ಉಡುಪಿ: ಮಲ್ಪೆ ಕೊಡವೂರು ರೋಟರಿ ಪದಪ್ರದಾನ ಕಾರ್ಯಕ್ರಮ

ಉಡುಪಿ: 2015-2016ನೇ ಸಾಲಿನ ರೋಟರಿ ಮಲ್ಪೆ ಕೊಡವೂರಿನ ನೂತನ ಅದ್ಯಕ್ಷ ಹಾಗು ಪದಾಧಿಕಾರಿಗಳ ಪದಪ್ರದಾನ ಸಮಾರಂಭ  ಕೊಡವೂರಿನ ಶ್ರೀ ಶಂಕರನಾರಯಣ ದೇವಸ್ಥಾನದಲ್ಲಿ ಜರುಗಿತು.

0JK_5369 (Copy) 0JK_5401 (Copy) 0JK_5409 (Copy) 0JK_5418 (Copy) 0JK_5431 (Copy) 0JK_5451 (Copy) 0JK_5456 (Copy) 0JK_5464 (Copy) 0JK_5483 (Copy) 0JK_5495 (Copy) 0JK_5505 (Copy) 0JK_5518 (Copy) 0JK_5521 (Copy) 0JK_5530 (Copy) 0JK_5541 (Copy) 0JK_5546 (Copy) 0JK_5558 (Copy) 0JK_5564 (Copy) 0JK_5578 (Copy) 0JK_5599 (Copy)

ಪದಪ್ರದಾನ ಅಧಿಕಾರಿಯಾಗಿ ರೋಟರಿ 3180 ಜಿಲ್ಲಾ ಕಾರ್ಯದರ್ಶಿ ಪ್ರೊ.ಎಸ್.ಬಾಲಕೃಷ್ಣ ಮುದ್ದೋಡಿ ಉಪಸ್ಥಿತರಿದ್ದು ನಾವೆಲ್ಲ ವಿವಿದ ಹಂತದಲ್ಲಿ ಸಮಾಜಿಕ ಕಾರ್ಯಗಳನ್ನು ಮಾಡುತ್ತ ರೋಟರಿಯ ಆಶಯವನ್ನು ಪೂರಕಗೊಳಿಸಿ ಉತ್ತುಂಗಕ್ಕೆ ಏರಿಸಬೇಕು ಎಂದು ನೂತನ ಅದ್ಯಕ್ಷರಾದ ಸುದರ್ಶನ್ ರಾವ್ ಕಾರ್ಯದರ್ಶಿ ಜನಾರ್ದನ ಕೊಡವೂರು ಇವರಿಗೆ ಪದಪ್ರದಾನ ಮಾಡಿ ರೋಟರಿ ಕ್ಲಬ್ ನ ಮೂಲ ಉದ್ದೇಶ ಸಮಾಜಕ್ಕೆ ಉಪಕಾರ ಮಾಡುವಂತ ದ್ಯೇಯಗಳನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯೊನ್ಮುಕವಾಗಿರುವ ಎಲ್ಲ ಸದಸ್ಯರ ಕಾರ್ಯ ಶ್ಲಾಘನಿಯ ಎಂದರು.

ಲಯನ್ಸ್ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಮಣಿಪಾಲ ವಿಶ್ವವಿದ್ಯಾನಿಲಯದ ಯೋಗ ವಿಭಾಗದ ಸಹಾಯಕ ಪ್ರೋಫೆಸರ್ ಅನ್ನಪೂರ್ಣ ಆಚಾರ್ಯ ಮತ್ತು ಸಮಾಜ ಸೇವಕ ದಿನೇಶ್ ಕುಮಾರ್ ಹಾಗು ವಲಯ ಪ್ರತಿನಿಧಿಯಾಗಿ ರೋಟರಿ ಮಲ್ಪೆ ಕೊಡವೂರು ಮಾಜಿ ಅಧ್ಯಕೆ ಪೂರ್ಣಿಮಾ ಜನಾರ್ದನ್ ಇವರುಗಳನ್ನು ಅಭಿನಂದಿಸಲಾಯಿತು. ನಾಡೊಜ ಡಾ.ಜಿ ಶಂಕರ್ ಮತ್ತು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಅಣ್ಣಾಮಲೈ ಅವರನ್ನು ಗೌರವಿಸಲಾಯಿತು. ಕಳೆದ ಸಾಲಿನ ಪರಿಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಸ್ಥಳೀಯ ಪ್ರತಿಬಾವಂತ ಹಾಗು ಸಾಂಸ್ಕøತಿಕ, ಕ್ರೀಡೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಸಹಾಯಕ ಗವರ್ನರ್ ಗಳಾದ ಅಲೆನ್ ಲೂಯೀಸ್ ಕ್ಲಬ್‍ನ ಮುಖವಾಣಿ ವೇವ್ಸ್ ಬಿಡುಗಡೆಗೊಳಸಿದರು.

ದಿನೇಶ್ ಹೆಗ್ಡೆ ಅತ್ರಾಡಿ,ಯು ಕೆ ಭಾಸ್ಕರ್ ಉಪಸ್ಥಿತರಿದ್ದರು. ನಿಕಟ ಪೂರ್ವ ಅದ್ಯಕ್ಷ ಸುದಾಕರ್ ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಯೊಶೋದ ಕೇಶವ್ ವರದಿ ವಾಚಿಸಿದರು.

ಜನಾರ್ದನ್ ಕೊಡವೂರು ವಂದಿಸಿದರು. ರಮೇಶ್ ಕೆ. ನಿರೂಪಿಸಿದರು. ಸಮನ್ವಿತ ಭಾಗವತ್ ಸ್ವಾಗತ ನೃತ್ಯ ನೆರವೇರಿಸಿದರು. ಮಹೇಶ್ ಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು.

Leave a Reply