ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ

ಇಬ್ಬರು ದ್ವಿ ಚಕ್ರ ವಾಹನ ಕಳ್ಳರ ಬಂಧನ

ಮಂಗಳೂರು: ಮಂಗಳೂರು ಉತ್ತರ ಠಾಣಾ ವ್ಯಾಪ್ತೀಯಲ್ಲಿ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಪ್ಪಳ ಹಿರೆಸಿಂಧೋಗಿ ನಿವಾಸಿ ಮಂಜುನಾಥ (26), ಮಂಗಳೂರು ಕುಡುಪು ನೀರು ಮಾರ್ಗ ನಿವಾಸಿ ಹರೀಶ್ ಪೂಜಾರಿ (24) ಎಂದು ಗುರುತಿಸಲಾಗಿದೆ.

Two-Bike-thieves-2-vehicles-01

ಬಂಧಿತರಿಂದ ಈ ಹಿಂದೆ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಗೈದ 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಲಾಗಿದೆ. ಕಳುವು ಮಾಡಿದ 2 ದ್ವಿಚಕ್ರ ವಾಹನಗಳ ಅಂದಾಜು ಮೌಲ್ಯ ರೂ. 90,000/- ಆಗಬಹುದು. ಸದ್ರಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸದ್ರಿ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಾಂತರಾಮ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮದನ್ ಎಂ.ಸಿ ಹಾಗೂ ಸಿಬ್ಬಂದಿಯವರಾದ ದಯಾನಂದ, ಪದ್ಮನಾಭ, ಜಯರಾಮ ಮತ್ತು ಗೋವರ್ಧನ್ ರವರು ಭಾಗವಹಿಸಿರುತ್ತಾರೆ.

Leave a Reply