ಉಡುಪಿ: ಗ್ರಾಹಕ ಹಕ್ಕು ಜಾಗೃತಿ ಅವಶ್ಯಕ- ವೆರೋನಿಕಾ ಕರ್ನೇಲಿಯೊ

ಉಡುಪಿ: ಆಂಟಿಬಯಾಟಿಕ್ಸ್‍ಗಳು ಆಹಾರವಾಗದಿರಲಿ, ನಾವು ಉತ್ತಮ ಬಾಳ್ವೆ ನಡೆಸಲು ಪ್ರತಿಯೊಂದರ ಬಗ್ಗೆ ಮಾಹಿತಿ ಹಾಗೂ ಕಾಳಜಿ ಇದ್ದರೆ ಮಾತ್ರ ಸಾಧ್ಯ. ಗ್ರಾಹಕರು ಹಕ್ಕಿನ ಬಗ್ಗೆ ತಿಳಿದುಕೊಂಡು ಇತರರಿಗೆ ಮಾಹಿತಿ ನೀಡುವುದರಿಂದ ಸಾಮೂಹಿಕ ಮೋಸಗಳು ನಿವಾರಣೆಯಾಗಲಿದೆ ಎಂದು ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೊ ಹೇಳಿದ್ದಾರೆ.

consumer-day-udupi consumer-day-udupi -01

ಅವರಿಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಡುಪಿ, ಉಡುಪಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಮತ್ತು ವಾರ್ತಾ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಿಶ್ವ ಗ್ರಾಹಕರ ದಿನಾಚರಣೆ ಮಾರ್ಚ್ 2016’ ‘Antibiotics off the menu’ ‘ಆ್ಯಂಟಿಬಯೋಟಿಕ್ಸ್‍ಗಳೇ ಆಹಾರವಾಗದಿರಲಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇತ್ತೀಚಿಗೆ ಉಡುಪಿಯಲ್ಲಿ ಆಯೋಜಿಸಿದ್ದ ಸಾಬೂನು ಮೇಳದಲ್ಲಿ ಬಳಕೆಯ ಅವಧಿ ಮೀರಿದ ಸಾಬೂನು ಹಿಂತಿರುಗಿಸಿದ ಗ್ರಾಹಕನನ್ನು ಸ್ಮರಿಸಿದ ಅಧ್ಯಕ್ಷರು ಜಿಲ್ಲೆಯಲ್ಲಿ ಗ್ರಾಹಕ ತಿಳುವಳಿಕೆ ಇರುವ ಜನರಿದ್ದಾರೆ ಎಂದು ಅನಿಸಿಕೆ ಹಂಚಿಕೊಂಡರು.
ಸಮಾರಂಭದಲ್ಲಿ ಉಪನ್ಯಾಸ ನೀಡಿದ ಕಮ್ಯುನಿಟಿ ಹೆಲ್ತ್ ಮೆಡಿಸಿನ್ ಕೆಎಂಸಿ ಮಣಿಪಾಲದ ಅವಿನಾಶ್ ಶೆಟ್ಟಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ನಮ್ಮ ದೇಶದಲ್ಲಿ ಗ್ರಾಹಕ ಹಕ್ಕು ರಕ್ಷಣೆಗೆ ಸಾಕಷ್ಟು ಕಾನೂನುಗಳಿದ್ದರೂ ಅನುಷ್ಠಾನ ಕಷ್ಟ ಎಂದರಲ್ಲದೆ, ಗ್ರಾಹಕ ಹಕ್ಕುಗಳ ಬಗ್ಗೆ ಮಾಹಿತಿ ಪಡೆಯುವುದರಿಂದ ನಮ್ಮ ಜೀವನಕ್ರಮದಲ್ಲಿ ಸುಧಾರಣೆ ಸಾಧ್ಯ ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಶೋಭಾ ಸಿ ಎ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ನಿರ್ಮಲಾ ಉಪಸ್ಥಿತರಿದ್ದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಉಪನಿರ್ದೇಶಕ ಎಸ್ ಯೋಗೇಶ್ವರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್. ಹಿಪ್ಪರಗಿ ವಂದಿಸಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ವಿವಿಧ ಬಗೆಯ ತೂಕ ಮತ್ತು ಳತೆ ಮಾಪಕಗಳ ಪ್ರದರ್ಶನ ಆಯೋಜಿಸಲಾಗಿತ್ತು

Leave a Reply

Please enter your comment!
Please enter your name here