ಉಡುಪಿ: ಧರ್ಮವನ್ನು ಪರಸ್ಪರ ಅರಿತು ಕೊಳ್ಳುವ ಕೆಲಸ ನಡೆಯಬೇಕು – ಎಸ್ಪಿ ಅಣ್ಣಾಮಲೈ

ಉಡುಪಿ: ಎಲ್ಲ ಧರ್ಮಗಳ ಸಂದೇಶ ಒಳ್ಳೆಯದೇ ಆಗಿದೆ. ದೇವರು ಒಬ್ಬರೇ ಆಗಿದ್ದಾರೆ. ಅವನ ಬಳಿ ಹೋಗಲು ಹಲವು ದಾರಿಗಳಿವೆ. ಧರ್ಮವನ್ನು ಪರಸ್ಪರ ಅರಿತು ಕೊಳ್ಳುವ ಕೆಲಸ ಆಗಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ.ಅಣ್ಣಾಮಲೈ ಹೇಳಿದ್ದಾರೆ.

quran-jamath-e-islam-udupi-001 quran-jamath-e-islam-udupi-002 quran-jamath-e-islam-udupi-003 quran-jamath-e-islam-udupi-004 quran-jamath-e-islam-udupi-005 quran-jamath-e-islam-udupi-006 quran-jamath-e-islam-udupi-007 quran-jamath-e-islam-udupi-008 quran-jamath-e-islam-udupi-009 quran-jamath-e-islam-udupi-010 quran-jamath-e-islam-udupi-011

quran-jamath-e-islam-udupi

ಅವರು ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್‌ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಪುರಭವನದಲ್ಲಿ ರವಿವಾರ ನಡೆದ ಕುರ್‌ಆನ್‌ ಎಲ್ಲರಿಗಾಗಿ “ಸಮಾಜ ನವ ನಿರ್ಮಾಣ ಮತ್ತು ಧರ್ಮಗ್ರಂಥಗಳು’ ಕುರಿತ ಅಭಿ ಯಾನದ ಸಮಾರೋಪ ಸಮಾರಂ ಭದಲ್ಲಿ ಅವರು ಮಾತನಾಡಿದರು.
ಭಾರತ ದೇಶವನ್ನು ಎಲ್ಲ ಧರ್ಮಿಯರು ಸೇರಿ ಕಟ್ಟಿದ್ದಾರೆ. ಇಲ್ಲಿ ಗಾಂಧಿ, ನೆಹರೂ ಅವರಂತೆಯೇ ಅಬುಲ್‌ ಕಲಾಂ ಆಝಾದ್‌ ಕೂಡ ದೇಶದ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಹಾಗಾಗಿ ಇದು ಬಹುಧರ್ಮಿಯರ ದೇಶ. ಈ ಅಭಿಯಾನವು ಇಸ್ಲಾಮ್‌ ಧರ್ಮವನ್ನು ಇತರ ಧರ್ಮಿಯರಿಗೆ ಅರಿತುಕೊಳ್ಳಲು ಸೇತುವೆಯಾಗಿದೆ ಎಂದರು. ಇತರರ ಧರ್ಮ ಶ್ರೇಷ್ಠ ಎಂಬು ದನ್ನು ಎಲ್ಲರೂ ತಿಳಿದುಕೊಳ್ಳುವ ಮೂಲಕ ಇತರ ಧರ್ಮಗಳಿಗೆ ಗೌರವ ಕೊಡಬೇಕು. ಕೆಲವೊಂದು ಸಂಘಟ ನೆಗಳು ಧರ್ಮವನ್ನು ಅಪಾರ್ಥ ಮಾಡಿ ಹಿಂಸೆಯಲ್ಲಿ ತೊಡಗಿಸಿಕೊಂಡಿ ದೆ. ಅವರಿಗೆ ಧರ್ಮವನ್ನು ಕಲಿಸಿಕೊಡುವ ಕಾರ್ಯ ಆಗಬೇಕು ಎಂದು ಎಸ್ಪಿ ಅಭಿ ಪ್ರಾಯಪಟ್ಟರು.

