ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆ ಇದರ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಸಂಘದ ಕಛೇರಿಯಲ್ಲಿ ಭಾನುವಾರ ಜರುಗಿತು. ಸಭೆಯಲ್ಲಿ ಆಯವ್ಯಯ ಸೇರಿದಂತೆ ಸಾಧನೆಗಳ ಪಟ್ಟಿ ತಯಾರಿಸಿ ಕೇಂದ್ರ ಕಛೇರಿಗೆ ನೀಡಲು ನಿರ್ಧರಿಸಲಾಯಿತು.

karmikavedike-18-02-2016

ವೇದಿಕೆಯ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ರವಿ ಶೆಟ್ಟಿ, ಜಿಲ್ಲಾ ಸಂಚಾಲಕರಾಗಿ, ರಾಘವೇಂದ್ರ ಕುಂದರ್ ಬ್ರಹ್ಮಾವರ, ಸಹ ಸಂಚಾಲಕರಾಗಿ ಸುಧಾಕರ್ ನಾಯಕ್ ಮಣಿಪಾಲ್, ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ್ ಕೊಡಂಕೂರು, ಮಹಿಳಾ ಉಪಾಧ್ಯಕ್ಷರಾಗಿ ನೇತ್ರಾವತಿ ಈರಣ್ಣ, ಮಹಿಳಾ ಕಾರ್ಯದರ್ಶಿಯಾಗಿ ಕುಮಾರಿ ತೇಜಸ್ವಿನಿ, ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಮಹಮ್ಮದ್ ಜಾವಿದ್, ಸಲಹೆಗಾರರಾಗಿ ವಿಠಲ್ ಆಚಾರ್ಯ, ಮಹಾಬಲ ಶೆಟ್ಟಿ, ಜೈರಾಮ್ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿ ಚಂದ್ರ ಪೂಜಾರಿ, ಗ್ಲ್ಯಾಡ್ಸನ್, ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರತಿನಿಧಿಗಳಾಗಿ ಪ್ರದೀಪ್, ಶಶಾಂಕ್, ಅಂಪಾರು ಘಟಕದ ರಾಜೀವ್ ಶೆಟ್ಟಿ, ಭಾಸ್ಕರ್, ಸ್ವಯಂ ಸೇವಾ ಘಟಕಾಧ್ಯಕ್ಷರಾಗಿ ಗೌತಮ್, ಮಲ್ಲಿಕಾರ್ಜುನ್, ಕ್ರೀಡಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಮಾಂಜಿ, ನೀಲೇಶ್ ಕುಮಾರ್, ಮಾಧ್ಯಮ ವಕ್ತಾರರಾಗಿ ರಕ್ಷಿತ್ ಶೆಟ್ಟಿ ಕೆಮ್ಮಣ್ಣು, ಕಾನೂನು ಸಲಹೆಗಾರರಾಗಿ ಸತೀಶ್ ಶೆಟ್ಟಿ, ಆನಂದ್ ಆಯ್ಕೆಯಾದರು.

Leave a Reply