ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿನಲ್ಲಿ ಫ್ರೆಶರ್ಸ್ ಡೇ

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿನಲ್ಲಿ ‘’ಫ್ರೆಶರ್ಸ್ ಡೇ’’

ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿನ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷ ಬಿ.ಇ ವಿದ್ಯಾರ್ಥಿಗಳ ‘’ಫ್ರೆಶರ್ಸ್ ಡೇ’’ ಕಾರ್ಯಕ್ರಮವನ್ನು ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿ.ಸಿ.ಎಸ್ ಕಂಪನಿ, ಬೆಂಗಳೂರು ಕೇಂದ್ರದ ಮುಖ್ಯಸ್ಥ ಇ.ಎಸ್.ಚಕ್ರವರ್ತಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದೆ ವಿಫುಲ ಅವಕಾಶಗಳಿವೆ. ಆದರೆ ಈ ಅವಕಾಶಗಳು ಕಠಿಣ ಪರಿಶ್ರಮಪಟ್ಟರೆ ಮಾತ್ರ ಲಭ್ಯ.
ಎಂಜಿನಿಯರಿಂಗ್ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೂರುಹಂತದಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ. ಪÀಠ್ಯ ಜ್ವಾನವನ್ನು ಮೊದಲ ಹಂತದಲ್ಲಿ ಭಧ್ರಪಡಿಸಿಕೊಂಡು, ನಂತರ ತಾವು ಕಲಿತ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ಚಾಕಚಕ್ಯತೆ ಮತ್ತು ಕೊನೆಯದಾಗಿ ಆಧುನಿಕ ತಂತ್ರಜ್ಞಾನದ ಸದುಪಯೋಗವನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದರು.

alvas-freshers-day-00 alvas-freshers-day-01 alvas-freshers-day-02

ವಿದ್ಯಾರ್ಥಿಗಳು ಸಮಸ್ಯೆಗಳ ಪರಿಹಾರ, ಉತ್ತಮ ವಾಕ್ಪಟುತ್ವ, ಸಂಸ್ಕøತಿ ಜೊತೆಗೆ ತಮ್ಮ ಭವಿಷ್ಯ ಭದ್ರಪಡಿಸಿಕೊಳ್ಳುವಲ್ಲಿ, ಇಂದಿನಿಂದಲೇ ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ.ಮೋಹನ್ ಆಳ್ವ, ತಮ್ವ ಮಕ್ಕಳ ಉತ್ತಮ ಭವಿಷ್ಯದ ಹಿತದೃಷ್ಠಿಯಲ್ಲಿ, ಆಳ್ವಾಸ್ ಇಂಜಿನಿಯರ್ ಕಾಲೇಜಿಗೆ ಸೇರಿಸಿದ ಪ್ರತಿಯೊಬ್ಬ ತಂದೆ ತಾಯಿಯ ಕನಸನ್ನು ಇಲ್ಲಿನ ಶಿಕ್ಷಕ ವರ್ಗ ನನಸು ಮಾಡುತ್ತದೆ ಎಂದು ಭರವಸೆ ನೀಡಿದರು. ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಲೇಜಿನ ಶಿಕ್ಷಕ ವೃಂದ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು.
ಟಿ.ಸಿ.ಎಸ್ ಬೆಂಗಳೂರಿನ ಅಕಾಡೆಮಿಕ್ ರಿಜಿನಲ್ ಮ್ಯಾನೇಜರ್ ಶ್ರೀನಿವಾಸ ರಾಮಾನುಜಂ, ಹಾಗೂ ಟಿ.ಸಿ.ಎಸ್ ಕ್ಯಾಂಪಸ್ ರಿಕ್ರುಟರ್ ಬೆಂಜವಿನ್ ಸ್ಯಾಮ್ಯುಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡಿಸ್ ವಾರ್ಷಿಕ ವರದಿಯನ್ನು ಸಭೆಗೆ ಪ್ರಸ್ತುತ ಪಡಿಸಿದರು. ಉಪನ್ಯಾಸಕ ಮಂಜುನಾಥ ಕೊಠಾರಿ ಸ್ವಾಗತಿಸಿ, ಉಪನ್ಯಾಸಕ ದುರ್ಗಪ್ರಸಾದ ಬಾಳಿಗ ವಂದನಾರ್ಪಣೆ ಸಲ್ಲಿಸಿದರು.

Leave a Reply