ಕಾಪು ದಂಡ ತೀರ್ಥ ಕಾಲೇಜಿನ ಆಡಳಿತಾಧಿಕಾರಿ, ಅಲ್ಬನ್ ರೋಡ್ರಿಗಸ್ ‘ಕುರಾನ್ ಸ್ತ್ರೀಗೆ ಗೌರವದ ಸ್ಥಾನನೀಡಿದೆ. ಮನುಷ್ಯ ಮನುಷ್ಯರಲ್ಲಿ ಅಸಮಾನತೆಯನ್ನು ಅಳಿಸಿ ಹಾಕಿ, ದೈವ ಭಯವಿದ್ದವನೇ ಶ್ರೆಷ್ಠನೆಂದು ಸಾರಿದೆ. ಅಸ್ಪ್ರಶ್ಯತೆ, ಮೂಢನಂಬಿಕೆ ಇತ್ಯಾದಿ ಗಳನ್ನು, ನಿರುತ್ತೇಜಿಸುತ್ತದೆ, ವ್ಯಾಪಾರ,ರಾಜಕೀಯಾದಿ ಎಲ್ಲಾ ವ್ಯವಹಾರಗಳಲ್ಲಿ ಪ್ರಾಮಾಣಿಕತೆಯನ್ನು ಕಲಿಸುತ್ತದೆ’ ಎಂದರು.

ಖ್ಯಾತ ಸಮಾಜ ಸೇವಕ, ಇದ್ರೀಸ್ ಹೂಡೆ ಮಾತನಾಡಿ, ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಎಲ್ಲಾ ರಂಗಗಳಲ್ಲಿ ಅಸಾಮಾನ್ಯ ಅಭಿವೃದ್ಧ್ಹಿ ಹೊಂದಿತ್ತಾದರೂ. ಅದು ಕೇವಲ ಭೌತಿಕವೇ ಆಗಿರುವುದರಿಂದ ಭ್ರಶ್ಟಾಚಾರ ದಲ್ಲೂ ಅಷ್ಟೆ ಅಭಿವೃದ್ದಿಯನ್ನು ನಾವು ಅನುಭವಿಸುತ್ತಿದ್ದೇವೆ. ದೇವ ಭಯದ ಜೊತೆಗಿನ ಪ್ರಗತಿಗಳಿಂದಲೇ, ಸಮಾಜದ ನವನಿರ್ಮಾಣ ಸಾಧ್ಯ, ಧರ್ಮ ಗ್ರಂಥಗಳು ಅದರಲ್ಲಿ ಪಾತ್ರ ವಹಿಸುತ್ತದೆಂದರು. ನೈತಿಕತೆ ಎಷ್ಟರ ಮಟ್ಟಿಗೆ ಕೆಟ್ಟಿದೆಯೆಂದರ ಹೆತ್ತವರನ್ನೇ ವೃದ್ಧಾಶ್ರಮಕ್ಕೆ ಅಟ್ಟಲಾಗುತ್ತಿದೆ. ಕುರಾನ್ ದೈವ ಭಯದ ಬುನಾದಿ ಮತ್ತು ನಿಡುವ ಶಿಕ್ಶಣದ ಸ್ಥಂಭಗಳ ಮೇಲೆ ಸ್ವಸ್ಥ ಸಮಾಜದ ಭವನದ ನವನಿರ್ಮಾಣ ಮಾಡುತ್ತದೆ’ಎಂದರು

