ಉಡುಪಿ: ಬ್ಲಾಕ್ ಕಾಂಗ್ರೆಸಿನಿಂದ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಮೋದ್ ಮಧ್ವರಾಜರಿಗೆ ಸನ್ಮಾನ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಾರಾಯಣ ಗುರು ಸಭಾಭವನದಲ್ಲಿ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಉಡುಪಿಯ ಶಾಸಕ ಪ್ರಮೋದ್ ಮಧ್ವರಾಜ್‍ರವರನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

IMG_1437 pramod_sanman_blockcong 01-12-2015 18-24-44 pramod_sanman_blockcong 01-12-2015 17-04-16 pramod_sanman_blockcong 01-12-2015 17-04-35 pramod_sanman_blockcong 01-12-2015 17-04-58 pramod_sanman_blockcong 01-12-2015 17-06-04 pramod_sanman_blockcong 01-12-2015 17-06-19 pramod_sanman_blockcong 01-12-2015 17-09-14 pramod_sanman_blockcong 01-12-2015 17-14-57 pramod_sanman_blockcong 01-12-2015 17-58-26 pramod_sanman_blockcong 01-12-2015 18-06-54

ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಗಫೂರ್ ಶಾಸಕ ಪ್ರಮೋದ್ ಮದ್ವರಾಜ್ ಗೆ ಅಭಿನಂದಿಸಿ ಮಾತನಾಡಿದರು. ಪ್ರಾಮಣಿಕವಾಗಿ ಬದ್ದತೆಯಿಂದ ಜನರ ಬಳಿಗೆ ತೆರಳಿ ಜನಸೇವೆಯನ್ನು ನಿರಂತರವಾಗಿ ನಡೆಸಿದಲ್ಲಿ ಸಮಾಜದಲ್ಲಿ ಉತ್ತಮ ಜನಪ್ರತಿನಿದಿಯಾಗಿ ಗುರುತಿಸಿಕೊಳ್ಳಬಹುದು ಈ ನಿಟ್ಟಿನಲ್ಲಿ ಪ್ರಮೋದ್ ಮದ್ವರಾಜ್ ಮಾದರಿಯಾಗಿದ್ದಾರೆ ಎಂದರು.ಸಮಾಜದಲ್ಲಿ ಎಲ್ಲಾ ವರ್ಗದ ಜನರಲ್ಲಿ ಬಾಂದವ್ಯ ಮೂಡಿಸುವುದರ ಜೊತೆಗೆ ಉಡುಪಿ ವಿಧಾನ ಸಭೆ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುವ ಜನರ ನೆಚ್ಚಿನ ಜನಪ್ರತಿನಿದಿಯಾಗಿದ್ದಾರೆ ಎಂದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೇಸ್,ರಾಜ್ಯ ಸೂಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷೆ ವೆರೋನಿಕ ಕರ್ನೇಲಿಯೋ ಮಾತನಾಡಿ ರಾಜ್ಯದ ಮಹತ್ವದ ಇಲಾಖೆಯಾದ ಕಂದಾಯ ಇಲಾಖೆಯ ಸಂಸದಿಯ ಕಾರ್ಯದರ್ಶಿಯಾಗಿ ಮದ್ವರಾಜ್ ನೇಮಕವಾಗಿರುವುದು ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ ಎಂದು ಜಿಲ್ಲೆಯ ಸಮಸ್ಥ ಮಹಿಳೆಯರ ಪರವಾಗಿ ಅಭಿನಂದಿಸಿದರು. ಬಡವರ, ಜನಪರ ಕಾಳಜಿ ಬಗ್ಗೆ ಇರುವ ವಿಶೇಷ ಚಿಂತನೆ ಅವರನ್ನು ಈ ಸ್ಥಾನಕ್ಕೆ ಏರಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಉಡುಪಿ ನಗರ ಸಭೆ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತ ಕೃಷ್ಣಮೂರ್ತಿ,ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಜನಾರ್ದನ ತೋನ್ಸೆ, ಹರಾಡಿ ನಿತ್ಯಾನಂದ ಶೆಟ್ಟಿ, ಇತರೆ ಬ್ಲಾಕ್ ಕಾಂಗ್ರೇಸ್ ಮುಖಂಡರಾದ ಅಮೃತ್ ಶೆಣೈ, ಕೇಶವ ಕೊಟ್ಯಾನ್, ಐಡಾ ಗಿಬ್ಬಾ ಡಿಸೋಜ, ಪ್ರಶಾಂತ್ ಭಟ್, ಅಬ್ದುಲ್ ರೆಹಮಾನ್, ವಿಕಾಸ್ ಶೆಟ್ಟಿ, ಮಿನಾಕ್ಷಿ ಮಾಧವ, ದಿನೇಶ್ ಪುತ್ರನ್, ಮನೋಜ್ ಕರ್ಕೇರ, ಮತ್ತಿತರ ಪಧಾದಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ದಿವಾಕರ್ ಕುಂದರ್ ಪ್ರಸ್ಥಾವಿಕವಾಗಿ ಮಾತನಾಡಿದರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿದರು,

Leave a Reply

Please enter your comment!
Please enter your name here