ಉಡುಪಿ: ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಚಿತ್ರಕಲಾ ಶಿಬಿರ ವರ್ಣೋದಯ

ಉಡುಪಿ: ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಿದಿಯೂರು ಸ್ಕೂಲ್ ಆಫ್ ಆರ್ಟ್ಸ್ ಉಡುಪಿ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ವರ್ಣೋದಯ ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಮಾರ್ಚ್ 5 ಮತ್ತು 6 ರಂದು ನಡೆಯಲಿದೆ ಎಂದು ಟ್ರಸ್ಟಿನ ಪ್ರವರ್ತಕ ಕೆ ಉದಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

02-03-2016-udaykumarshetty

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ರಾಜ್ಯ ರಾಷ್ಟ್ರಮಟ್ಟದ ಪ್ರಸಿದ್ದ ಚಿತ್ರಕಲಾವಿದರು ಇದರಲ್ಲಿ ಎರಡು ದಿವಸ ಭಾಗವಹಿಸಲಿದ್ದು, ರಮ್ಯ ರಮಣೀಯ ಕಲಾಕೃತಿಗಳು ಅವರಿಂದ ಮೂಡಿಬರಲಿದೆ. ಅದರೊಂದಿಗೆ ಯುವಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಲವಾರು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಾರ್ಚ್ 6 ರಂದು ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯ ವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಲಾಗಿದೆ.

1ರಿಂದ 4 ತರಗತಿ – ವಿಷಯ – ಐಚ್ಛಿಕ, 5 ರಿಂದ 7 ತರಗತಿ – ಊರ ಜಾತ್ರೆ, 8 ರಿಂದ 10 ತರಗತಿ –  ರಾಷ್ಟ್ರೀಯ ನಾಯಕರ ಭಾವಚಿತ್ರ, ಸಾರ್ವಜನಿಕರಿಗೆ ಉಡುಪಿ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ, ಪಾರ್ಲಿಮೆಂಟ್ ಹೌಸ್ ಅಥವಾ ವಿಧಾನ ಸೌಧ.

ವರ್ಣೋದಯ ಉದ್ಘಾಟನಾ ಸಮಾರಂಭ ಮಾರ್ಚ್ 5 ರಂದು 10 ಗಂಟೆಗೆ ನಡೆಯಲಿದ್ದು, ನಾಡೋಜ ಡಾ ಜಿ ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಲಿತಾ ಕಲಾ ಅಕಾಡೆಮಿ ಬೆಂಗಳೂರಿನ ಅಧ್ಯಕ್ಷರಾದ ಡಾ ಎಂ ಎಸ್ ಮೂರ್ತಿ, ಉಡುಪಿ ಎಸ್ ಪಿ ಅಣ್ಣಾಮಲೈ, ಉಡುಪಿ ಚಿತ್ರಕಲಾ ಮಂದಿರ ಕಲಾ ಶಾಲೆ ಕಾರ್ಯದರ್ಶಿ ಡಾ ನಿರಂಜನ್ ಯು ಸಿ, ಚಿತ್ರಕಲಾವಿದ ಪೀಟರ್ ಎ ಲೂಯಿಸ್, ಸಿ ಎ ಗಣೇಶ್ ಕಾಂಚನ್ ಭಾಗವಹಿಸಲಿದ್ದಾರೆ.

ಚಿತ್ರಕಲಾ ಶಿಬಿರದಲ್ಲಿ ರಾಜ್ಯದಶ್ರೇಷ್ಟ ಕಲಾವಿದರಾದ ಬಾಬುರಾವ್ ನಡೋನಿ, ಬೆಳಗಾವಿ, ಜಯರಾಮ್ ಚವಾಣ್ ಯಾದಗಿರಿ, ರಮೇಶ್ ಚವಾಣ್, ಬಿಜಾಪುರ, ಎಲ್ ಎನ್ ಮನೋಕರ್ ಕಲಬುರ್ಗಿ, ಹನುಮಂತ ಬಿ ಹರಸೂರು, ತುಮಕೂರು, ಕಂದನ್ ಜಿ ಮಂಗಳೂರು, ಎನ್ ಎಸ್ ಪತ್ತಾರ್ ಮಂಗಳೂರು, ಪೆರ್ಮುದೆ ಮೋಹನ್ ಕುಮಾರ್ ಮಂಗಳೂರು, ವಿಕ್ರಮ್ ಶೆಟ್ಟಿ ಮಂಗಳೂರು, ಕೆ ಎಲ್ ಭಟ್ ಉಡುಪಿ , ಶೇಖರ್ ಕಲಾಪ್ರತಿಭಾ ಉಡುಪಿ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ ಮಾರ್ಚ್ 6 ರಂದು ನಡೆಯಲಿದ್ದು ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಪ್ರಮೊದ್ ಮಧ್ವರಾಜ್, ಆರ್ ಎಸ್ ಎಸ್ ಸಂಘ ಚಾಲಕರಾದ ಟಿ ಶಂಭು ಶೆಟ್ಟಿ, ನಗರಸಭೆಯ ಪೌರಾಯುಕ್ತ ಡಿ ಮಂಜುನಾಥಯ್ಯ, ಕಿದಿಯೂರು ಹೋಟೆಲಿನ ಭುವನೇಂದ್ರ ಕಿದಿಯೂರು ಇನ್ನಿತರರು ಭಾಗವಹಿಸಲಿದ್ದಾರೆ.

Leave a Reply

Please enter your comment!
Please enter your name here