ಈಮೇಯ್ಲ್  ಖಾತೆ ಹ್ಯಾಕ್ ಮಾಡಿ ರೂ 2.35 ಲಕ್ಷ ವಂಚನೆ

ಉಡುಪಿ: ಈಮೇಯ್ಲ್ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ರೂ 2.35 ಲಕ್ಷ ಹಣವನ್ನು ವಂಚಿಸಿದ ಘಟನೆ ಉಡುಪಿ ಕೊರಂಗ್ರಪಾಡಿಯಲ್ಲಿ ನಡೆದಿದೆ.
ಉಡುಪಿ ನಗರ ಕೊರಂಗ್ರಪಾಡಿ ವಿಜಯ ಬ್ಯಾಂಕಿನಲ್ಲಿ ಮೆಲ್ವಿನ್‌ ಡಿಕೊಸ್ಟರವರು ಎನ್‌ಆರ್‌‌ಐ ಖಾತೆಯನ್ನು ಹೊಂದಿರುತ್ತಾರೆ. ಸದ್ರಿಯವರು ತಮ್ಮ ಖಾತೆಯಿಂದ ತನ್ನ ಹೆಂಡತಿಯ ವೈದ್ಯಕೀಯ ವೆಚ್ಚದ ಸಲುವಾಗಿ ಸೌತ್ ಇಂಡಿಯಾ ಬ್ಯಾಂಕಿನ ಖಾತೆಗೆ 2,35,000/- ರೂಪಾಯಿಯನ್ನು ಜಮೆ ಮಾಡುವಂತೆ ಬ್ಯಾಂಕಿಗೆ ದಿನಾಂಕ 07/06/2016 ರಂದು ಈಮೇಲ್‌ ಸಂದೇಶ ಕಳುಹಿಸಿರುತ್ತಾರೆ. ಅದೇ ದಿನ ಸದ್ರಿ ಈಮೇಲ್‌ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿ ಬ್ಯಾಂಕಿಗೆ ಪುನಃ ಈ ಮೇಲ್‌ ಸಂದೇಶ ಕಳುಹಿಸಿದ್ದು, ಸದ್ರಿ ಸಂದೇಶದಲ್ಲಿ ಮೆಲ್ವಿನ್‌ ಡಿಕೊಸ್ಟರವರ ಖಾತೆಯಿಂದ ಪವನ್‌ ಸಿಂಗ್ ಐಸಿಐಸಿಐ ಬ್ಯಾಂಕ್‌ ಚಾಂದಿನ ಚೌಕ್‌ ದೆಹಲಿ ಖಾತೆದಾರರು ಐಸಿಐಸಿಐ ಬ್ಯಾಂಕಿನ ಖಾತೆ ನಂಬ್ರ 629205502043 ನೇದಕ್ಕೆ 2,35,000/- ರೂಪಾಯಿಯನ್ನು ಜಮೆ ಮಾಡುವಂತೆ ಈಮೇಲ್‌ ಸಂದೇಶ ಕಳುಹಿಸಿ ಬ್ಯಾಂಕ್‌ನ ಸಿಬ್ಬಂದಿಯವರು ಸದ್ರಿ ಖಾತೆಗೆ ಹಣ ಜಮೆ ಮಾಡುವಂತೆ ಮಾಡಿ ಮೋಸ ಮಾಡಿರುತ್ತಾರೆ.
ಈ ಕುರಿತು ಬ್ಯಾಂಕಿನ ಮ್ಯಾನೆಜರ್ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply