ಆಕಾಶ ಭವನ ಶರಣ್ ಮತ್ತು ರಹೀಮ್ ಮೇಲೆ ಗೂಂಡಾ ಕಾಯ್ದೆ

ಆಕಾಶ ಭವನ ಶರಣ್ ಮತ್ತು ರಹೀಮ್ ಮೇಲೆ ಗೂಂಡಾ ಕಾಯ್ದೆ
ಮಂಗಳೂರು: ಸಮಾಜ ಘಾತುಕ ಚಟುವಟಿಕೆ ಹಾಗೂ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿಗೆಗೊಳಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರು ಹಲವು ಕೊಲೆ, ಕೊಲೆ ಯತ್ನ, ಅತ್ಯಾಚಾರ, ದರೋಡೆ ಪ್ರಕರಣದ ಪ್ರಮುಖ ಆರೋಪಿ ಆಕಾಶ ಭವನ ಶರಣ್ (32), ಹಾಗೂ ಸಾರ್ವಜನಿಕ ಸ್ಥಳ ಶಾಲಾ ಕಾಲೇಜು ಬಳಿ ಗಾಂಜಾ ಮಾರಾಟ ಆರೋಪಿ ರಹೀಮ್ ಯಾನೆ ಚಪ್ಪೆ ತಣ್ಣಿ ರಹೀಮ್ ಮೇಲೆ ಗೂಂಡಾ ಕಾಯ್ದೆ ಹಾಕಾಲಾಗಿದೆ.

ಆಕಾಶ ಭವನ ಶರಣ್ ಮೇಲೆ 4 ಕೊಲೆ, 1 ಕೊಲೆ ಯತ್ನ, 1 ಅತ್ಯಾಚಾರ, 3 ದರೋಡೆ ಯತ್ನ ಸೇರಿದಂತೆ 17 ಪ್ರಕರಣಗಳಿದ್ದು, ಈತನನನ್ನು ಗೂಂಡಾ ಕಾಯ್ದೆಯಡಿ ವಿಜಯಪುರ ಕೇಂದ್ರ ಕಾರಾಗ್ರಹಕ್ಕೆ ಕಳುಹಿಸಲಾಗಿದೆ.

ರಹೀಂ ಸಾರ್ವಜನಿಕ ಸ್ಥಳ, ಶಾಲಾ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದು, 8 ಪ್ರಕರಣಗಳು ದಾಖಲಾಗಿದ್ದು, ಶಿವಮೊಗ್ಗ ಜಿಲ್ಲಾ ಕಾರಗ್ರಹಕ್ಕೆ ಕಳುಹಿಸಲಾಗಿದೆ.

Leave a Reply