ಆರಬ್ ಪ್ರೀಮಿಯರ್ ಲೀಗ್‍ ಅಂತಾರಾಷ್ಟ್ರೀಯ ಹಾರ್ಡ್‍ಟೆನಿಸ್ ಕ್ರಿಕೆಟ್ ಪಂದ್ಯಾವಳಿ

Spread the love

ಆರಬ್ ಪ್ರೀಮಿಯರ್ ಲೀಗ್‍ಅಂತಾರಾಷ್ಟ್ರೀಯ ಹಾರ್ಡ್‍ಟೆನಿಸ್ ಕ್ರಿಕೆಟ್ ಪಂದ್ಯಾವಳಿ
ದುಬೈ : ದುಬೈಯಲ್ಲಿ ನೆಲೆಸಿರುವ ಭಾರತೀಯರ ಸಂಸ್ಥೆ “ದುಬೈಇಂಡಿಯನ್ಸ್” ಅಜ್ಮಾನ್‍ನ ಓವಲ್ ಮೈದಾನದಲ್ಲಿ ಆಂತಾರಾಷ್ಟ್ರೀಯ ಮಟ್ಟದ ಹಾರ್ಡ್‍ಟೆನಿಸ್ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸಿದ್ದು ಈ ಪಂದ್ಯಕೂಟದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಕತಾರ್, ದುಬೈ, ಕುವೈಟ್, ಭಾರತ ಮುಂತಾದ 11 ಏಷ್ಯಾ ದೇಶಗಳಿಂದ ತಂಡಗಳು ಮತ್ತು ಯುರೋಪಿನಿಂದ ಪಿನ್ಲಾಂಡ್‍ದೇಶದ ತಂಡವು ಭಾಗವಹಿಸಲಿದೆ.

ದುಬೈಇಂಡಿಯನ್‍ಇತ್ತೀಚೆಗೆ “ಮಿ. ಇಂಟರ್‍ನೇಶನಲ್‍ಇಂಡಿಯನ್” ಬಾಡಿ ಬಿಲ್ಡಿಂಗ್ ಚಾಂಪಿಯನ್‍ಶಿಪ್ಪನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಆಯೋಜಿಸುತ್ತಿರುವ ಬಲು ದೊಡ್ಡ ಆಂತಾರಾಷ್ಟ್ರೀಯ ಕೂಟ ಇದಾಗಿದೆ.

arab-premiur arab-premiur-jpg1

ಈ ಕೂಟವು ಅಕ್ಟೋಬರ್ ತಿಂಗಳ ದಿನಾಂಕ 11ರಿಂದ 14ರವರೆಗೆ ಜರಗಲಿದೆ. ಈ ಕೂಟದ ಒಟ್ಟು ಬಹುಮಾನ ಧನ ಧೀರಮ್ ಎಇಡಿ 2,00,000.00 ವಾಗಿದ್ದು ವಿಜೇತ ತಂಡ ಎಇಡಿ 111111 ದ್ವಿತೀಯ ಸ್ಥಾನಿಗಳು ಎಇಡಿ 50000 ವನ್ನು ಪಡೆಯಲಿದೆ. ಇದಲ್ಲದೆ ಇತರ ಹಲವಾರು ಆಕರ್ಷಕ ಬಹುಮಾನಗಳು ಆಟಗಾರರನ್ನು ಸೇರಲಿದೆ.

ಈ ಪಂದ್ಯಾಟವನ್ನು ವೆಬ್‍ನಲ್ಲಿ www.tenniscricket.in ಮತ್ತು ವೆಬ್ ಸ್ಕೋರಿಂಗ್‍ famecrick.com ಮೂಲಕ ನೇರ ಪ್ರಸಾರವಾಗಲಿದೆ.

ಈ ಪಂದ್ಯಕೂಟದ ಆಯೋಜನೆಯಲ್ಲಿ ಆಫ್ರೋಜ್‍ಅಸಾಡಿ, ಚಯರ್‍ಮ್ಯಾನ್, ಇಮ್ರಾನ್ ಎರ್ಮಾಳ್, ಅರಿಫ್‍ಖಾನ್, ಯೂಸುಬ್‍ಅನ್ಸಾರ್, ಅಬ್ದುಲ್‍ರಹಮಾನ್, ರಮೀಝ್ ಶೀರೂರು, ಸಯ್ಯದ್ ಸಲೀಮ್ ಮುಂತಾದವರು ಶ್ರಮಿಸುತ್ತಿರುವರು.

ದಿನಾಂಕ 14ರಂದು ಜರಗಲಿರುವ ಮುಕ್ತಾಯ ಸಮಾರಂಭದಲ್ಲಿ ಅಖಿಲಭಾರತ ಹಾರ್ಡ್‍ಟೆನಿಸ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಇವರು ಅತಿಥಿಯಾಗಿ ಭಾಗವಹಿಸಲಿರುವರು.


Spread the love