ಉಡುಪಿ: ಪವರ್ ಪರ್ಬಕ್ಕೆ ತೆರೆ; 4000 ಕ್ಕೂ ಅಧಿಕ ಮಂದಿ ಭಾಗಿ

Spread the love

ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆ ಪವರ್ ವತಿಯಿಂದ ಉಡುಪಿ ಎಮ್ ಜಿ ಎಮ್ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಎರಡು ದಿನಗಳ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಪವರ್ ಪರ್ಬ -2016 ಭಾನುವಾರ ಸಮಾಪನಗೊಂಡಿತು.

DSC_0127 DSC_0129 DSC_0131 DSC_0132 DSC_0134 DSC_0135 DSC_0137 DSC_0119 DSC_0123ಪವರ್ ಪರ್ಬ

ಪವರ್ ಪರ್ಬ ಇದರ ಸಂಯೋಜಕಿ ಹಾಗೂ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ರೇಣು ಜಯರಾಂ ಮಾತನಾಡಿ ಮಹಿಳಾ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭಗೊಂಡ ಪವರ್ ಸಂಸ್ಥೆ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಿಳಾ ಉದ್ಯಮಿಗಳಿಗೆ ಇನ್ನಷ್ಟು ಪ್ರೋತ್ಸಾಹ ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಲಭಿಸುವ ನಿಟ್ಟಿನಲ್ಲಿ ಪವರ್ ಪರ್ಬ ಆಯೊಜನೆ ಮಾಡಿದ್ದು ಯಶಸ್ವಿ ಕಂಡಿದೆ. ದೇಶದ ವಿವಿಧ ಭಾಗಗಳಿಂದ 120 ಅಧಿಕ ಮಹಿಳಾ ಉದ್ದಿಮೆದಾರರು ತಮ್ಮ ಉತ್ಪನ್ನಗಳುನ್ನು ಇಲ್ಲಿ ಪ್ರದರ್ಶನ ಮಾಡಿದ್ದು, 4000 ಅಧಿಕ ಮಂದಿ ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಪವರ್ ಪರ್ಬವನ್ನು ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದಾಗಿ ಹೇಳೀದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಎಸ್ ಪೈ, ಉಡುಪಿ ಜಿಲ್ಲಾಧಿಕಾರಿ ಡಾ ಆರ್ ವಿಶಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆಗಮಿಸಿ ಪವರ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಪವರ್ ಪರ್ಬದಲ್ಲಿ ಉಡುಪಿ ಜಿಲ್ಲೆ ಮಾತ್ರವಲ್ಲದೆ ಮಂಗಳೂರು, ಮೈಸೂರು, ಬೆಂಗಳೂರು, ಗೋವಾ, ಚೆನೈ, ಕೊಲ್ಕತ್ತಾಗಳಿಂದ ಸುಮಾರು 120 ಮಂದಿ ಮಹಿಳಾ ಉದ್ಯಮಿಗಳು ಭಾಗವಹಿಸಿ ತಾವು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡಿದರು. ಬಟ್ಟೆಬರೆಯಂತಹ ಕರಕುಶಲ ವಸ್ತುಗಳು, ವೈವಿಧ್ಯಮಯ ಆಹಾರೋತ್ಪನ್ನಗಳು, ಪೈಂಟಿಂಗ್, ಪುಸ್ತಕ, ನಿತ್ಯೋಪಯೋಗಿ ವಸ್ತುಗಳು ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದ್ದವು.
ಪವರ್ ಸಂಸ್ಥೆಯ ಅಧ್ಯಕ್ಷೆ ಸರಿತ ಸಂತೋಷ್, ಉಪಾಧ್ಯಕ್ಷೆ ಜಯಶ್ರೀ ಕೃಷ್ಣರಾಜ್, ತಾರಾ ತಿಮ್ಮಯ್ಯ ಇನ್ನಿತರರು ಉಪಸ್ಥಿತರಿದ್ದರು.


Spread the love