ಉಡುಪಿ: ಮಲಬಾರ್ ಗೋಲ್ಡ್ & ಡೈಮಂಡ್ಸ್ 22 ನೇ ವಾರ್ಷಿಕೋತ್ಸವ

ಉಡುಪಿ: ಹೆಸರಾಂತ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದರ 22 ನೇ ವಾರ್ಷೀಕೋತ್ಸವ ಹಾಗೂ ಲಕ್ಕಿ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆ ಉಡುಪಿ ಹಳೆ ಗೀತಾಂಜಲಿ ಟಾಕೀಸಿನ ಬಳಿ ಇರುವ ಮಲಬಾರ್ ಮಳಿಗೆಯಲ್ಲಿ ಶುಕ್ರವಾರ ಜರುಗಿತು.

malabargold 27-11-2015 11-46-31 malabargold 27-11-2015 11-47-50 malabargold 27-11-2015 11-51-40

ಕಾರ್ಯಕ್ರಮವನ್ನು ಉಡುಪಿಯ ಸಬ್ ರಿಜಿಸ್ಟ್ರಾರ್ ಜಾನಕೀ ಭಟ್ ಕೇಕನ್ನು ಕತ್ತರಿಸುವುದರ ಮೂಲಕ ಉದ್ಘಾಟಿಸಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆ ಕೇವಲ ಚಿನ್ನಾಭರಣದ ಮಾರಟದ ಗುರಿಯನ್ನು ಮಾತ್ರ ಹೊಂದಿರದೆ ಬಂದ ಗ್ರಾಹಕರನ್ನು ಉತ್ತಮ ಪ್ರೀತಿ ಹಾಗೂ ನಗುಮೊಗದ ಸೇವೆ ನೀಡಿ ಸತ್ಕರಿಸುತ್ತಾರೆ. ಇದರಿಂದಾಗಿ ಬಂದ ಗ್ರಾಹಕರಿಗೆ ಮತ್ತೊಮ್ಮೆ ಬರುವ ಬಯಕೆ ಉಂಟಾಗುತ್ತದೆ ಇವರ ಸೇವೆ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದು, ಮಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಇದರ ಕೀರ್ತಿ ಏರಲಿ ಎಂದು ಶುಭ ಹಾರೈಸಿದರು.
ಇದೇ ವೇಳೆಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ ಇದರ ಮೂರನೇ ವಾರದ ಅದೃಷ್ಟ ಶಾಲಿ ವಿಜೇತರಾದ ಅಜಯ್ ಕುಮಾರ್ ಮೆಹೋತ್ರಾ ಅವರಿಗೆ ಜಾನಕಿ ಭಟ್ 100 ಗ್ರಾಂ ಗೋಲ್ಡ್ ಬಾರ್ ಬಹುಮಾನವನ್ನು ವಿತರಣೆ ಮಾಡಿದರು.
ಕಾರ್ಯಕ್ರಮಕ್ಕೆ ಮುನ್ನ 22 ನೇ ವರ್ಷದ ಅಂಗವಾಗಿ 22 ಮಂದಿ ಗ್ರಾಹಕರಿಂದ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸದರು. ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರೆಹಮಾನ್, ಸಹಾಯಕ ಮುಖ್ಯಸ್ಥ ಹೇಮಂತ್ ಉಪಸ್ಥಿರಿದ್ದರು.

Leave a Reply

Please enter your comment!
Please enter your name here