ಉಡುಪಿ : ಎ.27ರಿಂದ “ಉಡುಪಿ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ ಪಂದ್ಯಾಟ

ಉಡುಪಿ: ಉಡುಪಿ ಕ್ರಿಕೆಟ್‌ ಕ್ಲಬ್‌ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಕೂಟ “ಉಡುಪಿ ಪ್ರೀಮಿಯರ್‌ ಲೀಗ್‌’ ಟ್ರೋಫಿಯನ್ನು ಎ.27ರಿಂದ ಮೇ 1ರವರೆಗೆ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಪಂದ್ಯದಲ್ಲಿ ಕೊಲ್ಲಿ ರಾಷ್ಟಗಳ 12, ನೆರೆಯ ರಾಜ್ಯ ಕೇರಳ, ಆಂಧ್ರ ಪ್ರದೇಶ, ಗೋವಾ, ಮುಂಬೈ ಮತ್ತು ಕರ್ನಾಟಕ ರಾಜ್ಯದ 24 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕ್ಲಬ್‌ನ ಅಧ್ಯಕ್ಷ ಮುಹಮ್ಮದ್‌ ಸಾದಿಕ್‌ ಕಾಪು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಟಿ-10 ಹಾರ್ಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾಟ ಇದಾಗಿದ್ದು, ಇದರಲ್ಲಿ ದಾಖಲೆ ಎಂಬಂತೆ ವಿನ್ನರ್ಸಿ ತಂಡಕ್ಕೆ 20ಲಕ್ಷ ರೂ. ನಗದು ಹಾಗೂ ಟ್ರೋಫಿ ಮತ್ತು ರನ್ನರ್ಸಿ ತಂಡಕ್ಕೆ 10ಲಕ್ಷ ರೂ. ನಗದು ಮತ್ತು ಟ್ರೋಫಿ, ಸೆಮಿಫೈನಲ್‌ ನಲ್ಲಿ ಸೋತ ತಂಡಗಳಿಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು. ಸರಣಿಶ್ರೇಷ್ಠ ಆಟಗಾರನಿಗೆ ಕಾರು, ಉತ್ತಮ ದಾಂಡಿಗ ಹಾಗೂ ಉತ್ತಮ ಎಸೆತಗಾರನಿಗೆ ಬೈಕ್‌ ಬಹುಮಾನವಾಗಿ ನೀಡಲಾಗುವುದು. ಪಂದ್ಯಶ್ರೇಷ್ಠ, ಉತ್ತಮ ಕ್ಷೇತ್ರ ರಕ್ಷಕ, ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರನಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಪ್ರವೇಶ ಶುಲ್ಕ 2.25 ಲಕ್ಷ ರೂ. ಆಗಿದೆ.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಮುಹಮ್ಮದ್‌ ಸಮೀಉದ್ದೀನ್‌ ಹೈದರಾ ಬಾದ್‌, ಕೋಶಾಧಿಕಾರಿ ಇರ್ಫಾನ್‌ ಖಾದರ್‌, ಮಾರ್ಕೆಟಿಂಗ್‌ ಎಕ್ಸಿ ಕ್ಯೂಟಿವ್‌ ಮುಹಮ್ಮದ್‌ ನಿಯಾಝ್, ಕಾನೂನು ಸಲಹೆ ಗಾರ ಸುಖೇಶ್‌ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here