ಉಡುಪಿ: ಜೈಲು ಅಪರಾಧಿಗಳನ್ನು ತಿದ್ದುವ ಜಾಗ: ಎಸ್ ಪಿ ಕೆ ಅಣ್ಣಾಮಲೈ

Spread the love

ಉಡುಪಿ: ತಪ್ಪುಗಳನ್ನು ಯಾರೂ ಬೇಕೆಂದೇ ಮಾಡುವುದಿಲ್ಲ, ಕೆಲವೊಂದು ಸಂದರ್ಭ ನಮ್ಮನ್ನು ತಪ್ಪು ಮಾಡಿಸುತ್ತದೆ. ಜೈಲು ಅಪರಾಧಿಗಳನ್ನು ತಿದ್ದುವ ಜಾಗವಾಗಿದ್ದು, ಸಿಗುವ ಅವಕಾಶಗಳನ್ನು ಉಪಯೋಗಿಸಿ ಒಳ್ಳೆಯವರಾಗಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕ ಕೆ ಅಣ್ಣಾಮಲೈ ಹೇಳಿದರು.

ಅವರು ಶುಕ್ರವಾರ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಉಡುಪಿ, ಉಡುಪಿ ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಹಿರಿಯಡ್ಕ ಅಂಜಾರಿನ ಜಿಲ್ಲಾ ಕಾರಾಗೃಹದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

gandhijayanth_hiriyadka 02-10-2014 09-57-15ಮನೋವೈದ್ಯ ಡಾ ಪಿವಿ ಭಂಡಾರಿ ಅಪರಾಧಿಗಳು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷೆ ಮಾನಸಿಕ ಹಾಗೂ ವ್ಯಕ್ತಿತ್ವದ ಬದಲಾವಣೆಗೆ ದಾರಿಯಾಗಬೇಕು. ಹಿಂದಿನ ಬದುಕನ್ನು ನೆನಪಿಸಿಕೊಂಡು ದುಃಖ ಪಡುವುದಕ್ಕಿಂತ ಸಕಾರಾತ್ಮಕ ಚಿಂತನೆಗಳಿಂದ ಬದುಕು ರೂಪಿಸಿಕೊಳ್ಳಬೇಕು. ಎಲ್ಲರೂ ಒಳ್ಳೆಯವರೇ ಆದರೆ ಸಂದರ್ಭಗಳು ಮತ್ತು ಪರಿಸ್ಥಿತಿ ನಮ್ಮನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎಂದರು.

ಬದಲಾಗುವುದು ಹೇಗೆ ಎಂಬ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಜೈಲಿನ ಲೈಬ್ರೆರಿಯಲ್ಲಿರುವ ಪುಸ್ತಕಗಳನ್ನು ಓದಬೇಕು. ಕಥೆ-ಕವನಗಳನ್ನು ಬರೆಯುವ ಪ್ರಯತ್ನ ಮಾಡಬೇಕು. ವ್ಯಾಯಮವೂ ಜೀವನಕ್ಕೆ ಮುಖ್ಯ. ಅದು ಒಳಗಿನಿಂದ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಎಂದರು.


Spread the love