ಆಯುಷ್ ಶೆಟ್ಟಿ ರಾಜ್ಯ ಬ್ಯಾಟ್ಮಿಂಟನ್ ಚಾಂಪಿಯನ್

ಆಯುಷ್ ಶೆಟ್ಟಿ ರಾಜ್ಯ ಬ್ಯಾಟ್ಮಿಂಟನ್ ಚಾಂಪಿಯನ್

ಕಾರ್ಕಳ: ಕಾಂತಾವರದ ಪ್ರಕೃತಿ ನ್ಯಾಷನಲ್ ಸ್ಕೂಲ್‍ನಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಆಯುಷ್ ಆರ್ ಶೆಟ್ಟಿ ಬೆಂಗಳೂರಿನಲ್ಲಿ ಸೆ. 7ರಿಂದ 13 ನಡೆದ ಆರ್ ಸುಬ್ಬಣ್ಣ ಮೆಮೋರಿಯಲ್ ಮತ್ತು ಯೂನೆಕ್ಸ್ ಸನ್‍ರೈಸ್ ಕರ್ನಾಟಕ ಬ್ಯಾಟ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ 13 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್‍ನಲ್ಲಿ ಪ್ರಥಮ ಮತ್ತು ಡಬಲ್ಸ್‍ನಲ್ಲಿ ದ್ವಿತೀಯ ಸ್ಥಾನಿಯಾಗಿ ಚಾಂಪಿಯನ್ ಗೌರವಕ್ಕೆ ಪಾತ್ರರಾಗಿದ್ದಾರೆ.

ayush-shetty

ಆಯುಷ್ ಶೆಟ್ಟಿ ಕಾರ್ಕಳ ತಾಲೂಕು ಮುರತ್ತಂಗಡಿಯ ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ಆರ್. ಶೆಟ್ಟಿ ದಂಪತಿಯ ಪುತ್ರ. ಮಂಗಳೂರು ಬ್ಯಾಟ್ಮಿಂಟನ್ ಕ್ಲಬ್‍ನ ಚೇತನ್ ಸಾಗರ್ ಇವರಿಂದ ತರಬೇತಿ ಪಡೆದಿದ್ದಾರೆ.

Leave a Reply

Please enter your comment!
Please enter your name here