ಉಡುಪಿ : ನಗರಸಭೆ ಸೇವೆಗೆ 2 ಟಿಪ್ಪರ್‍ಗಳ ಸೇರ್ಪಡೆ; ಶಾಸಕ ಮಧ್ವರಾಜ್ ಉದ್ಘಾಟನೆ

ಉಡುಪಿ: ಉಡುಪಿ ನಗರಸಭೆಗೆ 13 ನೇ ಹಣಕಾಸು ನಿಧಿಯಿಂದ ಖರೀದಿಸಲಾದ 21.64 ಲಕ್ಷ ರೂ ವೆಚ್ಚದ ಜಿ.ಸಿ.ಬಿ ಮತ್ತು 19.22 ಲಕ್ಷ ರೂ ವೆಚ್ಚದ ಟಿಪ್ಪರ್ ವಾಹನವನ್ನು ಶಾಸಕ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.

jcbing_udupiCMC 02-01-2015 20-30-33 jcbing_udupiCMC 02-01-2015 20-31-15 jcbing_udupiCMC 02-01-2015 20-33-21

ನಗರ ಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಪರ್ಯಾಯ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತಿತರ ಕಾರ್ಯಗಳಿಗಾಗಿ ಸಹ ಈ ವಾಹನಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಪಿ.ಯುವರಾಜ್, ಉಪಾಧ್ಯಕ್ಷ ಅಮೃತ ಕೃಷ್ಣಮೂರ್ತಿ, ಪೌರಾಯುಕ್ತ ಡಿ.ಮಂಜುನಾಥಯ್ಯ ಹಾಗೂ ನಗರಸಭೆಯ ವಿವಿಧ ವಾರ್ಡ್‍ಗಳ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here