ಈದ್ ಹಬ್ಬದಂದೇ ನಗರದಲ್ಲಿ ಅಫಘಾತಕ್ಕೆ ಬಲಿಯಾದ ಗೋವಾದ ಯುವಕ

ಈದ್ ಹಬ್ಬದಂದೇ ನಗರದಲ್ಲಿ ಅಫಘಾತಕ್ಕೆ ಬಲಿಯಾದ ಗೋವಾದ ಯುವಕ

ಮಂಗಳೂರು: ದ್ವಿಚಕ್ರ ವಾಹನಕ್ಕೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ 34 ವರ್ಷದ ವ್ಯಕ್ತಿಯೋರ್ವರು ಸಾವನಪ್ಪಿದ ಘಟನೆ ಬುಧವಾರ ನಗರದ ಮೋತಿ ಮಹಲ್ ಬಳಿ ನಡೆದಿದೆ.

ಮೃತರನ್ನು ಗೋವಾ ಮೂಲದ ಸರ್ಫರಾಜ್ (34) ಎಂದು ಗುರುತಿಸಿದ್ದು, ಮಂಗಳೂರು ಎಕ್ಕಾರಿನ ಯುವತಿಯನ್ನು ವಿವಾಹವಾಗಿದ್ದರು.

image001sarfaraz-yenyes-20160706-001 image002sarfaraz-yenyes-20160706-002 image003sarfaraz-yenyes-20160706-003 image004sarfaraz-yenyes-20160706-004 image005sarfaraz-yenyes-20160706-005 image008sarfaraz-yenyes-20160706-008 image007sarfaraz-yenyes-20160706-007 image006sarfaraz-yenyes-20160706-006 image009sarfaraz-yenyes-20160706-009 image010sarfaraz-yenyes-20160706-010 image011sarfaraz-yenyes-20160706-011

ಘಟನೆಯು ಮಧ್ಯಾಹ್ನ 2.15 ರ ಸುಮಾರಿಗೆ ಜರುಗಿದ್ದು, ಸಾರ್ವಜನಿಕರು ಕೂಡಲೇ ಪೋಲಿಸ್ ಕಂಟ್ರೋಲ್ ರೂಂಮಿಗೆ ಮಾಹಿತಿ ನೀಡಿದ್ದರು ಆದರೆ ಕೇವಲ ಒಬ್ಬನೇ ಪೋಲಿಸ್ ಪೇದೆಯನ್ನು ಸ್ಥಳಕ್ಕೆ ಕಳುಹಿಸಿದ್ದು ಜನರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಬಸ್ಸಿನ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಇದರಿಂದ ಉದ್ರಿಕ್ತಗೊಂಡ ಸಾರ್ವಜನಿಕರು ಆತನ್ನು ಥಳಿಸಲು ಕೂಡ ಪ್ರಯತ್ನಿಸಿದರು.

ಇದರಿಂದ ಸ್ವಲ್ಪಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಹೊಂದಿತ್ತು. ಬಳಿಕ ಹೆಚ್ಚಿನ ಪೋಲಿಸರು ಸ್ಥಳಕ್ಕೆ ಆಗಮಿಸಿ ಬಸ್ಸಿನ ಚಾಲಕನನ್ನು ವಶಕ್ಕೆ ಪಡೆದುಕೊಂಡರು.

image012sarfaraz-yenyes-20160706-012 image013sarfaraz-yenyes-20160706-013 image014sarfaraz-yenyes-20160706-014 image015sarfaraz-yenyes-20160706-015 image016sarfaraz-yenyes-20160706-016 image017sarfaraz-yenyes-20160706-017 image018sarfaraz-yenyes-20160706-018 image019sarfaraz-yenyes-20160706-019 image020sarfaraz-yenyes-20160706-020 image021sarfaraz-yenyes-20160706-021 image022sarfaraz-yenyes-20160706-022 image023sarfaraz-yenyes-20160706-023 sarfaraz-yenyes-20160706

ಸರ್ಫರಾಜ್ ಈದ್ ಹಬ್ಬದ ಆಚರಣೆಯ ಸಲುವಾಗಿ ತನ್ನ ಮಾವನ ಮನೆಗೆ ಬಂದಿದ್ದು, ಇದು ಸಂಜೆಯ ಹೊತ್ತಿಗೆ ಗೋವಾಕ್ಕೆ ಮರಳಿ ಅಲ್ಲಿಂದ ವಿದೇಶಕ್ಕೆ ತೆರಳಬೇಕಿತ್ತು ಎನ್ನಲಾಗಿದೆ.

 ರಸ್ತೆಯಲ್ಲಿ ಹೆಚ್ಚಿನ ಬಸ್ಸುಗಳು ಮಿತಿಮೀರಿದ ವೇಗದಿಂದ ಚಲಿಸುತ್ತಿದ್ದು ಇದರಿಂದ ಹೆಚ್ಚಿನ ಅಫಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

Leave a Reply

Please enter your comment!
Please enter your name here