ಉಡುಪಿ: ಎಸ್ಪಿ ಅಣ್ಣಾಮಲೈ ಅವರಿಂದ ವಿದ್ಯಾರ್ಥಿ ಸ್ನೇಹಿ ನೂತನ ಪ್ರಯೋಗ – ವಿದ್ಯಾರ್ಥಿಗಳಿಗೆ ಅಕ್ಟೋಬರ್ 1ರಿಂದ ಹೆಲ್ಮೆಟ್

ಉಡುಪಿ: ಅಫಘಾತದಲ್ಲಿ ವಿದ್ಯಾರ್ಥಿಗಳ ಜೀವ ಹಾಗೂ ತಲೆಯನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ದಕ್ಷ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಅವರು  ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಅಕ್ಟೋಬರ್ 1 ರಿಂದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಕಡ್ಡಾಯ ಮಾಡಿದ್ದಾರೆ.

ಹೊಂಡಮಯ ರಸ್ತೆಗಳು ಒಂದೆಡೆಯಾದರೆ ಹೊಸದಾಗಿ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ ಇನ್ನೊಂಡೆ, ಇದರಿಂದ ಪ್ರತಿವರ್ಷವೂ ಕೂಡ ಹಲವಾರು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳ ಅತೀ ವೇಗ ಸಹಿತ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡು ತನ್ನ ಕುಡಿಯ ಭವಿಷ್ಯದ ಕನಸು ಹೊತ್ತ ಹೆತ್ತವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ.  ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇತ್ತೀಚೆಗೆ ಅಂಬಾಗಿಲು ನಿಟ್ಟೂರು ಬಳಿ ಸ್ನೇಹಾ ಟ್ಯುಟೋರಿಯಲ್ ಕಾಲೇಜಿಗೆ ತೆರಳುತ್ತಿದ್ದ 17 ವರ್ಷದ ವಿದ್ಯಾರ್ಥಿ, ನಿಟ್ಟೆ ಕಾರ್ಕಳ, ಕಾಪು, ಕುಂದಾಪುರಗಳಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳ ರಸ್ತೆ ಅಪಘಾತದ ಸಾವು ಜಿಲ್ಲಾ ಎಸ್ಪಿಯವರಿಗೆ ಇಂತಹುದೊಂದು ನಿರ್ಧಾರಕ್ಕೆ ಬರಲು ಪ್ರೇರಣೆಯಾಯಿತು ಎನ್ನುತ್ತಾರೆ.

bus_conductor_accident_mangalorean_20150307-005

ಕರಾವಳಿ ಬೈಪಾಸ್ ನಿಂದ ಮಣಿಪಾಲ ರಸ್ತೆ ಚತುಷ್ಪಥ ಹಾಗೂ ನೇರವಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ವೇಗದ ಮಿತಿಯ ಅಗತ್ಯವೇ ಇಲ್ಲ ಎಂಬಂತೆ ಅಡ್ಡಾದಿಡ್ಡಿಯಾಗಿ ಚಲಿಸುವುದ ಸರ್ವೆ ಸಾಮಾನ್ಯವಾಗಿದೆ. ಇತ್ತೀಚೆಗಷ್ಟೆ ಜಿಲ್ಲಾ ಎಸ್ಪಿಯವರು ಖುದ್ದಾಗಿ ಎಮ್ ಜಿ ಎಮ್ ಕಡಿಯಾಳಿ ಮಧ್ಯೆ ಜಾಲಿ ರೈಡ್ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹಿಡಿದು ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿಗಳ ಹೆತ್ತವರನ್ನು ತನ್ನ ಕಛೇರಿಗೆ ಬರಹೇಳಿ ಬುದ್ದಿ ಹೇಳಿದ್ದರು.

