ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1513231 ಮತದಾರರು

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1513231 ಮತದಾರರು

ಉಡುಪಿ: ಎಪ್ರಿಲ್ 18 ರಂದು ನಡೆಯುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ, ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರದ 1837 ಮತಗಟ್ಟೆಯಲ್ಲಿ 738503 ಪುರುಷರು, 774674 ಮಹಿಳೆಯರು, 54 ಇತರೆ ಸೇರಿ ಒಟ್ಟು 1513231 ಮತದಾರರಿದ್ದಾರೆ.

ಕುಂದಾಪುರದ 222 ಮತಗಟ್ಟೆ ವ್ಯಾಪ್ತಿಯಲ್ಲಿ 97692 ಪುರುಷರು, 105585 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 203279, ಉಡುಪಿ ಯ 226 ಮತಗಟ್ಟೆ ವ್ಯಾಪ್ತಿಯಲ್ಲಿ 101386 ಪುರುಷರು, 108116 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 209504, ಕಾಪು ನ 208 ಮತಗಟ್ಟೆ ವ್ಯಾಪ್ತಿಯಲ್ಲಿ 87704 ಪುರುಷರು, 96384 ಮಹಿಳೆಯರು ಮತ್ತು ಇತರೆ 13 ಸೇರಿ ಒಟ್ಟು 184101, ಕಾರ್ಕಳದ 209 ಮತಗಟ್ಟೆ ವ್ಯಾಪ್ತಿಯಲ್ಲಿ 87915 ಪುರುಷರು, 95612 ಮಹಿಳೆಯರು ಮತ್ತು ಇತರೆ 1 ಸೇರಿ ಒಟ್ಟು 183528,ಶೃಂಗೇರಿಯ 256 ಮತಗಟ್ಟೆ ವ್ಯಾಪ್ತಿಯಲ್ಲಿ 81605 ಪುರುಷರು, 83889 ಮಹಿಳೆಯರು ಮತ್ತು ಇತರೆ 4 ಸೇರಿ ಒಟ್ಟು 165498, ಮೂಡಿಗೆರೆಯ 231 ಮತಗಟ್ಟೆ ವ್ಯಾಪ್ತಿಯಲ್ಲಿ 83054 ಪುರುಷರು, 85711 ಮಹಿಳೆಯರು ಮತ್ತು ಇತರೆ 9 ಸೇರಿ ಒಟ್ಟು 168774, ಚಿಕ್ಕಮಗಳೂರಿನ 257 ಮತಗಟ್ಟೆ ವ್ಯಾಪ್ತಿಯಲ್ಲಿ 106964 ಪುರುಷರು, 107971 ಮಹಿಳೆಯರು ಮತ್ತು ಇತರೆ 23 ಸೇರಿ ಒಟ್ಟು 219958 ಹಾಗೂ ತರೀಕೆರೆಯ 228 ಮತಗಟ್ಟೆ ವ್ಯಾಪ್ತಿಯಲ್ಲಿ 92183 ಪುರುಷರು, 91406 ಮಹಿಳೆಯರು ಸೇರಿದಂತೆ ಒಟ್ಟು 183589 ಮತದಾರರಿದ್ದಾರೆ.