ಈಜಲು ತೆರಳಿದ ಇಬ್ಬರು ಯುವಕರು ನೀರು ಪಾಲು

ಈಜಲು ತೆರಳಿದ ಇಬ್ಬರು ಯುವಕರು ನೀರು ಪಾಲು

ಮಂಗಳೂರು: ಈಜಲು ಮರವೂರು ನದಿಗೆ ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಪಂಜಿಮೊಗರು ನಿವಾಸಿಗಳಾದ ಅವಿನಾಶ್ ಮತ್ತು ಜೈಸನ್ ಡಿ’ಸೋಜಾ ಎಂದು ಗುರುತಿಸಲಾಗಿದೆ.

Avinash-Jaison-05072016 (6) Avinash-Jaison-05072016 (5) Avinash-Jaison-05072016 (4) Avinash-Jaison-05072016 (3) Avinash-Jaison-05072016 (2) Avinash-Jaison-05072016 (1)

ಮಾಹಿತಿಗಳ ಪ್ರಕಾರ ಜೈಸನ್, ಅವಿನಾಶ್ ಸೇರಿದಂತೆ 8 ಮಂದಿ ಯುವಕರ ತಂಡ ಈಜಾಡಲು ಮರವೂರು ನದಿಗೆ ತೆರಳಿತ್ತು. ಅವಿನಾಶ್ ಈಜಾಡಲು ನೀರಿಗೆ ಇಳಿದಿದ್ದು, ತೆರೆಗಳ ಹೊಡೆತಕ್ಕೆ ಅವಿನಾಶ್ ಕೊಚ್ಚಿ ಹೊಗುತ್ತಿರುವುದನ್ನು ಗಮನಿಸಿ ರಕ್ಷಣೆಗೆ ಹೋದ ಜೈಸನ್ ಕೂಡ ನೀರಿನ ಸೆಳತೆಕ್ಕೆ ಕೊಚ್ಚಿ ಹೋದರು.

ಕೂಡಲೇ ಜೊತೆಯಲ್ಲಿದ್ದವರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅಸಾಧ್ಯವಾಗಲಿಲ್ಲ. ರಕ್ಷಣಾ ದಳ ಸ್ಥಳಕ್ಕೆ ಆಗಮಿಸಿದ್ದು, ಪತ್ತೆ ಕಾರ್ಯ ಆರಂಭಿಸಿದೆ.

ಕಾವೂರು ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply