ಉಡುಪಿ: ಮೌಂಟ್ ರೋಸರಿ ಶಾಲೆಯಿಂದ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರಿಗೆ ಶ್ರದ್ಧಾಂಜಲಿ

ಉಡುಪಿ: ಸಿಯಾಚಿನ್ ಗ್ಲೇಸಿಯರ್‍ನಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಹಿಮಪಾತದಲ್ಲಿ ಪವಾಡ ಸದೃಶವಾಗಿ ಬದುಕಿ, ನಾಲ್ಕು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಹುತಾತ್ಮರಾದ ಕರ್ನಾಟಕದ ವೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರಿಗೆ ಶುಕ್ರವಾರ ಕಲ್ಯಾಣಪುರ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸಿದರು.

koppad-11-02-2016 (2) koppad-11-02-2016 (3) koppad-11-02-2016 (4) koppad-11-02-2016

ಈ ವೇಳೆ ಶೃದ್ಧಾಂಜಲಿ ಅರ್ಪಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಡ್ರಿಯನ್ ಸೆರಾವೊ ಅವರು ಹನುಮಂತಪ್ಪ ಕೊಪ್ಪದ್ ಅವರ ಅಸಾಧರಾಣ ಸ್ಪೂರ್ತಿ ಹಾಗೂ ಸಂಕಲ್ಪಶಕ್ತಿ ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಅತ್ಯಂತ ಕಠೋರವಾದ ಹಿಮಪ್ರದೇಶದಲ್ಲಿ ದೇಶದ ರಕ್ಷಣೆಗಾಗಿ ನಿಯೋಜನೆಗೊಂಡು ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಹುತಾತ್ಮರಾದ ಅವರು ನಿಜಕ್ಕೂ ನಮಗೆಲ್ಲರಿಗೂ ರಿಯಲ್ ಹೀರೊ. ಅವರಿಂದ ಇಂದಿನ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ತಾವು ಕೂಡ ದೇಶ ರಕ್ಷಣೆ ಹಾಗೂ ಭಾರತದ ಗೌರವವನ್ನು ಎಲ್ಲಾ ವಿಧದಲ್ಲಿ ಕಾಪಾಡಲು ಸದಾ ಕಟಿಬದ್ದರಾಗಿರುವಂತೆ ಪಣತೊಡಬೇಕು ಎಂದು ಹೇಳಿದರು.
ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ಎರಡು ನಿಮಿಷ ಮೌನಾಚರಣೆ ನಡೆಸಿ ಮೃತ ವೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರಿಗೆ ಶೃದ್ಧಾಂಜಲಿ ಅರ್ಪಿಸಿದರು. ಶಾಲೆಯ ಸಹ ಶಿಕ್ಷಕಿಯರಾದ ಸಿಸ್ಟರ್ ಅಸುಂತಾ, ಮೀನಾ, ನ್ಯಾನ್ಸಿ, ನಾಗರಾಜ್, ಲವೀನಾ, ಡೆನ್ಸ್‍ಲಿ, ಸುನಿಲ್ ಪೂಜಾರಿ, ಶಾಲಾ ನಾಯಕಿ ನಿಕಿತಾ ರಾವ್ ಉಪನಾಯಕ ರಾಹುಲ್ ರಾಜ್ ಉಪಸ್ಥಿತರಿದ್ದರು.

Leave a Reply