ಉಡುಪಿ: ಮಲ್ಲಾರು ಗರೋಡಿ ಹೊರೆಕಾಣಿಕೆ ಮೆರವಣಿಗೆಗೆ ಮುಸ್ಲಿಂ ಯುವಕರಿಂದ ತಂಪು ಪಾನೀಯ ವಿತರಣೆ

ಉಡುಪಿ: ತುಳುನಾಡಿನ ಹೆಸರಾಂತ ಕಾಪು ಮಲ್ಲಾರು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ನವೀರಕಣದ ಪ್ರಯುಕ್ತ ಜನವರಿ 22 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆಗೆ ಮುಸ್ಲಿಂ ಭಾಂಧವರು ತಂಪು ಪಾನಿಯ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಬ್ರಹ್ಮಕಲಶೋತ್ಸವಕ್ಕೆ ಬುಧವಾರ ಕಾಪು ಪರಿಸರದ ಭಕ್ತಾದಿಗಳು ಲಕ್ಷ್ಮೀ ಜನಾರ್ಧನ ದೇವಸ್ಥಾನದಿಂದ ಹೊರೆಕಾಣಿಕೆ ಶೋಭಾಯಾತ್ರೆ ನಡೆಸಿದ್ದು, ನೂರಾರು ಸಂಖ್ಯೆಯ ಹಿಂದೂ ಭಾಂಧವರು ಭಾಗವಹಿಸಿದ್ದರು. ಭಾಗವಹಿಸಿದ ಹಿಂದೂ ಬಾಂಧವರಿಗೆ ಮಲ್ಲಾರಿನ ತಂಝೀಮ್ ಫ್ರೆಂಡ್ಸ್ ಮತ್ತು ಸೈಯ್ಯದ್ ಶಾಹಿದ್ ಮಲ್ಲಾರು  ನೇತೃತ್ವದ ತಂಡ ತಂಪು ಪಾನೀಯ ನೀಡಿದರು ಪರಸ್ಪರ ಸೌಹಾರ್ದತೆ ಮೆರೆದಿದ್ದಾರೆ.

Leave a Reply