ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್

56
Spread the love

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್

ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾನಿಲಯವು 2017-18ನೇ ಸಾಲಿನ ಮೇ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್ ಗಳಿಸುವುದರ ಜೊತೆಗೆ ಎರಡು ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನಕ್ಕೆ ಪುರಸ್ಕøತರಾಗಿದ್ದಾರೆ.

ಡಾ. ಟಿ.ಎಮ್.ಎ ಪೈ ಎಂಡೋವ್‍ಮೆಂಟ್ ಹಾಗೂ ರಾಮಕೃಷ್ಣ ಮಲ್ಯ ಟ್ರಸ್ಟ್‍ನಿಂದ ಚಿನ್ನದ ಪದಕಗಳು, ದಕ್ಷಿಣ ಕನ್ನಡ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್, ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾ ಕ್ಯಾಶ್ ಪ್ರೈಜ್ ಹಾಗೂ ಎಮ್.ಸಿ.ಜೆ ಸಿಲ್ವರ್ ಜುಬ್ಲಿ ಇಯರ್ ವತಿಯಿಂದ ನಗದು ಬಹುಮಾನವನ್ನು ಪಡೆದಿದ್ದಾರೆ. ಪ್ರಸ್ತುತ ಎಸ್.ಡಿ. ಎಮ್ ಶಿಕ್ಷಣ ಸಂಸ್ಥೆಯಲ್ಲಿನ ಮಲ್ಟಿಮೀಡಿಯಾ ಸ್ಟುಡಿಯೋ ದಲ್ಲಿ ಕಂಟೆಂಟ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಕಾರ್ಕಳ ನಿಟ್ಟೆ ನಿವಾಸಿ ನಂದನ್ ಕುಮಾರ್ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿಯಾಗಿದ್ದು, ಇವರ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಶಿಕ್ಷಕ ವರ್ಗದವರು ಅಭಿನಂದನೆಯನ್ನು ತಿಳಿಸಿದ್ದಾರೆ.


Spread the love