ಉಡುಪಿ: ಪೇಜಾವರ ಪಂಚಮ ಪರ್ಯಾಯ ಪ್ರಯುಕ್ತ ಯತಿ ಸಂಗಮ

ಉಡುಪಿ: ಪೇಜಾವರ ಸ್ವಾಮೀಜಿಯ ಚಾರಿತ್ರಿಕ ಪಂಚಮ ಪರ್ಯಾ ಯೋತ್ಸವದ ಪ್ರಯುಕ್ತ ಶನಿವಾರ ರಾಜಾಂಗಣದಲ್ಲಿ ಕರಾವಳಿ ಜಿಲ್ಲೆಗಳ ವಿವಿಧ ಮಠಗಳ ಮಠಾಧೀಶರು ಹಾಗೂ ಸ್ವಾಮೀಜಿಗಳ ಸಮಾವೇಶ ಯತಿ ಸಂಗಮ ಕಾರ್ಯಕ್ರಮ ಜರುಗಿತು.

yathisangama-rajangana-udupi-30-01-2016 (2) yathisangama-rajangana-udupi-30-01-2016 (3) yathisangama-rajangana-udupi-30-01-2016

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತಿ ಮಾತನಾಡಿದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ರಾವಳಿಯಲ್ಲಿರುವ ವಿವಿಧ ಮಠಾಧೀಶರು ಹಾಗೂ ಸ್ವಾಮೀಜಿಗಳಿಂದ ಧರ್ಮ ಹಾಗೂ ಪರಿಸರ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಕರಾವಳಿ ಭಗವದ್ ಭಕ್ತಿಯ ಕಂಪನ್ನು ವಿವಿಧ ಸ್ವಾಮೀಜಿಯವರು ಪಸರಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಧರ್ಮ ರಕ್ಷಣೆಯ ಕೆಲಸ ಸ್ವಾಮೀಜಿಯವರಿಂದ ಸದಾಕಾಲ ಜರುಗುತ್ತಿದ್ದು ಇದು ಮುಂದುವರಿಯಬೇಕಾಗಿದೆ ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಆಶೀರ್ವಚನ ನೀಡಿದರು. ಬಾಳ್ಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಶ್ರೀಗುರು ದೇವಾ ನಂದ ಸ್ವಾಮೀಜಿ, ಕಟಪಾಡಿ ಆನೆಗೊಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಗುರುಪುರ ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ, ಮೂಡಬಿದ್ರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಯ ಶ್ರೀರಮಾನಂದ ಸ್ವಾಮೀಜಿ, ಹೊಸ್ಮಾರು ಶ್ರೀವಿಖ್ಯಾತಾನಂದ ಸ್ವಾಮೀಜಿ, ಕರಿಂಜ ಶ್ರೀ ಮುಕ್ತಾನಂದ ಸರಸ್ವತಿ ಸ್ವಾಮೀಜಿ, ಬಾರಕೂರಿನ ಶ್ರೀ ವಿಶ್ವಭಾರತಿ ಸಂತೋಷ್‌ ಗುರೂಜಿ, ಬನ್ನಂಜೆ ಶ್ರೀರಾಘವೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಈ ಸಂದರ್ಭ ಪೇಜಾವರ ಶ್ರೀ ಎಲ್ಲ ಸ್ವಾಮೀಜಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ವಾಸುದೇವ ಭಟ್‌ ಸ್ವಾಗತಿಸಿದರು.

Leave a Reply

Please enter your comment!
Please enter your name here