರಿಂತ ಸಮಾಜಕ್ಕೆ ಒಳಿತಾಗಲಿ ಎಂದು ಹಾರೈಸಿದರು. ಜಿಲ್ಲೆಯ ಪ್ರಥಮ ಮಹಿಳೆ ಇಂದಿರಾ ಎ ಶೆಟ್ಟಿಯವರು ಉದ್ಘಾಟಿಸಿದ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಗವರ್ನರ್ ಅರುಣ ಶೆಟ್ಟಿಯವರು ವಹಿಸಿಕೊಂಡಿದ್ದರು. ಜಿಲ್ಲೆಯ ಸಂಪುಟ ಮತ್ತು ಸದಸ್ಯರ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಸಂಪಾದಕ ಸದಾಶಿವ ಕಿಣಿಯವರು ಸಂಪಾದಿಸಿದ ಸಂಪುಟ ಕೈಪಿಡಿ, ‘ಆರೋಹಣ’ವನ್ನು ಜಿಲ್ಲೆಯ ಪ್ರಥಮ ಉಪಗವರ್ನರ್ ಹೆಚ್‍ಆರ್ ಹರೀಶ್ ಅವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಾಗೂ ಇತರ ಸೇವಾ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಯಿತು, ಜಿಲ್ಲಾ ಲಯನೆಸ್ ಅಧ್ಯಕ್ಷೆಯಾಗಿ ಮಲ್ಲಿಕಾ ಆರ್ ಆಳ್ವ ಹಾಗೂ ಜಿಲ್ಲಾ ಲಿಯೋ ಅಧ್ಯಕ್ಷೆಯಾಗಿ ಅಹಿಮಾ ಶೆಟ್ಟಿ ಹಾಗೂ ಸಂಪುಟದಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ದ್ವಿತೀಯ ಉಪಗವರ್ನರ್ ಕೆದೇವದಾಸ ಭಂಡಾರಿ ಶುಭಾಶಂಸನೆಗೈದರು. ಜಿಲ್ಲೆಯ ನಿಕಟಪೂರ್ವ ಗವರ್ನರ್ ಕವಿತಾ ಶಾಸ್ತ್ರಿ, ಮಾಜಿ ಗವರ್ನರ್ ಸಂತೋಷ ಕುಮಾರ್ ಶಾಸ್ತ್ರಿ, ಕಾರ್ಯದರ್ಶಿ ಕುಡ್ಪಿ ಅರವಿಂದ ಶೆಣೈ, ಕೋಶಾಧಿಕಾರಿ ದೇವಿಪ್ರಸಾದ್ ರಾವ್, ಸಂಪುಟ ಸಂಯೋಜಕಎಸ್ ಎಂ ಐರನ್, ಪದಗ್ರಹಣ ಸಮಿತಿಯ ಅಧ್ಯಕ್ಷ ಗೋವರ್ಧನ ಶೆಟ್ಟಿ, ಕಾರ್ಯದರ್ಶಿ ಜಯರಾಜ್ ಪ್ರಕಾಶ್, ಕೋಶಾಧಿಕಾರಿ ಚಿನ್ನಪ್ಪ ಕೆ, ಸಮಾರಂಭದ ಆಥ್ಯವನ್ನು ವಹಿಸಿದ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಉಮೇಶ್ ಪ್ರಭು, ಕಾರ್ಯದರ್ಶಿ ಕೆ ಸತೀಶ್ ಪೈ, ಕೋಶಾಧಿಕಾರಿ ಬಿ ಸತೀಶ್‍ರೈ, ಹಾಗೂ ನೂತನ ಪ್ರಾಂತ್ಯಾಧ್ಯಕ್ಷರು, ಸಾರ್ವಜನಿಕ ಸಂಪರ್ಕಾಧಿಕಾರಿ ತಾರಾನಾಥ್ ಶೆಟ್ಟಿ ಬೋಳಾರ್ ಹಾಗೂ ಪ್ರಾಂತ್ಯಾರ್ಧಯಕ್ಷರು ಮತ್ತು ಸಂಪುಟದಇತರ ಸದಸ್ಯರು ಉಪಸ್ಥಿತರಿದ್ದರು. ‘ಅರುಣೋದಯ’ ಸಮಿತಿಯ ಅಧ್ಯಕ್ಷ ಗೋವರ್ಧನ ಶೆಟ್ಟಿ ಸ್ವಾಗತಿಸಿದರು. ಸಂಪುಟ ಕಾರ್ಯದರ್ಶಿ ಕುಡ್ಪಿ ಅರವಿಂದ ಶೆಣೈ ವಂದಿಸಿದರು.


Spread the love