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರವರು ‘ನನಗೆ ಬಾಲ್ಯದಿಂದಲೂ ಇಸ್ಲಾಮಿನ ಬಗೆಗೆ ಅರಿಯುವ ಕುತೂಹಲ, ನಾಲ್ಕು ವರ್ಷಗಳ ಹಿಂದೆಯಷ್ಟೇ ಕುರಾನ್ ನ ಒಂದು ಅನುವಾದ ವಿರೇಂದ್ರ ಹೆಗ್ಗಡೆಯವರಿಂದ ಬಿಡುಗಡೆಯಾಗುವ ಸಂಧರ್ಭದಲ್ಲಿ ನನಗೆ ಸಿಕ್ಕಿದ ಪ್ರತಿ ಮೇಲೆ ಅವರಿಂದಲೇ ಹಸ್ತಾಕ್ಶರ ಕೇಳಿದಾಗ, “ಸರ್ವ ಶಕ್ತನಾದ ದೇವನು ಒಬ್ಬನೇ” ಎಂದೂ ಬರೆದು ಕೊಟ್ಟರು. ಶಾಂತಿ ಪ್ರಕಾಶನದ ಪುಸ್ತಕಗಳಿಂದ ಅಪಾರ ವಿಷಯಗಳನ್ನು ತಿಳಿಯಲು ಸಾಧ್ಯವಾಯ್ತೆಂದು ಕೃತಜ್ನತೆಯಿಂದ ಹೇಳಬೇಕಾಗುತ್ತದೆ. ಮೌದೂದಿಯವರ ತಫ್ಹೀಮುಲ್ ಕುರಾನ್ ನ ಮೂರು ಭಾಗಗಳ ವ್ಯಾಖ್ಯಾನವನ್ನು ಒಂದು ವರ್ಷದ ಅಧ್ಯನನಿಂದ ಮುಗಿಸಿದೆ. ಕುರಾನ್ ನಂತಿನ ಒಂದು ಪುಸ್ತಕವನ್ನು ಯಾರಾದರು ಬರೆದನೆಂದು ಹೇಳಿದನಾದರೆ ಆತ ಮುಟ್ಟಾಳನೆಂದೇ ನಾನು ಹೇಳ ಬಯಸುತ್ತೇನೆಂದರು. ಅದಕ್ಕೆ ದ್ವಿತೀಯವೆಂಬುದು ಸಾಧ್ಯವೇ ಇಲ್ಲ, ಬೇರೆಲ್ಲಾ ಗ್ರಂಥಗಳಿಲ್ಲಿರುವ ವಿಷಯಗಳೂ ಅದರಲ್ಲಿವೆ, ಅದು ಬಿಟ್ಟ ವಿಷಯಗಳಿಲ್ಲ, ಕುರಾನ್ ಪ್ರತಿ ಮನೆಯಲ್ಲೂ ಇರಬೇಕೆಂದು, ಉತ್ತಮ ಜೀವನಕ್ಕೆ ಬೇಕಾಗುವ ವಿಚಾರಗಳಲ್ಲಿವೆಯೆಂದರು. ಇಸ್ಲಾಮ್ ಎಂದರೆ ದೇವನಿಗೇ ಶರಣು, ಅದು ಪ್ರೀತಿ, ಸಹಬಾಳ್ವೆ, ಸಮನ್ವಯತೆ, ಸೇವೆ, ಕಾಯಕಗಳನ್ನು ಜೀವನದಲ್ಲಿ ತರುವುದು. ಕುರಾನ್ ವ್ಯಕ್ತಿತ್ವ ವಿಕಸನವನ್ನೂ ಆ ಮೂಲಕ ಸಮಾಜದ ನವನಿರ್ಮಾಣವನ್ನು ಮಾಡುತ್ತದೆ. ಆದಿತ್ಯವಾರದ ಈ ಸಂಜೆ, ಟೀವೀ ಮುಂದೆ ಹಾಯಾಗಿ ಕೂರುವುದನ್ನು ಬಿಟ್ಟು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರುವುದಕ್ಕೆ ಪ್ರಾಮುಖ್ಯತೆ ಕೊಟ್ಟುವುದನ್ನು ಕಂಡು ತುಂಬಾ ಹರ್ಶಿತನಾಗಿದ್ದೇನೆಂದರು.
ಉಡುಪಿ ತುಳುಕೂಟದ ಅಧ್ಯಕ್ಶ್ಯ ಜಯಕರ ಶೆಟ್ಟಿಯವರು ಮಾತನಾಡಿ ಕುರಾನ್ ಕೇವಲ ಧಾರ್ಮಿಕತೆಯ ವಿಷಯಗಳನ್ನು ಹೇಳುವುದೂ ಅಲ್ಲ, ಕೇವಲ ಮುಸ್ಲಿಮರಿಗಾಗಿರುವುದೂ ಅಲ್ಲ. ಪ್ರಕ್ತೃತಿಯ ನೀರು, ಗಾಳಿ, ಸೂರ್ಯ, ಚಂದ್ರ ಹೇಗೆ ಒಂದೇ ಜನಾಂಗಕ್ಕಾಗಿ ಮಾತ್ರ ಅಲ್ಲವೋ, ಅಂತೆಯೇ ಕುರಾನ್ ನ ವಿಚಾರಗಳೂ ಎಲ್ಲರಿಗೂ ಆಗಿದೆ. ಧರ್ಮದ ಆಧಾರದಲ್ಲಿ ದೊಂಬಿ, ಅಶಾಂತಿ ಹಬ್ಬಿಸುವವರು ಧರ್ಮ ಗ್ರಂಥಗಳನ್ನು ಖಂಡಿತವಾಗಿಯೂ ಓದಿಲ್ಲ. ಒಬ್ಬರ ತಪ್ಪಿಗೆ ಇಡೀ ಸಮುದಾಯಕ್ಕೆ ಶಿಕ್ಶಿಸುವಂತಿಲ್ಲ. ಪ್ರತಿಯೊಬ್ಬರೂ ಗೀತೆ, ಬೈಬಲ್ ಕುರಾನ್ನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯರಾಗಿ ಜೀವಿಸ ಬಹುದೆಂದರು.
