ಉಡುಪಿ : ಯೋಧ ಹನುಮಂತಪ್ಪ ಶೀಘ್ರ ಗುಣಮುಖರಾಗುವಂತೆ ನಾಗರಿಕ ಸಮಿತಿಯಿಂದವಿಶೇಷ ಪ್ರಾರ್ಥನೆ

ಉಡುಪಿ : ಸಿಯಾಚಿನ್‌ ಹಿಮಪಾತದಲ್ಲಿ ಪವಾಡಸದೃಶವಾಗಿ ಚಿಂತಾಜನಕ ಸ್ಥಿತಿಯಲ್ಲಿ ಜೀವಂತವಾಗಿ ಪತ್ತೆಯಾದ ಕನ್ನಡಿಗ ಯೋಧ ಹನುಮಂತಪ್ಪ ಕೊಪ್ಪದ ಶೀಘ್ರ ಗುಣಮುಖರಾಗುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಬುಧವಾರ ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಸ್ಥಾನದಲ್ಲಿ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶಕ್ಕಾಗಿ ಸೇವೆ ಸಲ್ಲಿಸಿ ಪ್ರಾಣಕ್ಕೆ ಅಪಾಯ ತಂದೊಡ್ಡಿಧಿ ಕೊಂಡಿರುವ ಯೋಧ ಹನುಮಂತಪ್ಪರಿಗೆ ಪ್ರಾರ್ಥನೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಹನುಮಂತಪ್ಪ ಚೇತರಿಸಿಕೊಂಡು ಮತ್ತೆ ದೇಶ ಸೇವೆ ಮಾಡುವಂತೆ ಶ್ರೀಕೃಷ್ಣ ಹಾಗೂ ಅನಂತೇಶ್ವರ ದೇವರು ಅನುಗ್ರಹಿಸಲಿ ಎಂದು ಪೇಜಾವರ ಶ್ರೀ ಹಾರೈಸಿದರು. ಸಿಯಾಚಿನ್‌ ಪ್ರದೇಶದಿಂದ ಸೇನೆಯನ್ನು ಹಿಂದೆಗೆದು ಕೊಳ್ಳುವ ವಿಚಾರದಲ್ಲಿ ಎರಡು ದೇಶಗಳ ಮಧ್ಯೆ ಮಾತುಕತೆಯಾಗಬೇಕು. ಭಾರತವು ಸೇನೆ ಹಿಂದೆಗೆದುಕೊಳ್ಳಲು ಸಿದ್ಧವಿದೆ. ಆದರೆ ಪಾಕಿಸ್ತಾನವು ಇದಕ್ಕೆ ಸ್ಪಂದಿಸುವುದು ಮುಖ್ಯ ಎಂದು ಅವರು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.

Leave a Reply