ಉಡುಪಿ: ಅಕ್ರಮ ಗಾಂಜಾ ಮಾರಾಟ – ಒರ್ವನ ಬಂಧನ

ಉಡುಪಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಠಾಣೆಯ ಪೋಲಿಸರು ಸೋಮವಾರ ಬೆಳಿಗ್ಗೆ ಬಂಧಿಸಿದ ಘಟನೆ ವರದಿಯಾಗಿದೆ.
ಬಂಧಿತನನ್ನು ಕೃಷ್ಣ ಜಲಗಾರ(32) ಎಂದು ಗುರುತಿಸಲಾಗಿದೆ.

ದಿನಾಂಕ 01-06-2015 ರಂದು ಬೆಳಿಗ್ಗೆ 10:00 ಗಂಟೆಗೆ ಗಿರೀಶ್ ಕುಮಾರ್ ಪೊಲೀಸ್ ಉಪ ನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆ ರವರು ಠಾಣೆಯಲ್ಲಿರುವಾಗ ಪುತ್ತೂರು ಗ್ರಾಮದ ಹನುಮಂತನಗರ ಗಿರಿಜನ ಕೃಷಿ ಕಾಲೋನಿ ಎಂಬಲ್ಲಿ ಕೃಷ್ಣ ಎಂಬವರು ವಾಸವಾಗಿರುವ ಬಾಡಿಗೆ ಮನೆ ಹಿಂಬದಿಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಎಂಬ ಮಾದಕ ವಸ್ತು ಹಿಡಿದುಕೊಂಡು ಅದನ್ನು ಮಾರಾಟ ಮಾಡಲು ಗಿರಾಕಿಗಾಗಿ ಕಾಯುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ದೊರೆತಿದ್ದು ಅದರಂತೆ ಸಿಬ್ಬಂದಿಯವರೊಂದಿಗೆ ದಾಳಿಯ ಬಗ್ಗೆ ಪತ್ರಾಂಕಿತ ಅಧಿಕಾರಿಯವರು ಹಾಗೂ ಪಂಚರೊಂದಿಗೆ ಮಧ್ಯಾಹ್ನ 13.00 ಗಂಟೆಗೆ ಮಾಹಿತಿ ಪ್ರಕಾರ ಪುತ್ತೂರು ಗ್ರಾಮದ ಹನುಮಂತ ನಗರ ಗಿರಿಜನ ಕೃಷಿ ಕಾಲೋನಿ ಎಂಬಲ್ಲಿ ಕೃಷ್ಣ ಎಂಬವರು ವಾಸವಾಗಿರುವ ಮನೆಯ ಹಿಂಬದಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಏನೋ ವಸ್ತುವನ್ನು ವಶದಲ್ಲಿಟ್ಟುಕೊಂಡು ನಿಂತುಕೊಂಡಿದ್ದ ಆರೋಪಿ ಕೃಷ್ಣ ಜಲಗಾರ (32) ತಂದೆ ದಿ. ಈಶ್ವರ ಎಂಬಾತನನ್ನು ಸಿಬ್ಬಂದಿಗಳ ಸಹಾಯದಿಂದ ಪಂಚರು ಮತ್ತು ಪತ್ರಾಂಕಿತ ಅಧಿಕಾರಿಯವರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಆತನ ವಶವಿದ್ದ 800 ಗ್ರಾಂ ತೂಕದ ಗಾಂಜಾ ಇದರ ಅಂದಾಜು ಬೆಲೆ ಸುಮಾರು 5000/- ರೂಪಾಯಿ ಹಾಗೂ ಮೊಬೈಲ್ ಫೋನ್ -1 ನಗದು 300/- ರೂಪಾಯಿ ಈ

ಎಲ್ಲಾ ಸ್ವತ್ತುಗಳನ್ನು ಮಹಜರು ಮುಖಾಂತರ ಸ್ವಾದೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Please enter your comment!
Please enter your name here