ಉಡುಪಿ: ಉದ್ಯಾವರ ಫ್ರೆಂಡ್ಸ್ ವತಿಯಿಂದ ರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

imagesಉಡುಪಿ: ಉದ್ಯಾವರ ಫ್ರೆಂಡ್ಸ್ ಇದರ ಬೆಳ್ಳಿಹಬ್ಬ ಆಚರಣೆ ಹಾಗೂ ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉದ್ಘಾಟಿಸಲ್ಪಡುವ ನೂತ ಕ್ರಿಕೆಟ್ ಆಕಾಡೆಮಿ ಇದರ ಪ್ರಯುಕ್ತ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದೆ.
ಪಂದ್ಯಾಟವು ಎಪ್ರಿಲ್ 22, 23, 24 ರಂದು ಉದ್ಯಾವರ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ತಂಡಗಳಿಂದ ಪ್ರವೇಶ ಪತ್ರಗಳು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಟೆನ್ನಿಸ್ ಕ್ರಿಕೆಟ್ ಪಂದ್ಯಾಟಕ್ಕೆ ಅತೀ ಹೆಚ್ಚು ಮೊತ್ತದ ನಗದು ಬಹುಮಾನವನ್ನು ಇರಿಸಿದ್ದು, ಪ್ರಥಮ ಬಹುಮಾನವಾಗಿ ರೂ 3.50 ಲಕ್ಷ ನಗದು ಹಾಗೂ ಫಲಕ, ದ್ವಿತೀಯ ಬಹುಮಾನವಾಗಿ ರೂ 2 ಲಕ್ಷ ನಗದು ಹಾಗೂ ಫಲಕ ಒಳಗೊಂಡಿರುತ್ತದೆ. ಅಲ್ಲದೆ ವೈಯುಕ್ತಿ ವಿಭಾಗದಲ್ಲಿ ಕೂಡ ಆಕರ್ಷಕ ಮೊತ್ತದ ಬಹುಮಾನಗಳು ಕೂಡ ಇರಿಸಲಾಗಿದೆ.
ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳು ತಮ್ಮ ಹಾಜರಾತಿಯನ್ನು ಫೋನ್ ಮೂಲಕ ನಿಗದಿ ಪಡಿಸಿಕೊಳ್ಳಲು ಅವಕಾಶವಿದ್ದು, ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗೆ +918050333335, +919902405007 ಸಂಪರ್ಕಿಸಲು ಕೋರಲಾಗಿದೆ.

Leave a Reply

Please enter your comment!
Please enter your name here