ಉಡುಪಿ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಮುಂಬಯಿನಲ್ಲಿ ಪತ್ತೆ

ಉಡುಪಿ: ಮಂಗಳವಾರ ಉಡುಪಿಯಿಂದ ನಾಪತ್ತೆಯಾಗಿದ್ದ ಅಜ್ಜಕಾಡಿನ ಕಾಲೇಜೊಂದರ ಇಬ್ಬರು ವಿದ್ಯಾರ್ಥಿನಿಯರು ಗುರುವಾರ ಮುಂಬಯಿನಲ್ಲಿ ಪತ್ತೆಯಾಗಿದ್ದಾರೆ.
ಉಡುಪಿಯ ಅಜ್ಜರಕಾಡಿನ ಸಂಧ್ಯಾ ಶೆಟ್ಟಿ (19)ಹಾಗೂ ಆಕೆಯ ಗೆಳತಿ ಕಟಪಾಡಿ ಮಟ್ಟುವಿನ ದಿವಿಷಾ (19) ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಕಾಪು ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿತ್ತು. ವಿದ್ಯಾರ್ಥಿನಿಯರು ಮುಂಬಯಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮುಂಬಯಿಗೆ ತೆರಳಿದ್ದ ಉಡುಪಿ ಪೆÇಲೀಸರು ವಿದ್ಯಾರ್ಥಿನಿಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿನಿಯರನ್ನು ಉಡುಪಿಗೆ ಕರೆತರಲಾಗಿದ್ದು, ಹೆತ್ತವರ ವಶಕ್ಕೆ ಒಪ್ಪಿಸಲಾಗಿದೆ.
ಇಬ್ಬರೂ ಕೆಲವೊಂದು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದು, ಆ ಭಯದಿಂದ ಮನೆ ಬಿಟ್ಟು ಹೋಗಲು ತೀರ್ಮಾನಿಸಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.

Leave a Reply