ಅಧ್ಯಕ್ಶತೆ ವಹಿಸಿದ್ದ ಶಾಂತಿ ಪ್ರಕಾಶಾನದ ವ್ಯವಸ್ಥಾಪಕ ಮುಹಮ್ಮದ ಕುಂಙ ‘ಸಮಾಜದ ನವನಿರ್ಮಾಣ ಧಾರ್ಮಿಕ ಗೃಂಥಗಳಿಂದಲೇ ಸಾಧ್ಯ್ವವೆಂದು ಪ್ರಾಮಾಣಿಕ ನಂಬಿದರಿಂದಲೇ ಈ ಸಮಾರಂಭ ಏರ್ಪಟ್ಟಿದೆ. ಬಾಹ್ಯ ವೇಶ, ಬಣ್ಣಾದಿಗಳಿಗೆ ಕುರಾನಿನಲ್ಲಿ ಪ್ರಾಮುಖ್ಯತೆ ಇಲ್ಲ. ಇದು ಮನಸ್ಸನ್ನು ಜೋಡಿಸುವ, ಮಾನವತೆ ಮತ್ತು ಲೋಕದ ಸಮಸ್ಯೆಗಳಿಂದ ಮುಕ್ತಿಗಾಗಿರುವ ವ್ಯವಸ್ಥೆಯನ್ನು ಕಲಿಸುತ್ತದೆ. ಪ್ರತಿಯೊಬ್ಬನೂ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಪಾಲಿಸಿದರೆ, ಈ ಹಕ್ಕುಗಳಿಗಾಗಿ ಹೋರಾಟಯೆಂಬುದನ್ನೆಲ್ಲ ಸಮಾಜದಲ್ಲಿ ಕಾಣಸಿಗುತ್ತಿರಲಿಲ್ಲ. ಮಾನವ ತನ್ನ ಕೈಗಳಿಂದ ನೆಲ ಜಲಗಳಲ್ಲಿ ಕ್ಸೋಭೆಯನ್ನುಂಟು ಮಾಡಿಕೊಂಡಿದ್ದಾನೆಯೆಂದು ಕುರಾನ್ ಹೇಳುತ್ತದೆ. ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳು ಮಾಡಿದುದರ ಪರಿಣಾಮ ಮುಂದೆ 150 ಕೋಟಿ ಜನರಿಗೆ ಕುಡಿಯುವ ನೀರು ಸಿಗಲಿಕ್ಕಿಲ್ಲ; ನೀರಿಗಾಗಿ ಯುದ್ದವಾಗಲಿರುವುದೆಂದು ಈಗ ಕೇಳುತ್ತಿದ್ದೇವೆ. ಆಕಾಶ ಭೂಮಿಗಳಲ್ಲಿರುವ ಗೃಹಗಳಾದಿ ದೇವನ ವ್ಯವಸ್ಥೆಗೆ ಶರಣಾಗಿರುವುದರಿಂದ ಹೇಗೆ ಅಲ್ಲಿ ಅವ್ಯವಸ್ಥೆ ಇಲ್ಲವೋ, ಅದೇ ರೀತಿ ಮಾನವರಿಂದಲೂ ಸಾಧ್ಯವೆಂದರು. ದೇವನೊಂದಿಗಿನ ಸಂಬಂಧ ಗಾಢವಾದಷ್ಟೇ ಮನಷ್ಯ ಮನುಷ್ಯರೊಂದಿಗಿನ ಸಂಬಂಧವೂ ಗಾಢವಾಗುವುದೆಂದರು. ಈ ಅಭಿಯಾನವು ಜನರನ್ನು ತಿಳಿಯಲಿಕ್ಕೂ, ತಿಳಿಸಲ್ಲಿಕ್ಕೂ, ಸಮಾಜದ ನವನಿರ್ಮಾಣದಲ್ಲಿ ಸಹಕಾರಿಯಾಗಲೆಂದು ಪ್ರಾರ್ಥಿಸುತ್ತೇನೆಂದರು.

ವೇದಿಕೆಯಲ್ಲಿ ಜಮೀಯ್ಯತುಲ್‌ ಫ‌ಲಾಹ್‌ ಉಡುಪಿ ಅಧ್ಯಕ್ಷ ಶಬೀಹ್‌ ಕಾಝಿ, ಮುಸ್ಲಿಮ್‌ ವೆಲ್‌ಫೇರ್‌ ಅಸೋಸಿಯೇಶನ್‌ ಅಧ್ಯಕ್ಷ ಗಫ‌ೂರ್‌ ಕಲ್ಯಾಣ ಪುರ, ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಅಶ್ಫಾಕ್‌ ಅಹ್ಮದ್‌, ಹಾಜಿ ಅಬ್ದುಲ್ಲಾ ಪರ್ಕಳ ಉಪಸ್ಥಿತರಿದ್ದರು. ಅಬ್ದುಲ್‌ ಅಝೀಝ್ ಸ್ವಾಗತಿಸಿದರು. ಶಬ್ಬೀರ್‌ ಅಹ್ಮದ್‌ ವಂದಿಸಿದರು. ಯಾಸೀನ್‌ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here