ಆಕಾಶವಾಣಿಯ ಡಾ. ಪೆರ್ಲ ಅವರಿಗೆ ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ

ಆಕಾಶವಾಣಿಯ ಡಾ. ಪೆರ್ಲ ಅವರಿಗೆ ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ

ಮಂಗಳೂರು: ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರಿಗೆ ಇತ್ತೀಚೆಗೆ ಕೊಪ್ಪಳದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಡಾ. ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

vasanth-kumar-perla

ಡಾ. ಪೆರ್ಲ ಅವರನ್ನು ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಚಾರಣ ಸಾಹಿತ್ಯ, ವ್ಯಕ್ತಿ ಚಿತ್ರ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಲ್ಲಿಸಿದ ಬಹುಮುಖೀ ಪರಿಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸಾಹಿತ್ಯ ಕೃಷಿಯಲ್ಲದೇ ಸಂಘಟನೆಯಲ್ಲಿ ಅವರು ದುಡಿದಿದ್ದಾರೆ. ಕಳೆದ ದಿನಾಂಕ 24ರಿಂದ 28 ರವರೆಗೆ ಕೊಪ್ಪಳ ಜಿಲ್ಲಾ ಉತ್ಸವ ಏರ್ಪಟ್ಟಿತ್ತು.

Leave a Reply

Please enter your comment!
Please enter your name here