ಇಸ್ಲಾಂ ಕುರಿತು ಆಕ್ಷೇಪಾರ್ಹ ಲೇಖನ, ಪತ್ರಿಕೆಯ ವಿರುದ್ದ ಖಂಡನಾ ಸಭೆ

ಇಸ್ಲಾಂ ಕುರಿತು ಆಕ್ಷೇಪಾರ್ಹ ಲೇಖನ, ಪತ್ರಿಕೆಯ ವಿರುದ್ದ ಖಂಡನಾ ಸಭೆ

ಮಂಗಳೂರು: ಕರಾವಳಿಯಿಂದ ಪ್ರಕಟವಾಗುವ ಪತ್ರಿಕೆಯೊಂದರಲ್ಲಿ ಇಸ್ಲಾಮಿನ ಕುರಿತು ಪ್ರಕಟವಾದ ಆಕ್ಷೇಪಾರ್ಹ ಲೇಖನಕ್ಕೆ ಸಂಬಂಧಿಸಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ಬ್ರಹತ್ ಖಂಡನಾ ಸಭೆ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.

SSF

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅಕ್ಕರೆಕೆರೆ ಶಾಖಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ಪತ್ರಿಕೆಯಲ್ಲಿ ಲೇಖಕರು ಇಸ್ಲಾಮಿನ ಕುರಿತು ಕಪೋಲ ಕಲ್ಪಿತ ವರದಿಯನ್ನು ಪ್ರಕಟಿಸಿ ಮುಸ್ಲಿಂ ಸಮುದಾಯವನ್ನು ಭಾವನಾತ್ಮಕವಾಗಿ ಘಾಸಿಗೊಳಿಸುವ ಪ್ರಯತ್ನ ಮಾಡಿರುವುದು ಖಂಡನೀಯ ಎಂದರು.ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಮಾತನಾಡಿ ಭಯೋತ್ಪಾದನಾ ಸಂಘಟನೆಯಾದ ಐಸಿಸನ್ನು ಇಸ್ಲಾಮಿನೊಂದಿಗೆ ತಳಕು ಹಾಕಿಕೊಂಡು ಇಸ್ಲಾಮನ್ನು ಭಯೋತ್ಪಾದನಾ ಧರ್ಮವಾಗಿ ಚಿತ್ರಿಸಿರುವುದು ಖೇದಕರವೆಂದರು.ಇಸ್ಲಾಂ ಶಾಂತಿ ಸೌಹಾರ್ದತೆಯ ಧರ್ಮವಾಗಿದ್ದು ,ನಿನ್ನ ನೆರೆಕರೆಯವನನ್ನು ಗೌರವಿಸು. ಅವನು ಯಾವುದೇ ಜಾತಿ ಧರ್ಮದವನಾಗಿರಲಿ ಅವನನ್ನು ಗೌರವಿಸು ಎಂದು ಕಲಿಸಿದ ಮಾನವೀಯ ಸಂದೇಶವನ್ನು ಸಾರುವ ಧರ್ಮವಾಗಿದೆ ಎಂದು ತಿಳಿಸಿದರು.ಹಳೆಕೋಟೆ ಶಾಖಾಧ್ಯಕ್ಷ ಮುಹಮ್ಮದ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಸ್ತುತ ಸಭೆಯಲ್ಲಿ ಸೆಕ್ಟರ್ ಕಾರ್ಯದರ್ಶಿಗಳಾದ ತಾಜುದ್ದೀನ್ ಹಳೆಕೋಟೆ,ಸಿರಾಜ್ ಮೇಲಂಗಡಿ,ಹಫೀಝ್ ಕೋಡಿ,ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿ ನೌಫಲ್ ಕೋಟೆಪುರ,ಸೆಕ್ಟರ್ ಉಪಾಧ್ಯಕ್ಷ ಶಬೀರ್ ಪೇಟೆ,ಕೋಶಾಧಿಕಾರಿ ಇಲ್ಯಾಸ್ ಕೈಕೋ,ಅಬ್ದುಲ್ ಘನಿ ಹಳೆಕೋಟೆ,ಹನೀಫ್ ಬೊಟ್ಟು, ಶಿಹಾಬುದ್ದೀನ್ ಪೇಟೆ,ಎಸ್ ಬಿ ಎಸ್ ನಿರ್ದೇಶಕ ಅಬ್ದುಲ್ ಅಹ್ಸನ್ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಕಾರ್ಯಕ್ರಮ ನಿರೂಪಿಸಿದರು

Leave a Reply