ಉಡುಪಿ: ಉಸ್ತುವಾರಿ ಸಚಿವರಿಂದ ಕೊಲ್ಲೂರಿನಲ್ಲಿ 48 ಕೋಟಿ ರೂ ವೆಚ್ಚದ ಕಾಮಗಾರಿ ಭೂಮಿ ಪೂಜೆ

ಉಡುಪಿ : ಕೊಲ್ಲೂರು ದೇವಸ್ಥಾನಕ್ಕೆ ಹಾಗೂ ಪಟ್ಟಣಕ್ಕೆ 48 ಕೋಟಿ ರೂ ಗಳ ವೆಚ್ಚದಲ್ಲಿ , ಶುಧ್ಧೀಕರಿಸಿದ ನೀರು ಸರಬರಾಜು ಕಾಮಗಾರಿಗೆ ಹಾಗೂ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದೀಕರಣ ಘಟಕದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಇಂದು ಭೂಮಿ ಪೂಜೆ ನೆರವೇರಿಸಿದರು.

kollur 1 kollur

ಈ ಕಾಮಗಾರಿಯಿಂದ ಕೊಲ್ಲೂರು ಗ್ರಾಮಕ್ಕೆ ಪ್ರತಿದಿನ 2.5 ಲಕ್ಷ ಲೀ. ಶುದ್ದ ಕುಡಿಯುವ ನೀರು ನೀಡಲಾಗುವುದು ಎಂದ ಹೇಳಿದ ಸಚಿವರು, ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಮುಖಾಂತರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಗೋಪಾಲ ಪೂಜಾರಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿ.ಪ್ರಸನ್ನ, ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here