ಉಡುಪಿ : ನಗರಕ್ಕೆ ಬಂತು ಶಾಸಕರ 5.8 ಕೋಟಿ ರು. ಬೆಲೆಯ ರೋಲ್ಸ್ ರಾಯ್ ಘೋಸ್ಟ್ ಕಾರು !

ಉಡುಪಿಃ ಕಳೆದ ನಾಲ್ಕೈದು ದಿನಗಳಿಂದ ಉಡುಪಿಯ ಸಾಮಾಜಿಕ ತಾಣಗಳಲ್ಲಿ ನೀಲಿ ಬಣ್ಣದ ಕಾರೊಂದು ಭಾರೀ ಓಡಾಡುತ್ತಿದೆ, ಅದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಹೊಸ ಕಾರು.

roy roy1 roy2

ಬರೇ ಇಷ್ಟೇ ಆಗಿದ್ದರೇ ಅದು ಸುದ್ಧಿಯಾಗುತ್ತಿರಲಿಲ್ಲ, ಅದು ರೂಲ್ಸ್ ರಾಯ್ ಘೋಸ್ಟ್ ಕಾರು, ಇದರ ಬೆಲೆ ಬರೋಬರಿ 5.80 ಕೋಟಿ ರು., ಈ ಬೆಲೆಯಲ್ಲಿ ಆಮದು ಶುಲ್ಕವೇ 2.89 ಕೋಟಿ ರು.ಗಳಾಗಿವೆ. ಉಡುಪಿಗೆ ಬಂದ ಇಷ್ಟು ಬೆಲೆಯ ಪ್ರಥಮ ಕಾರು ಇದು.

ಉಡುಪಿ ನಗರದ ಹೊರಭಾರದ ಕೊಳಲಗಿರಿಯಲ್ಲಿ ಹೊಸ ಮನೆಯೊಂದನ್ನು ಕಳೆದೆರಡು ವರ್ಷಗಳಿಂದ ಕಟ್ಟಿಸುತ್ತಿರುವ ಶಾಸಕರು, ಹೊಸ ಮನೆಗೆ ಹೊಸ ಕಾರು ಬೇಕು ಎಂಬ ಆಸೆ ಇತ್ತು. ಆದ್ದರಿಂದ ಪ್ರಾಮಾಣಿಕವಾಗಿ ಸಂಪಾದಿಸಿದ ಹಣದಲ್ಲಿ ಈ ಕಾರು ಖರೀದಿಸಿದ್ದೇನೆ ಎಂದರಲ್ಲದೇ ಉಡುಪಿ ಯುವಕರಿಗೆ ಸಾಮಾಜಿಕ ತಾಣಗಳಲ್ಲಿ ಈ ಕಾರು ಈ ಪರಿ ಕ್ರೇಜು ಹುಟ್ಟಿಸಿರುವುದು ಅಶ್ಚರ್ಯ ಉಂಟು ಮಾಡಿದೆ ಎಂದಿದ್ದಾರೆ.

rot4 roy4 roy5

ಮುಂಬೈಯಲ್ಲಿ ಖರೀದಿಸಲಾಗಿರುವ ಈ ಕಾರನ್ನು ಗುರುವಾರ ಉಡುಪಿಯಲ್ಲಿ ಕಂಪೆನಿಯ ಪ್ರತಿನಿಧಿಗಳು ಶಾಸಕರಿಗೆ ಹಸ್ತಾಂತರಿಸಿದ್ದಾರೆ.

Leave a Reply

Please enter your comment!
Please enter your name here