ಅ 17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ಅ 17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ  ತಪಾಸಣಾ  ಶಿಬಿರ

ಉಡುಪಿ: ಉಡುಪಿ ಶಾಸಕರು ಮೀನುಗಾರಿಕೆ, ಕ್ರೀಡೆ ಯುವ ಸಬಲೀಕರಣ  ಹಾಗೂ ಉಡುಪಿ ಜಿಲ್ಲಾ  ಉಸ್ತುವಾರಿ ಸಚಿವಾರದ ಸನ್ಮಾನ್ಯ  ಪ್ರಮೋದ್ ಮಧ್ವರಾಜ್‍ರವರ ಹುಟ್ಟು ಹಬ್ಬದ ಪ್ರಯುಕ್ತ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗದಿಂದ ಮಣಿಪಾಲ ಕೆ.ಎಂ.ಸಿ  ಆಸ್ಪತ್ರೆಯ ತಜ್ಞ ವೈದ್ಯರಿಂದ  ಹೃದಯ ಕಣ್ಣು, ಚರ್ಮ, ಮಧುಮೇಹ, ರಕ್ತದ ಒತ್ತಡ, ಸೇರಿದಂತೆ ಇನ್ನಿತರ  ರೋಗಗಳ ಒಳಗೊಂಡಿರುವ  ಉಚಿತ  ಆರೋಗ್ಯ  ತಪಾಸಣಾ  ಶಿಬಿರವನ್ನು ಅಕ್ಟೋಬರ್ 17 ರಂದು ಬೆಳಿಗ್ಗೆ 8.30 ರಿಂದ 12.30ರ ವರೆಗೆ ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿದೆ.

image022Pramod-madhwaraj-20160826-022

ಶಿಬಿರವನ್ನು ಬೆಳಿಗ್ಗೆ 10.30 ಕ್ಕೆ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವಾರದ ಪ್ರಮೋದ್ ಮಧ್ವರಾಜ್ ರವರು ಉದ್ಘಾಟಿಸಲಿದ್ದು. ಶ್ರೀ ವಿಖ್ಯಾತಾನಾಂದ ಸ್ವಾಮೀಜಿ ಬೊಲ್ಯೊಟ್ಟು ಮಠ, ಹೊಸ್ಮಾರು, ಕಾರ್ಕಳ, ರೇ| ಫಾ| ಡೆನ್ನಿಸ್ ಡೇಸಾ ಧರ್ಮ  ಗುರುಗಳು ಸಂತ ಅಂತೋನಿ ಚರ್ಚ್ ಕುಂತಳನಗರ, ಮೌಲಾನಾ ಯು.ಕೆ.ಅಬ್ದುಲ್ ಅಜೀಜ್ ದರೀಮಿ ಇಮಾಮ್ ಎಮ್.ಜೆ.ಮಸ್ಜಿದ್ ಚೊಕ್ಕಬೆಟ್ಟು ಮಂಗಳೂರು,ಇವರು ಆಶೀರ್ವಚನ ನೀಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಯುರೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ| ಪದ್ಮರಾಜ್ ಹೆಗ್ಡೆ ಮತ್ತು ಉಜ್ವಲ್ ಡೆವಲಪರ್ಸ್‍ನ ಪುರುಷೋತ್ತಮ ಶೆಟ್ಟಿ ಭಾಗವಹಿಸಲಿದ್ದಾರೆ. ಮನೋರಂಜನ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11.30ರಿಂದ ಖ್ಯಾತ ಭಾಗವತಾರದ ಶ್ರೀ ಸುಬ್ರಮಣ್ಯ ದಾರೇಶ್ವರ್ ನೇತೃತ್ವದಲ್ಲಿ “ ಚಂದ್ರಾವಳಿ ವಿಲಾಸ” ಎಂಬ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸತೀಶ್ ಅಮೀನ್ ಪಡುಕರೆ ಹಾಗೂ ನಿತ್ಯಾನಂದ ಶೆಟ್ಟಿ ಹಾರಾಡಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply