ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು – ಜಿಗ್ನೇಶ್ ಮೆವಾನಿ

ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು – ಜಿಗ್ನೇಶ್ ಮೆವಾನಿ

ಮೋದಿಯವರ ಸಬಕಾ ಸಾತ್ ಸಬಕಾ ವಿಕಾಸ್ ಘೋಷಣೆ ಬದಲಾಗಿ ದಲಿತೊಂಕಾ ವಿನಾಶ್ ದಲಿತೋಕಾ ಸರ್ವನಾಶ್ – ಜಿಗ್ನೇಶ್ ಮೆವಾನಿ

ಉಡುಪಿ: ಪ್ರಧಾನಿ ನರೇಂಧ್ರ ಮೋದಿಯವರ ಸಬಕಾ ಸಾತ್ ಸಬಕಾ ವಿಕಾಸ್ ಘೋಷಣೆ ಸುಳ್ಳು ಬದಲಾಗಿ ದಲಿತೊಂಕಾ ವಿನಾಶ್ ದಲಿತೋಕಾ ಸರ್ವನಾಶ್ ಆಗಿದೆ ಎಂದು ಉನಾ ಚಳುವಳಿಯ ಹೋರಾಟಗಾರ ಜಿಗ್ನೇಶ್ ಮೆವಾನಿ ಹೇಳಿದರು.

ಅವರು ಉಡುಪಿಯಲ್ಲಿ ಆಯೋಜಿಸಿದ ಚಲೋ ಉಡುಪಿ ಜಾಥಾದ ಸಮಾರೋಪ ಸಮಾರಂಭವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿ ಪ್ರಮುಖ ಭಾಷಣ ಮಾಡಿದ ಅವರು ಗುಜರಾತ್ ಮಾದರಿ ಎನ್ನುವುದು ಸಂಪೂರ್ಣ ಸುಳ್ಳಿನ ಗೋಪುರಾವಾಗಿದೆ. ಕೋಮುವಾದಿ ಅಜೆಂಡಾ ಹೊಂದಿರುವ ಗುಜರಾತ್ ಗಲಭೆಯಲ್ಲಿ ಮೇಲ್ವರ್ಗದ ಹಾಗೂ ಹಿಂದೂ ಸಂಘಟನೆಗಳು ಪ್ರಚೋದನೆಗೆ ಒಳಗಾಗಿ ಇಂದು ಜೈಲಿಗೆ ಸೇರಿದವರು ಯಾವುದೇ ಬಿಜೆಪಿ ಸಂಘಪರಿವಾರದ ನಾಯಕರ ಮಕ್ಕಳಲ್ಲ ಬದಲಾಗಿ ಹಿಂದುಳೀದ ಜನಾಂಗದವರು. ಗುಜರಾತ್ ಗಲಭೇಯಲ್ಲಿ ಜೈಲಿಗೆ ಹೋದವರಲ್ಲಿ 2 ಬ್ರಾಹ್ಮಣ, 4 ಬನಿಯಾ, 17 ಪಟೇಳ್ 270 ಹಿಂದುಳೀದವರು 746 ಆದಿವಾಸಿ ದಲಿತರು ಹಾಗೂ 797 ಒಬಿಸಿ ಜನಾಂಗದವರು ಆದ್ದರಿಂದ ನಾವು ಹಿಂದೂ ಸಂಘಪರಿವಾರದವರ ಅಜೆಂಡಾವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

image013jigne-mewani-udupi-chalo-validicotry-20161009 image029jigne-mewani-udupi-chalo-validicotry-20161009 image057jigne-mewani-udupi-chalo-validicotry-20161009 image063jigne-mewani-udupi-chalo-validicotry-20161009 image086jigne-mewani-udupi-chalo-validicotry-20161009 image099jigne-mewani-udupi-chalo-validicotry-20161009 image100jigne-mewani-udupi-chalo-validicotry-20161009 image119jigne-mewani-udupi-chalo-validicotry-20161009 image120jigne-mewani-udupi-chalo-validicotry-20161009 image122jigne-mewani-udupi-chalo-validicotry-20161009 image131jigne-mewani-udupi-chalo-validicotry-20161009 image135jigne-mewani-udupi-chalo-validicotry-20161009 image136jigne-mewani-udupi-chalo-validicotry-20161009 image137jigne-mewani-udupi-chalo-validicotry-20161009 image147jigne-mewani-udupi-chalo-validicotry-20161009 image149jigne-mewani-udupi-chalo-validicotry-20161009 image159jigne-mewani-udupi-chalo-validicotry-20161009 image161jigne-mewani-udupi-chalo-validicotry-20161009 image163jigne-mewani-udupi-chalo-validicotry-20161009 image175jigne-mewani-udupi-chalo-validicotry-20161009

ಇಂದು ಗುಜರಾತ್ ಮಾದರಿ ಕೇವಲ ಗುಜರಾತ್ ಅಲ್ಲದೆ ದೇಶದಾದ್ಯಂತ ಚರ್ಚೆಯಾಗುತ್ತಿದೆ ಆದರೂ ಇಂದಿಗೂ ಗುಜರಾತಿನಲ್ಲಿ ಅಶ್ಪಶ್ರ್ಯತೆ ತಾಂಡವವಾಡುತ್ತಿದ. ಇಂದಗೂ ದಲಿತರು ಪೋಲಿಸ್ ಭದ್ರತೆಯಲ್ಲಿ ಬದುಕುತ್ತಿದ್ದಾರೆ. ಒಂದು ವೇಳೆ ಅವರ ಪೋಲಿಸ್ ಭದ್ರತೆಯನ್ನು ವಾಪಾಸು ಪಡೆದರು ಅವರಿಗೆ ಸಾವು ಕಟ್ಟಿಟ್ಟ ಬುತ್ತಿ. 2000-2014 ರವರೆಗೆ ಗುಜರಾತಿನಲ್ಲಿ 14000 ದಲಿತ ನಿಂದನೆ ಪ್ರಕರಣಗಳು ವರದಿಯಾಗಿದೆ.  ತಾನು ಸದಾ ಅಂಬೇಡ್ಕರ್ ಭಕ್ತ ಎಂದು ಪೋಸು ಕೊಡುವ ಮೋದಿ ದಲಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ಕುರಿತು ಬಾಯಿ ಬಿಡುತ್ತಲ್ಲ ಅಲ್ಲದೆ ಅವರನ್ನು ಭೇಟಿ ಮಾಡುವ ಸೌಜನ್ಯವನ್ನುಕೂಡ ತೋರಿಲ್ಲ. ಗುಜರಾತಿನ ಹಲವು ಭಾಗಗಳಲ್ಲಿ ಇಂದಿಗೂ ದಲಿತರು ಮಲ ಹೊರುವ ಪದ್ದತಿ ಜಾರಿಯಲ್ಲಿದೆ.

ಸಂಘಪರಿವಾರದ ಶಕ್ತಿಗಳು ಕೋಮುವಾದ ವಿಷಬೀಜವನ್ನು ಬಿತ್ತಿ ಜಾತಿ ಧರ್ಮ ಹಾಗೂ ಗೋವಿನ ಹೆಸರಿನಲ್ಲಿ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡುತ್ತಿವೆ. ಗುಜರಾತಿನಲ್ಲಿ ದಲಿತರು ದನದ ಕಳೆಬರವನ್ನು ಎತ್ತಿದ್ದಕ್ಕಾಗಿ ಅವರನ್ನು ಅಮಾನುಷವಾಗಿ ನಡೆಸಿಕೊಂಡರು ಆಗ ನರೆಂದ್ರ ಮೋದಿಯವರ ದಲಿತ ಭಕ್ತಿ ಎಲ್ಲಿಗೆ ಹೋಗಿತ್ತು. ಅಚ್ಚೆ ದಿನ್ ತರುತ್ಥೆನೆ ಎಂದ ನರೆಂದ್ರಮೋದಿಯ ಭಕ್ತರು ಈಗ ನಾಪತ್ತೆಯಾಗಿದ್ದಾರೆ. ಉಡುಪಿ ಚಲೊದಿಂದ ನಡೆಸುವ ಮೂಲಕ ಉಡುಪಿಯನ್ನು ದಲಿತರು ಮಲಿನ ಮಾಡಿದ್ದು ಅದನ್ನು ಶುಚಿಗೊಳಿಸುವ ಕೆಲಸವನ್ನು ಮಾಡುತ್ತೇವೆ ಎಂದು ಕರ್ನಾಟಕದ ನಮೋಬ್ರಿಗೆಡ್ ನಾಯಕರೋರ್ವರು ಹೇಳಿದ್ದಾರೆ ಆದರೆ ಅವರು ಶುಚಿಮಾಡಬೇಕಾಗಿರುವುದು ಉಡುಪಿಯನ್ನು ಅಲ್ಲ ಬದಲಾಗಿ ಅವರ ಮನಸ್ಸನ್ನು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ದಲಿತರು ಇವರ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ದಲಿತರು ಒಟ್ಟಾಗಿ ಒಗ್ಗಾಟ್ಟಿಗಿ ತಮ್ಮ ಹಕ್ಕಿಕಾಗಿ ಹೋರಾಟ ಮಾಡಿದಾಗ ಮಾತ್ರ ಅವರುಗಳ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತದೆ. ಊನಾ ಮಾದರಿಯ ಹೋರಾಟ ದೇಶದ ಮೂಲೆಮೂಲೆಗಳಲ್ಲಿ ನಡೆಯಬೇಕಾಗಿದೆ. ಕೇವಲ ದಲಿತರ ಭೂಮಿಗಾಗಿ ಮಾತ್ರ ಹೋರಾಟ ನಡೆಸದೆ ಅವರ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಕೂಡ ಹೋರಾಟ ರೂಪಿಸಬೇಕಾಗಿದೆ. ಊನ ಹೋರಾಟದ ತೀವೃತೆಯನ್ನು ಅರಿತ ಮೋದಿ ದಲಿತರಿಗೆ ಹೊಡೆಯಬೇಡಿ ಬದಲಾಗಿ ನನಗೆ ಹೊಡೆಯಿರಿ ಎಂದು ಪೋಸು ನೀಡುತ್ತಾರೆ. ಅವರು ಹೀಗೆ ಹೇಳಲು ಕಾರಣವಾಗಿರುವುದು ದಲಿತರ ಒಗ್ಗಟ್ಟು ಅದೇ ಒಗ್ಗಟ್ಟು ಕರ್ನಾಟಕದಲ್ಲಿ ಕೂಡ ಆಗಬೇಕಾಗಿದೆ. ಇಂದು ದಲಿತರಿಗೆ ಲಭಿಸಬೇಕಾದ ಭೂಮಿ ಅದಾನಿ ಅಂಬಾನಿಗಳಿಗೆ ಲಭಿಸುತ್ತಿದೆ ಇದರ ವಿರುದ್ದ ತೀವ್ರವಾದ ಹೋರಾಟ ನಡೆಸಬೇಕು

ಕರ್ನಾಟಕದಲ್ಲಿ ದಲಿತರು ಆದಿವಾಸಿಗಳಿಗೆ ಗ್ರಾಮ ಮಟ್ಟದಲ್ಲಿ 75% ಭೂಮಿ ಮೀಸಲಿರಿಸಬೇಕು ಎಂಬ ಕಾಯಿದೆ ಇದ್ದರೂ ಕೂಡ ಅದು ಅವರಿಗೆ ಸಿಗುತ್ತಿಲ್ಲ ಅದನ್ನು ಪಡೆಯುಲು ಸೂಕ್ತ ಹೋರಾಟ ರೂಪಿಸಬೇಕಾದ ಅಗತ್ಯ ಇದೆ. ಗುಜರಾತ್, ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಗೋರಕ್ಷಕರ ಹಾವಳಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾಗಿದ್ದು ಇದರ ವಿರುದ್ದ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಅಂತಹ ಸಮಿತಿಗಳನ್ನು ಬರ್ಕಾಸ್ತುಗೊಳಿಸುವ ತನಕ ಹೋರಾಟ ನಡೆಸಬೇಕು.

ಇದೊಂದು ಹೊಸ ಚಳವಳಿ. ಗುಜರಾತ್’ನ ದಲಿತರು ಯಾವ ರೀತಿ ಚಳವಳಿಯನ್ನು ಮಾಡಿದರೋ, ಸರ್ಕಾರಕ್ಕೆ ಬಲವಾದ ಏಟನ್ನು ಕೊಟ್ಟರೋ, ಅಂತಹ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಇದು ಎಲ್ಲ ದಮನಿತರ ದನಿಯಾಗಬೇಕು. ದಲಿತ, ಆದಿವಾಸಿ, ಕೃಷಿಕರ ಚಳವಳಿಯಾಗಬೇಕು.

ಗುಜರಾತ್  ದಲಿತರು ಏನು ಮಾಡಿದ್ದಾರೋ ಇಲ್ಲಿಯು ಕೂಡ ನೀವು ಮಾಡಬೇಕು. ಗುಜರಾತ್ ನಲ್ಲಿ ದಲಿತ – ಆದಿವಾಸಿ ಕೃಷಿಕರ ಸಂಘರ್ಷ ಜೊತೆಯಾಗಿ ಸಾಗಿದೆ. ಇದು ಕರ್ನಾಟಕದ ಹಿಂದುತ್ವ ಪ್ರಯೋಗ ಶಾಲೆ. ಇಲ್ಲಿ ನೀವೆಲ್ಲರೂ ಸೇರಿದ್ದೀರಿ. ಇದು ಒಳ್ಳೆಯ ಬೆಳವಣಿಗೆ,

ನಾಗಮಂಡಲದಲ್ಲಿ ಹೇಗೆ ನಾಗನ ಆಡಿಸಿತ್ತಾರೋ ಹಾಗೆಯೇ ಮೋದಿ ಇಡೀ ವ್ಯವಸ್ಥೆಯನ್ನು ನಾಗಮಂಗಲದ ಹಾಗೆ ಆಡಿಸುತ್ತಿದ್ದಾರೆ. ಅದು  ಇಲ್ಲಿ ಬರುವ ಮೊದಲೇ ನಾವೆಲ್ಲ ಸೇರಿ ಅದನ್ನು ನಾಶ ಮಾಡಬೇಕು.ನಾವೆಲ್ಲರೂ ಇಂದು ಒಟ್ಟಾಗಿದ್ದೇವೆ. ನಿಮ್ಮ ದನದ ಬಾಲವನ್ನಿ ನೀವೆ ಇಟ್ಟುಕೊಳ್ಳಿ, ನಮ್ಮ ಜಮೀನನ್ನು ನಮಗೆ ಕೊಡಿ’ ಅಂತ ಗಟ್ಟಿದನಿಯಲ್ಲಿ ನಾವು ಹೇಳಬೇಕಿದೆ. ಈ ಐಕ್ಯತೆಯನ್ನು ನೀವು ಕಾಪಾಡಬೇಕು. ಇಲ್ಲವಾದರೆ ನೀವು ದಲಿತರು ಬದುಕಲು ಸಾಧ್ಯವಿಲ್ಲ.

ಚಲೋ ಉಡುಪಿಯ ಹೋರಾಟದ ಮೂಲಕ ಕರ್ನಾಟಕ ಸರಕಾರಕ್ಕೆ ಆಗ್ರಹ ಮಾಡಿದ ಮೇವಾನಿ ಈ ವರೆಗೆ ಕರ್ನಾಟಕ ಸರಕಾರ ದಲಿತರಿಗೆ ಮೀಸಲಿರಿಸಿದ ಭೂಮಿಯನ್ನು ಎಷ್ಟು ದಲಿತರಿಗೆ ಹಂಚಿದೆ ಮತ್ತು ಎಷ್ಟು ಕಂಪೆನಿಗಳಿಗೆ ಹಂಚಿದೆ ಎಂಬ ಕುರಿತು ಶ್ವೇತಪತ್ರ ಹೊರಡಿಸಬೇಕು ಅಲ್ಲದೆ ಕರ್ನಾಟಕದಾದ್ಯಂತ ಇರುವ ಗೋರಕ್ಷಾ ಸಮಿತಿಗಳನ್ನು ಸರಕಾರ ಬರ್ಕಾಸ್ತುಗೋಳಿಸಬೇಕು ಎಂದ ಅವರು ಮುಂದಿನ ಎರಡು ತಿಂಗಳ ಒಳಗೆ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಪಂಕ್ತಿಭೇಧವನ್ನು ಸಂಪೂರ್ಣ ನಿಷೇಧಿಸಬೇಕು ಇದಕ್ಕೆ ತಪ್ಪಿದಲ್ಲಿ ಈದರ ಕುರಿತು ಹೋರಾಟವನ್ನು ರೂಪಿಸಿ ತಾನೇ ಖುದ್ದಾಗಿ ಮಠವನ್ನು ಪ್ರವೇಶ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಾಥಾದ ಸಂಚಾಲಕ ಬಿ. ಆರ್ .ಭಾಸ್ಕರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಜಾತಿ, ಧರ್ಮ ದೇವರನ್ನು ಮುಂದಿಟ್ಟಡುಕೊಂಡು ಈ ಮನುವಾಧಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ದ ಧ್ವನಿ ಎತ್ತುವುದು ನಮ್ಮೆಲ್ಲರ  ಕರ್ತವ್ಯ . ಕ್ರೈಸ್ತರ ಚರ್ಚುಗಳಲ್ಲಿ ದಾಂಧಲೆ ಮಾಡುವುದೇ ಇವರಿಗೆ ದೇಶಭಕ್ತಿಯಾದರೆ ನಮಗೆ ಆ ದೇಶ ಭಕ್ತಿ ಬೇಡ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಮನುವಾದಿ ಮನಸ್ಥಿತಿಯನ್ನು ನಾವು ಧ್ವೇಷಿಸಬೇಕಾತ್ತದೆ. ದಲಿತರನ್ನು ಸುಡುವುದೇ ನಿಮಗೆ ಧರ್ಮವಾದರೆ ಆ ಧರ್ಮಕ್ಕೆ ಬೆಂಕಿ ಬೀಳಲಿ. ಮಹಿಳೆಯರನ್ನು ದ್ವೇಷಿಸುವುದೇ ನಿಮಗೆ ಧರ್ಮವಾದರೆ,  ಆ ಧರ್ಮಕ್ಕೆ ಧಿಕ್ಕಾರ.  ದನದ ಮಾಂಸ ತಿಂದರು ಎಂಬ ಕಾರಣಕ್ಕೆ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಾರೆ ಅಂತಾದರೆ, ಜನರ ತಿನ್ನುವ ಹಕ್ಕನ್ನು ಕಸಿದುಕೊಳ್ಳುವ  ರಾಜಕಾರಣದ ವಿರುದ್ದ ಈ ಸಮಾವೇಶ ನಡೆಯುತ್ತಿದೆ. ಈ ದೇಶದಲ್ಲಿ ಪ್ರತಿದಿನ  ದನದ ಮಾಂಸ ರಫ್ತಾಗುತ್ತಿದೆ. ದನವನ್ನು ಕಾಪಾಡುವುದೇ ನಮ್ಮ ಧರ್ಮವನ್ನು ಕಾಪಾಡಿದ ಹಾಗೆ ಎಂದು ಗಂಟಲು ಹರಿದು ಕಿರುಚಿಕೊಳ್ಳುವುದು,  ಇನ್ನೊಂದೆಡೆ ದನದ ಮಾಂಸವನ್ನು ರಫ್ತು ಮಾಡುವುದು. ಈ ನಾಟಕೀಯ ರಾಜಕೀಯಕ್ಕೆ ದಲಿತ, ಹಿಂದುಳಿದ ಯುವಕರನ್ನು ಬಳಸಿಕೊಳ್ಳುವ ನಿಮ್ಮಷ್ಟು ನೀಚರು ಬೇರಾರು ಇಲ್ಲ. ದಲಿತರು, ಮುಸ್ಲಿಮರು, ಅಲ್ಪಸಂಖ್ಯಾತರು, ನಾವೆಲ್ಲಾ ಒಂದಾಗಿದ್ದೇವೆ. ಇನ್ನು ನೀವು ಹಿಂದುಳಿದ ದಲಿತ ಯುವಕರನ್ನು ದಾರಿ ತಪ್ಪಿಸುವುದನ್ನು ಇಂದೇ ನಿಲ್ಲಿಸಬೇಕು ಎಂದರು.

ವಿಕಾಸ್ ಮೌರ್ಯ ಮಾತನಾಡಿ ಮೊದಲು ಸಂಘಪರಿವಾರದ ದೆವ್ವಗಳು ರಸ್ತೆಯಲ್ಲಿ ನಿಂತು ಬೆದರಿಸುತ್ತಿದ್ದು ಈಗ ಮನೆಯ ಫ್ರಿಡ್ಜ್, ತಟ್ಟೆಯನ್ನು ಹುಡುಕುವ ಕೆಲಸ ಮಾಡುತ್ತಿವೆ ಇದನ್ನು ನಾವೆಲ್ಲಾ ಒಟ್ಟಾಗಿ ನಿಂತು ನಿಲ್ಲಿಸಬೇಕಾಗಿದೆ. ಭಾರತ ಗೆಲ್ಲುವುದು ಜಾತಿಯ ವಿಶಾಶವಾದಾಗ ಮಾತ್ರ ಆದ್ದರಿಂದ ಭಾರತವನ್ನು ಬ್ರಾಹ್ಮಣವಾದ, ಬಂಡವಾಳಶಾಹಿತ್ವ ಹಾಗೂ ಕೋಮುವಾದದಿಂದ ಬಿಡುಗಡೆಗೊಳಿಸಬೇಕಾಗಿದೆ. ಅಂಬೇಡ್ಕರ್ ಕನಸು ನನಸು ಮಾಡಲು ಒಗ್ಗಟಿನಿಂದ ದುಡಿದಾಗ ಭಾರತ ಶಾಂತಿಯ ತೋಟವಾಗುತ್ತದೆ ಎಂದರು.

4 Comments

  1. This threat is just another attempt by this group of fading activists to be relevant in today’s society. This is not 1989 anymore to go around harassing individuals and institutions with the help of kannada tabloids. Society has moved on and there are more important things to focus on. Was it AK Subbyya in one of those pics? He is still around?

  2. Pungthi Bhedha Yake?
    Read the articles on how the sewage is disposed off in Karnataka. First the plastic and other products are separated, then the water is drained and the end product (pure shit) is dried and sold to farmers as manure to be used for growing vegetables, Mattu Gulla etc. These vegetables are used to prepare Sambaar. Do they separate the shit as Bhrahmin shit, Kshatria shit, Vaisha shit, Sudra shit or Dalit shit? No. All shit goes to grow Mattu Gulla and other vegetables to be used in Sambaar. Then why this Pungthi Bheda?

    • Do they separate the Shit as Brahmin shit…..? No.. – Mr. NN

      No shit, man! Thank God I stick to my beepu, chickaanu, muttonu, eggu etc. And say, this Mattu Gulla and sambar.. it that why the Beepu club produces so many geniuses?

  3. ಪೇಜಾವರ ಸ್ವಾಮೀಜಿ ಪಂಕ್ತಿಬೇಧ ಕೇವಲ ಪ್ರಚಾರಕ್ಕಾಗಿ ವಿರೋಧಿಸುತ್ತಾರೆ ಆದರೆ ನೇರ ಅದನ್ನು ವಿರೋಧಿಸದೆ ತನ್ನ ಮಠದಲ್ಲಯೆ ಅದಕ್ಕೆ ಅವಕಾಶ ನೀಡುತ್ತಾರೆ ಇದು ಅವರ ದ್ವಂದ ನೀತಿ. ಮೇವಾನಿ ಇದರ ವಿರುದ್ದ ಊನಾ ಮಾದರಿಯ ಹೋರಾಟ ಉಡುಪಿಯಲ್ಲಿ ನಡೆಸಬೇಕು.

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here