ಉಡುಪಿ: ಮಂಗಳೂರು ಪ್ರೀಮಿಯರ್ ಲೀಗ್‍ಗೆ ಉಡುಪಿ ಟೈಗರ್ಸ್ ತಂಡದ ಲಾಂಛನ ಅನಾವರಣ

ಉಡುಪಿ: ಮಂಗಳೂರು ಪ್ರೀಮಿಯರ್ ಲೀಗ್‍ಗೆ ಉಡುಪಿ ಜಿಲ್ಲೆಯ ಏಕೈಕ ತಂಡ ಉಡುಪಿ ಟೈಗರ್ಸ್  ತಂಡದ ಲಾಂಛನ ಅನಾವರಣ  ಕಾರ್ಯಕ್ರಮ ಶನಿವಾರ ರಾತ್ರಿ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ನಡೆಯಿತು.

ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಲಾಂಛನ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆಯವರು ಎಲ್ಲಿ ಹೋದರೂ ಪ್ರಥಮ ಸ್ಥಾನವನ್ನು ಪಡೆಯುತ್ತಾರೆ. ತಮ್ಮನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವ ಕೆಲಸ ಮಾಡುತ್ತಾರೆ. ಎಂಪಿಎಲ್‍ನಲ್ಲಿ ತಂಡ ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಗೆದ್ದು ಬರಲಿ ಎಂದು ಹಾರೈಸಿದರು.

ಉಡುಪಿ-ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ಕಾಂಗ್ರೆಸ್ ನಾಯಕ ದೇವಿ ಪ್ರಸಾದ್ ಶೆಟ್ಟಿ, ಲಯನ್ಸ್ ಮಾಜಿ ಗವರ್ನರ್ ಸುರೇಶ್ ಪ್ರಭು, ತಂಡದ ಪ್ರಾಯೋಜಕರಾದ ಆಭರಣ ಜ್ಯುವೆಲ್ಲರ್ಸ ನ ಸುಭಾಷ್ ಕಾಮತ್, ತಂಡದ ಮಾಲೀಕರಾದ ಝಬೀರ್, ಅನುತ್ ಎಸ್. ಶೆಟ್ಟಿ, ಕೋಚ್ ಪ್ರಕಾಶ್ ಎಸ್ ಶೆಟ್ಟಿ, ಉದ್ಯಮಿ ಉದಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಂಡದ ಮಾಲೀಕರಾದ ಝಬೀರ್ ಹಾಗೂ ಅನುತ್ ಶೆಟ್ಟಿ, ಈಗಾಗಲೇ ತಂಡದ ಆಯ್ಕೆ ನಡೆದಿದೆ. ಮಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಡ್ ಮೂಲಕ ಆಟಗಾರರನ್ನು ಆಯ್ಕೆಮಾಡಲಾಗಿದೆ. ತಂಡದಲ್ಲಿ ಸ್ಥಳೀಯರ ಆಟಗಾರರ ಜೊತೆಗೆ ಮಂಗಳೂರು ಮೂಲದವರು, ದುಬಾಯಿ, ಬಹರೈನ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವವರು ಇದ್ದಾರೆ. ಪ್ರಮುಖ ಆಟಗಾರ ದರ್ಶನ್ ಮಾಚಯ್ಯ ಅವರನ್ನು 55 ಸಾವಿರ ರೂ. ನೀಡಿ ಖರೀದಿಸಲಾಗಿದೆ ಎಂದರು.

ತಂಡದ ಅಭ್ಯಾಸ ಪ್ರಕ್ರಿಯೆ ಆರಂಭವಾಗಿದ್ದು, ಮಣಿಪಾಲದ ಎಂಐಟಿ ಹಾಗೂ ಎಂಡ್ ಪಾಯಿಂಟ್ ಮೈದಾನದಲ್ಲಿ ಅಭ್ಯಾಸ ನಡೆಸಲಾಗುತ್ತದೆ. ಮಣಿಪಾಲ ವಿವಿಯವರು ಅಭ್ಯಾಸ ನಡೆಸಲು ಸಹಕಾರ ನೀಡಿದ್ದಾರೆ ಎಂದರು.

ತಂಡದ ಆಟಗಾರರಿವರು: ದರ್ಶನ್ ಮಾಚಯ್ಯ, ಅಕ್ಷಯ್ ಎನ್. ಶೇಟ್, ಲಾಲ್ ಸಚಿನ್,  ಸಂಜಯ್ ಕೆ., ವಚನ್ ಯು. ಆಚಾರ್ಯ, ಪರಿಕ್ಷೀತ್ ಶೆಟ್ಟಿ, ವಿಕಿ, ಅನುತ್ ಎಸ್. ಶೆಟ್ಟಿ, ತಿಮ್ಮಯ್ಯ ಕೆ. ಬಿ., ರಾಹುಲ್ ಪಿ. ಕೋಟ್ಯಾನ್, ಪ್ರಶಾಂತ್ ಬ್ರ್ಯಾಗ್ಸ್, ಡಾ. ವಿನೋದ್ ನಾಯಕ್, ನಿತಿನ್ ಉಪಾಧ್ಯಾಯ, ಮೊಹಮ್ಮದ್ ಅನಿಸ್ ಇಬ್ರಾಹಿಂ, ಮೊಹಮ್ಮದ್ ಅಫ್ವಾನ್, ಝುಬೀರ್, ಅನುಪ್ ಎಸ್. ಶೆಟ್ಟಿ.

Leave a Reply

Please enter your comment!
Please enter your name here