ಉಡುಪಿ: ಮಟ್ಕಾ ದೊರೆ ಲಿಯೋ ಕರ್ನೇಲಿಯೊ ಬಂಧನ

ಉಡುಪಿ: ಉಡುಪಿಯ ಮಟ್ಕಾ ದೊರೆ ಎಂದೇ ಕುಖ್ಯಾತಿ ಪಡೆದಿರುವ ಲಿಯೋ ಕರ್ನೇಲಿಯೊನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಹಚರರಾದ ದಿವಾಕರ ಪೂಜಾರಿ ಹಾಗೂ ಬಾಬು ಆಚಾರಿ ಎಂಬವರನ್ನು ಬಂಧಿಸಲಾಗಿದೆ.

ನಿನ್ನೆ ಸಂಜೆ ಮಟ್ಕಾಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತಿದ್ದ ಅಂತೋನಿ ಡಿಸೋಜ ಎಂಬಾತನನ್ನು ಮಣಿಪಾಲದಲ್ಲಿ ಬಂಧಿಸಿದ್ದ ಪೊಲೀಸರು ಆತ ನೀಡಿದ ಮಾಹಿತಿಯಂತೆ ಲಿಯೋನನ್ನು ಬಂಧಿಸಿದ್ದಾರೆ. ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ತಾನು ಅಂಬಾಗಿಲಿನ ಲಿಯೋಗೆ ನೀಡುತ್ತಿದ್ದಾಗಿ ಆತ ಹೇಳಿಕೆಯಲ್ಲಿ ತಿಳಿಸಿದ್ದ. ಲಿಯೋ ಹಾಗೂ ಇನ್ನಿಬ್ಬರೊಂದಿಗೆ ಅಂಬಾಸಿಡರ್ ಕಾರು, ಒಂದು ಸ್ಕೂಟರ್ ಹಾಗೂ ಒಂದು ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನವನ್ನು ಉಡುಪಿ ಎಸ್‌ಪಿ ಅಣ್ಣಾಮಲೈ ಧೃಡಪಡಿಸಿದ್ದಾರೆ.

Leave a Reply