ಉಡುಪಿ: ಬೈಕ್‌-ಟೆಂಪೊ ಢಿಕ್ಕಿ: ಫೋಟೊಗ್ರಾಫರ್ ಸಾವು

ಉಡುಪಿ: ಟೆಂಪೊವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಯಾಚಿತ್ರಗ್ರಾಹಕರೋರ್ವರು ಮೃತಪಟ್ಟ ಘಟನೆ ರವಿವಾರ ಶಿರ್ವ-ಬೆಳ್ಮಣ್‌ ಮುಖ್ಯರಸ್ತೆಯ ಸೂಡ ಕ್ರಾಸ್‌ ಬಳಿ ನಡೆದಿದೆ. ನಡೆದಿದೆ.
ಮೃತರನ್ನು ಬೈಕಿನ ಹಿಂಬದಿ ಸವಾರ ಸೂಡದ ಉಮೇಶ್‌ ಆಚಾರಿ (28) ಎಂದು ಗುರುತಿಸಲಾಗಿದೆ. ಬೈಕ್‌ ಸವಾರ ದಿನೇಶ್‌ ಪೂಜಾರಿ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೂಡ ಕಾರ್ಕಳದ ಪಳ್ಳಿ ಯಲ್ಲಿ ನಡೆದ ವಾಲಿಬಾಲ್‌ ಪಂದ್ಯ ವೀಕ್ಷಿಸಿ ಮನೆಗೆ ಮರಧಿಳುತ್ತಿದ್ದಾಗ ಶಿರ್ವ ಕಡೆಯಿಂದ ಬರುತ್ತಿದ್ದ ಟೂರಿಸ್ಟ್‌ ಟೆಂಪೋ ಬೈಕಿಗೆ ಢಿಕ್ಕಿ ಹೊಡೆಯಿತು.
ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯ ಗೊಂಡರು. ಆ ಪೈಕಿ ಉಮೇಶ್‌ ಆಚಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಸೂಡದಲ್ಲಿ ಛಾಯಾಚಿತ್ರ ಗ್ರಾಹಕರಾಗಿರುವ ಉಮೇಶ್‌ ಆಚಾರಿಯು ತಂದೆ, ತಾಯಿ, ಇಬ್ಬರು ಸಹೋದರರು, ಓರ್ವ ಸಹೋದರಿ ಯನ್ನು ಅಗಲಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply