ಉಡುಪಿ: ಪಾತಾಳಕ್ಕಿಳಿದಿದ್ದ ಭಾರತದ ಸ್ಥಾನಮಾನವನ್ನು ಮೇಲಕ್ಕೆ ತಂದ ಕೀರ್ತಿ ಮೋದಿಯವರದ್ದು : ಗಣೇಶ್ ಕಾರ್ಣಿಕ್

Spread the love

ಉಡುಪಿ: ದೇಶದಲ್ಲಿ ಯಾವ ರೀತಿಯ ಆಡಳಿತ ಬೇಕು ಎಂದು ಜನರು  ಅಪೇಕ್ಷಿಸ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಕೇಂದ್ರದಲ್ಲಿ ಆಡಳಿತಕ್ಕೆ ತಂದರೋ ಅದನ್ನು  ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಷದಲ್ಲಿ ಮಾಡಿ ತೋರಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾತಾಳಕ್ಕಿಳಿದಿದ್ದ ಭಾರತದ ಸ್ಥಾನಮಾನವನ್ನು ಮೇಲಕ್ಕೆ ತರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

ಉಡುಪಿಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಮಹಾ ಜನ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಡಿಪಿ, ಹಣದುಬ್ಬರ, ಎಫ್‍ಡಿಐ, ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸುವಲ್ಲಿ  ಸರ್ಕಾರ ಯಶಸ್ವಿಯಾಗಿದ್ದು,  ಮುಂದಿನ ದಿನಗಳಲ್ಲಿ  ಭಾರತ ಜಗತ್ತಿನ ಆರ್ಥಿಕ ಚಟುವಟಿಕೆಗಳ ನಾಯಕ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಸಮಾಜವನ್ನು  ಒಡೆದು ಆಡಳಿತ ನಡೆಸುತ್ತಿದ್ದವರಿಗೆ ಮೊದಿ ಉತ್ತರ ನೀಡಿದ್ದಾರೆ ಎಂದರು.

ವಿಶ್ವದಲ್ಲಿಯೇ ಯಾವ ದೇಶವೂ ಮಾಡದಂತಹ ಸಾಧನೆಯನ್ನು ಬಾಂಗ್ಲಾದೇಶದೊಂದಿಗಿನ ಗಡಿ ಸಮಸ್ಯೆಯನ್ನು ಬಗೆ ಹರಿಸುವ ಮೂಲಕ ಮೊದಿಯವರು ಸಾಧಿಸಿ ತೋರಿಸಿದ್ದಾರೆ. ಇದೀಗ ಭಾರತದೊಂದಿಗಿನ ಗಡಿ ಸಮಸ್ಯೆ ನಿವಾರಣೆಗೆ ಬಾಂಗ್ಲಾ ಮಾದರಿಯಲ್ಲಿಯೇ ಚೀನಾ ದೇಶವೂ ಆಸಕ್ತಿ ತೋರಿಸಿದೆ ಎಂದರು.

BJP_pressmeet_mangalorean_20141105-003

ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಡಿತರ ವಿತರಣೆಗೆ 2 ಲಕ್ಷ 24 ಸಾವಿರ ಮೆಟ್ರಿಕ್ ಟನ್ ಪಡಿತರ ಬೇಕಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರ 2 ಲಕ್ಷದ 17 ಸಾವಿರ ಟನ್ ಪಡಿತನರ ಪೂರೈಸುತ್ತದೆ. ಹಿಂದೆ 30 ರೂ.ಗೆ 30ಕೆಜಿ ಅಕ್ಕಿ ನೀಡುತ್ತಿದ್ದ ರಾಜ್ಯ ಸರ್ಕಾರ ಇದೀಗ ಒಂದು ಯುನಿಟ್‍ಗೆ 5 ಕೆಜಿಯಂತೆ ಅಕ್ಕಿ ಕೊಡುತ್ತಿದೆ. ನಾಲ್ಕು ಸದಸ್ಯರಿರುವ ಮನೆಯವರು ಇದರಿಂದ 20ಕೆಜಿ ಮಾತ್ರ ಅಕ್ಕಿ ಪಡೆಯಲು ಸಾಧ್ಯವಾಗಿದ್ದು, ಉಳಿದ 10 ಕೆಜಿ ಅಕ್ಕಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿದೆ. ಇನ್ನು ಬಜೆಟ್‍ನಲ್ಲಿ ಶಿಕ್ಷಣ ಇಲಾಖೆಗೆ ಮೀಸಲಾಗಿರಿಸಬೇಕಾಗಿದ್ದ ಹಣದಲ್ಲಿ 1,500 ಕೋಟಿ ರೂ. ಕಡಿಮೆ ಮಾಡಲಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಜಿಲ್ಲೆಯಲ್ಲಿ ನಡೆದ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಸುಮಾರು 2 ಲಕ್ಷ ಕಾರ್ಯಕರ್ತರ ನೋಂದಣಿಯಾಗಿದ್ದು, ಮುಂದಿನ ಮೂರು ತಿಂಗಳ ನೋಂದಾಯಿತ ಸದಸ್ಯರ ವಿದ್ಯಾರ್ಹತೆ, ಉದ್ಯೋಗ, ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲೆ ಮಾಡವುವ ಉz್ದÉೀಶದಿಂದ ಮಹಾ ಸಂಪರ್ಕ ಅಭಿಯಾನ ನಡೆಸಲಾಗುತ್ತದೆ. ಅಲ್ಲದೆ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಬಳಿಕ ಗೆದ್ದಾ ಎಲ್ಲಾ ಬಿಜೆಪಿ ಸದಸ್ಯರಿಗೆ ಅಭಿನಂದನಾ ಸಮಾವೇಶ ನಡೆಸಲಾಗುತ್ತದೆ. ಜೂ.21ರ ಯೋಗದಿನವನ್ನು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಜಿ.ಪಂ. ತಾಪಂ. ಚುನಾವಣೆಗೂ ತಳಹದಿ ಗಟ್ಟಿಗೊಳಿಸುವ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ ಎಂದರು.

ಎರಡು ಲಕ್ಷ ಸದಸ್ಯತಾ ಅಭಿಯಾನಕ್ಕೆ ಶ್ರಮಿಸಿದ ಮುಖಂಡರಾದ ಕಿರಣ್ ಕುಮಾರ್ ಹಾಗೂ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ,  ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಮಹಾ ಸಂಪರ್ಕ ಅಭಿಯಾನ ದ ಸಂಚಾಲಕ ಗುರುರಾಜ್ ಉಪ್ಪುಂದ ಉಪಸ್ಥಿತರಿದ್ದರು.

 

 


Spread the love