ಉಡುಪಿ : ಕಾರ್ಮಿಕ ವೇದಿಕೆಯಿಂದ ಉಚಿತ ವಿಮಾ ಕಾರ್ಡ್ ವಿತರಣೆ

ಉಡುಪಿ : ಕರ್ನಾಟಕ ಕಾರ್ಮಿಕರ ವೇದಿಕೆಯ ವತಿಯಿಂದ ಸಿಟಿಬಸ್ ನೌಕರರಿಗೆ ಹೈಟೆಕ್ ಹಾಸ್ಪಿಟಲ್ ಸಹಬಾಗಿತ್ವದಲ್ಲಿ 30 ಸಾವಿರದ ಉಚಿತ ಆರೋಗ್ಯ ವಿಮೆ ನೀಡಿ ಮಾತಾನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ರವಿಶೆಟ್ಟಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದರು.

insurence_karmikavedike 08-01-2016 17-15-06

ಈ ಸಂದರ್ಭದಲ್ಲಿ ವೇದಿಕೆಯ ಸಿಟಿಬಸ್ ನೌಕರರ ಘಟಕಧ್ಯಕ್ಷ ಮಹಮ್ಮದ್ ಹನೀಫ್, ಚಾಲಕ ಸದಾನಂದ ಪೂಜಾರಿಯವರಿಗೆ ವಿಮಾ ಕಾರ್ಡ್ ಹಸ್ತಾಂತರಿಸಲಾಯಿತು.

ಕೊಡಂಕೂರು ಘಟಕಾಧ್ಯಕ್ಷ ಮಂಜುನಾಥ್, ಮಹಿಳಾ ಜಿಲ್ಲಾಧ್ಯಕ್ಷೆ ಚಂದ್ರಿಕಾ ಶೆಟ್ಟಿ ಸ್ವಯಂ ಸೇವಕ ಮುಖಂಡ ಸಂದೀಪ್ ಕೊಡಂಕೂರು, ರೈತ ಮುಖಂಡ ವೀರಣ್ಣ ಕುರುವತ್ತಿಗೌಡರ್, ಮಹಮದ್ ಇರ್ಫಾನ್, ಸಂತೋಷ್, ನಾರಾಯಣ, ಮತ್ತಿತರರು ಹಾಜರಿದ್ದರು.

Leave a Reply

Please enter your comment!
Please enter your name here