ಆರ್​ಎಸ್ಸೆಸ್ ಹಿರಿಯ ಪ್ರಚಾರಕ ಕೃಷ್ಣಪ್ಪ ವಿಧಿವಶ

Spread the love

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್)ನ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ಅವರು ನಿಧನರಾಗಿದ್ದಾರೆ.

rss

ಕ್ಯಾನ್ಸರ್ ಜಯಿಸಿ ಕಳೆದ ಹಲವಾರು ವರ್ಷಗಳಿಂದ ಸಾಮಾನ್ಯರಂತೆ ಬದುಕು ಸಾಗುತ್ತಿದ್ದರು.

ಬರೋಬ್ಬರಿ 61 ವರ್ಷಗಳ ಕಾಲ ಆರ್​ಎಸ್​ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸಿರುವ ಕೃಷ್ಣಪ್ಪ ಅವರು ಸೋಮವಾರ ಬೆಳಗ್ಗೆ ನಿಧನರಾಗಿರುವ ಸಂಗತಿಯನ್ನು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ. ಅವರ ನಿವಾಸ ಕೇಶವ ಕೃಪಾದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ 12.30ರಿಂದ 4 ಗಂಟೆಯ ತನಕ ಇಡಲಾಗುತ್ತಿದೆ. ಬಳಿಕ ಅವರ ದೇಹವನ್ನು ಕಿಮ್್ಸ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುತ್ತದೆ.

1932ರಲ್ಲಿ ಮೈಸೂರಿನಲ್ಲಿ ಜನಿಸಿದ ನ. ಕೃಷ್ಣಪ್ಪ ಅವರು ನರಸಿಂಹಯ್ಯ ಮತ್ತು ಸಾವಿತ್ರಮ್ಮ ದಂಪತಿಯ ದ್ವಿತೀಯ ಪುತ್ರರಾಗಿದ್ದರು. ಸಂಸ್ಕೃತದಲ್ಲಿ ಪದವಿ ಪಡೆದಿದ್ದ ಕೃಷ್ಣಪ್ಪನವರು ಕಾಲೇಜು ದಿನಗಳಲ್ಲೇ ಆರ್​ಎಸ್​ಎಸ್​ನ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಘ ಪರಿವಾರ ಪ್ರಚಾರ ಕಾರ್ಯದಲ್ಲಿನ ಸಾಕಷ್ಟು ಬದಲಾವಣೆಯಲ್ಲಿ ಕೃಷ್ಣಪ್ಪ ಅವರದ್ದು ವಿಶೇಷ ಪಾತ್ರವಿದೆ. ಕುತುಬ್ ಪ್ರಬೋಧನ್ ಹೆಸರಿನಲ್ಲಿ ಶಿಕ್ಷಣ ನೀಡುವ ವಿಶೇಷ ಕಾಯಕ್ರಮದ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದರು.

*****

ಇನ್ನಷ್ಟು ವಿವರ:

* 1954ರಲ್ಲಿ ಆರ್​ಎಸ್​ಎಸ್ ಪ್ರಚಾರಕರಾಗಿ ಸೇವೆ ಆರಂಭಿಸಿದರು. ಚಾಮರಾಜನಗರದ ತಾಲೂಕಾ ಪ್ರಚಾರಕ ಜವಾಬ್ದಾರಿ ಹೊತ್ತುಕೊಂಡರು.

* 1955-56ರಲ್ಲಿ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.

* 1959ರಲ್ಲಿ ಮಂಗಳೂರು ಜಿಲ್ಲಾ ಪ್ರಚಾರಕರಾಗಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.

* 1960ರಿಂದ 1962ರ ತನಕ ಬೆಂಗಳೂರು ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.

* 1962ರಲ್ಲಿ ತುಮಕೂರು ವಿಭಾಗ ಪ್ರಚಾರಕರಾಗಿ ಸೇವೆ.

* 1966ರಲ್ಲಿ ಮಂಗಳೂರು ವಿಭಾಗ ಪ್ರಚಾರಕರಾಗಿ, ನಂತರದ ದಿನದಲ್ಲಿ ಮಂಗಳೂರು ವಿಭಾಗವನ್ನು ಬಳ್ಳಾರಿಗೂ ವಿಸ್ತರಿಸಿದ ಸಂದರ್ಭದಲ್ಲೂ ನಾಯಕನಂತೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

* 1975ರ ತುರ್ತು ಪರಿಸ್ಥಿತಿಯಲ್ಲಿ ಮಂಗಳೂರು ವಿಭಾಗದಲ್ಲಿ ವಿಶೇಷವಾದ ಆಸಕ್ತಿ ತೋರಿ ಸೇವೆ ಸಲ್ಲಿಸಿ ಮೆಚ್ಚುಗೆ ಗಳಿಸಿಕೊಂಡರು. ದೇಶವೇ ಗಮನಹರಿಸುವಂಥ ಪ್ರತಿಭಟನೆಯ ನೇತೃವ ವಹಿಸಿಕೊಂಡು ಕೆಲಸ ಮಾಡಿದರು. ಜೈಲುವಾಸವನ್ನು ಅನುಭವಿಸಿದರು.

* 1978ರಲ್ಲಿ ಪ್ರಾಂತ ಬೌದ್ಧಿಕ್ ಪ್ರಮುಖ್ ಹುದ್ದೆಯ ಜವಾಬ್ದಾರಿ ಹೊತ್ತುಕೊಂಡರು.

* 1980ರಲ್ಲಿ ಕರ್ನಾಟಕ ರಾಜ್ಯದ ಪ್ರಾಂತ ಬೌದ್ಧಿಕ್ ಪ್ರಮುಖ್ ಆಗಿ ಸೇವೆ ಸಲ್ಲಿಸಿದರು.

* 1989ರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಕ್ಷೇತ್ರೀಯ ಪ್ರಚಾರಕರಾಗಿ ನೇಮಕಗೊಂಡರು.

* 2004ರಲ್ಲಿ ಆರ್​ಎಸ್​ಎಸ್​ನ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರಾಗಿ, 2014ರ ತನಕವೂ ಸೇವೆ ಸಲ್ಲಿಸಿದ್ದಾರೆ.

* ಕಳೆದ ಮಾರ್ಚ್​ನಿಂದ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿತು. ಕೆಲ ತಿಂಗಳಿಂದಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.


Spread the love