ಸಂಚಾರಿ ಕಾಯಿದೆಗಳನ್ನು ಉಲ್ಲಂಘಿಸುವ ಬಗ್ಗೆ ಆಗಾಗ್ಗೆ ದೂರುಗಳು ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಲ್ಮೇಟ್ ಕಡ್ಡಾಯಗೊಳಿಸುವುದರಿಂದ ಪರೋಕ್ಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಣ್ಣಾಮಲೈ ಉದ್ದೇಶವಾಗಿದೆ. ಹೆಲ್ಮೇಟ್ ಕಡ್ಡಾಯ ಎನ್ನುವುದು ಸರಕಾರಿ ಆದೇಶವಲ್ಲ ಬದಲಾಗಿ ವಿದ್ಯಾರ್ಥಿಗಳ ಮನವೊಲಿಸುವುದರೊಂದಿಗೆ ಹೆಲ್ಮೆಟ್ ಧರಿಸಿದೆ ವಾಹನ ಚಲಾಯಿಸಿಕೊಂಡು ಬಂದಲ್ಲಿ ಕಾಲೇಜಿನ ಗೇಟಿನೊಳಗೆ ಪ್ರವೇಶಿಸಲು ನಿರ್ಭಂದ ಹೇರುವುದರ ಕುರಿತು ಈಗಾಗಲೇ ಕಾಲೇಜುಗಳ ಆಡಳಿತ ಮಂಡಳಿಯವರ ಜೊತೆ ಚರ್ಚೆ ನಡೆಸಿ ಸೂಚನೆ ನೀಡಲಾಗಿದೆ. ಇದಕ್ಕೆ ಕಾಲೇಜಿನವರು ಕೂಡ ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.  ಅಲ್ಲದೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್ಪಿಯವರೇ ಖುದ್ದಾಗಿ ಡಿವೈಎಸ್ಪಿ ಜೊತೆ ಕಾಲೇಜಿಗೆ ಭೇಟಿ ನೀಡಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ 11 ಕಾಲೇಜಿಗೆ ಭೇಟಿ ನೀಡಿದ್ದು, ಉಳಿದ 26 ಕಾಲೇಜುಗಳಿಗೆ ಶೀಘ್ರ ಭೇಟಿ ನೀಡುವ ಉದ್ದೇಶ ಅವರದ್ದಾಗಿದೆ.

helmet_b_29-7-2011

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ದಂಡ ವಿಧಿಸುವ ಚಿಂತನೆ ಇಲ್ಲ ಬದಲಾಗಿ ಕಾಲೇಜು ವಿದ್ಯಾರ್ಥಿಗಳೂ ತಮ್ಮ ಜೀವ ಅಮೂಲ್ಯ ಎನ್ನುವುದನ್ನು ಅರಿತು ತಾವೇ ಸ್ವಯಂ ಪ್ರೇರಿತರಾಗಿ ಇಂತಹ ಕೆಲಸದಲ್ಲಿ ಭಾಗಿಯಾಗಬೇಕು. ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡರೆ ಅದರಿಂದ ಸಂಕಷ್ಟಕ್ಕೆ ಒಳಗಾಗುವ ಹೆತ್ತವರ ನೋವನ್ನು ಕೂಡ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಎಸ್ಪಿಯವರ ಅಪೇಕ್ಷೆ.

ರಾಜ್ಯದ ಏಳು ಮಹಾನಗರ ಪಾಲಿಕೆಗಳ ಸಹಿತತ ದೇಶದ ಮಹಾನಗರಗಳಿಗೆ ಮಾತ್ರ ಸೀಮಿತವಾದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರರಿದೂ ಅನ್ವಯಿಸುಲು ಚಿಂತನೆ ನಡೆಸಿದ್ದು  ಈ ಕುರಿತು ಅಣ್ಣಾಮಲೈ ಜಿಲ್ಲಾಧಿಕಾರಿ ಹಾಗೂ ರಾಜ್ಯಸರಕಾರಕ್ಕೆ ಪತ್ರ ಬರೆಯುವ ಚಿಂತನೆ ನಡೆಸಿಲಾಗಿದೆ.

ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಗ ಅಥವಾ ಮಗಳು ಮನೆಯಿಂದ ಕಾಲೇಜಿಗೆ ಅಥವಾ ಬೇರೆಡೆ ದ್ವಿಚಕ್ರ ವಾಃನದಲ್ಲಿ ಚಲಾಯಿಸುವಾಗ ತಿಳಿಹೇಳಬೇಕು. ಹೆಲ್ಮೆಟ್ ಧರಿಸಿ ರಸ್ತೆಯಲ್ಲಿ ಬೈಕ್ ಚಲಾಯಿಸುವುದು ವಿಧ್ಯಾರ್ಥಿಗಳಿಗೆ ಕಿರಿಕಿರಿ ಅನಿಸಿದೆ ಅದು ನಿಜ ಹೆಲ್ಮೆಟ್ ಕಾಲೇಜಿನೊಳಗೆ ಹೆಲ್ಮೆಟ್ ಧರಿಸಿದ್ದರೆ ಅಂತಹ ವಿದ್ಯಾರ್ಥಿಗಳ ಕಾಲೇಜಿನ ಸಮವಸ್ತ್ರ, ವಾಹನಕ್ಕೆ  ಅಂಟಿಸಿದ ಸ್ಟ್ರಿಕ್ಕರ್ ಇತ್ಯಾದಿ ಆಧಾರದ್ಲಲಿ ಕಾನೂನು ಕ್ರಮವನ್ನು ಕೈಗೊಳ್ಳವಿದೆ.

images (4)

ಈ ಕುರಿತು ಮಾಧ್ಯಮದವರೊಂಗೆ ಮಾತನಾಡಿದ  ಉಡುಪಿ ನಗರ ಸಂಚಾರಿ ಠಾಣೆಯ ಮಧು ಟಿ ಎಸ್ ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಧದಲ್ಲಿ ತೀವ್ರ ಗಾಯ, ಅಮೂಲ್ಯ ಜೀವ ಹಾನಿಯಾದಲ್ಲಿ ಅದು ಹೆತ್ತವರಿಗೆ ಮಾತ್ರವಲ್ಲದೆ, ಕಾಲೇಜು, ಸಮಾಜ ಹಾಗೂ ದೇಶಕ್ಕೆ ಸಂಭವಿಸುವ ಬಲು ದೊಡ್ಡ ನಷ್ಟ. ಆದ್ದರಿಂದ ಹೆಲ್ಮೆಟ್ ಧರಿಸುವಿಕೆ ಕಡ್ಡಾಯವಲ್ಲದೆ ಹೋದರು ಜೀವದ ಸುರಕ್ಷತೆಯ ದೃಷ್ಟಿಯಲ್ಲಿ ಹೆಲ್ಮೆಟ್ ಬಳಸುವುದು ಉತ್ತಮ ಎನ್ನುತ್ತಾರೆ.

ಯಾವುದೇ ಸರಕಾರಿ ಆದೇಶ ಇಲ್ಲದೆ ಹೋದರೂ ಜಿಲ್ಲೆಯ ಕಾಲೇಜುಗಳ ಸಹಕಾರ ಪಡೆದು, ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಕಡ್ಡಾಯ ಯೋಜನೆ ಜಾರಿಗೆ ತರುವ ಯೋಜನೆ ಎಸ್ಪಿಯವರದ್ದಾಗಿದ್ದು, ಕಾಲೇಜುಗಳ ಮುಖ್ಯಸ್ಥರು ತಮ್ಮ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಹೆಲ್ಮಟ್ ಧರಿಸುವ ನಿಟ್ಟಿನಲ್ಲಿ ಮನವರಿಕೆ ಮಾಡಬೇಕು. ಸಪ್ಟೆಂಬರ್ ಅಂತ್ಯಕ್ಕೆ ಪೋಲಿಸರು ಕಾಲೇಜು ವಿದ್ಯಾರ್ಥಿಗಳ ಬೈಕುಗಳನ್ನು ಪರಿಶೀಲಿಸಿ ಸ್ಟಿಕ್ಕರ್ ಅಂಟಿಸಲಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಮಾಡಲಿದ್ದಾರೆ. ಇಂತಹ ವಿದ್ಯಾರ್ಥಿ ಜೀವ ಸ್ನೇಹಿಯಾದ ನೂತನ ಪ್ರಯೋಗ ಯಶಸ್ವಿಯಾಗುವುದರೊಂದಿಗೆ ವಿದ್ಯಾರ್ಥಿಗಳ ಅಮೂಲ್ಯ ಜೀವ ಉಳಿಯಲಿ ಎನ್ನುವುದು ಎಲ್ಲರ ಕಳಕಳಿ.

Leave a Reply

Please enter your comment!
Please enter your name here